ಧಾರವಾಡ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕಗೊಳಿಸಿದ ಸರಕಾರದ ನಿರ್ಧಾರವನ್ನು ಮಾಜಿಮಹಾಪೌರರು ಈರೇಶ ಅಂಚಟಗೇರಿ ಸ್ವಾಗತಿಸಿದ್ದಾರೆ.
ಆದರೆ ಕ್ಷೇತ್ರ ವಿಂಗಡನೆ 1ನೆ ವಾರ್ಡಿನಿಂದ 26ನೆ ವಾರ್ಡಿಗೆ ಮಾತ್ರ ಸೀಮಿತಗೊಳಿಸದೆ, ಭೌಗೋಳಿಕವಾಗಿ ಧಾರವಾಡದ ಸಮಗ್ರ ಅಭಿವೃದ್ಧಿಗಾಗಿ ಬೇಲೂರು ವಸಾಹತು ಪ್ರದೇಶ, ಹೈಕೋರ್ಟ್ ಭಾಗದಿಂದ ನವನಗರದವರೆಗೆ, ಮಹಾನಗರ ಪಾಲಿಕೆಯಾಗಿ ರಚಿಸಿದರೆ ಸರಕಾರದ ಸೂಕ್ತ ನಿರ್ಣಯವಾಗಿರುತ್ತದೆ. ಇದರಿಂದ ಧಾರವಾಡ ಸಮಗ್ರ ಬೆಳವಣಿಗೆಗೆ ಅನುಕೂಲಕರವಾಗಿರುತ್ತದೆ ಎಂದಿದ್ದಾರೆ.
ಕೇವಲ ಕೆಲವೇ ವಾರ್ಡಗಳಿಗೆ ಸೀಮಿತಗೊಳಿಸದೇ ಧಾರವಾಡದ ಬೆಳವಣಿಗೆಗೆ ಅನುಕೂಲಕರವಾಗುವ ದೃಷ್ಟಿಯಿಂದ, ಹುಬ್ಬಳ್ಳಿ ಧಾರವಾಡ ಸಮಾನಾಂತರ ದೃಷ್ಟಿಯಿಂದ ಕಾಣಲು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವನ್ನು ಪ್ರತ್ಯೇಕಗೊಳಿಸಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕೆಂದು ಅದೇಶಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮಾಜಿಮಹಾಪೌರರು ಈರೇಶ ಅಂಚಟಗೇರಿ ಆಗ್ರಹಪಡಿಸಿದ್ದಾರೆ.
ಐಐಟಿ- ಐಐಐಟಿ, 3 ವಿಶ್ವವಿದ್ಯಾಲಯಗಳನ್ನು ಒಳಗೊಂಡಿರುವ ಧಾರವಾಡ ಶೈಕ್ಷಣಿಕ ನಗರದ ಜೋತೆ ಜೋತೆಗೆ, ಪ್ರತಿಷ್ಠಿತ ಸಾಂಸ್ಕೃತಿಕ ನಗರವಾದ ಧಾರವಾಡದ ಅಭಿವೃದ್ಧಿಗಾಗಿ ವಿಶೇಷ ಅನುದಾನ 2000 ಕೋಟಿ ಘೋಷಣೆ ಮಾಡಬೇಕೆಂದು ವಿನಂತಿ ಮಾಡುತ್ತೇನೆ ಎಂದು ಮಾಜಿಮಹಾಪೌರರು ಈರೇಶ ಅಂಚಟಗೇರಿ ಪ್ರಕಟಣೆ ಮೂಲಕ ಸರಕಾರಕ್ಕೆ ವಿನಂತಿಸಿದ್ದಾರೆ.
