ನವದೆಹಲಿ
ಭಾರತದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಯಾದ ಮೇಜರ್ ಧ್ಯಾನಚಂದ ಖೇಲ್ ರತ್ನ ಪ್ರಶಸ್ತಿಗೆ ಶೂಟರ್ ಮನು ಭಾಕರ, ಚೇಸ್ ಚಾಂಪಿಯನ್ ಗುಕೇಶ, ಹಾಕಿ ಆಟಗಾರ ಹರ್ಮನಪ್ರೀತ ಸಿಂಗ, ಪ್ಯಾರಾ ಒಲಂಪಿಯನ್ ಪ್ರವೀಣ ಕುಮಾರ ಭಾಜನರಾಗಿದ್ದಾರೆ.
ಕೇಂದ್ರ ಸರ್ಕಾರದಿಂದ ನಾಲ್ಕು ಜನ ಕ್ರೀಡಾ ಸಾಧಕರಿಗೆ ಮೇಜರ್ ಧ್ಯಾನಚಂದ ಖೇಲ್ ರತ್ನ ಪ್ರಶಸ್ತಿ ಘೋಷಿಸಲಾಗಿದೆ.
2024ನೇ ಸಾಲಿನಲ್ಲಿ ಅಸಾಮಾನ್ಯ ಸಾಧನೆಗೆ ಈ ಪ್ರಶಸ್ತಿ ನೀಡಲಾಗಿದೆ. ಭಾರತದಲ್ಲಿ ಕ್ರೀಡಾ ಕ್ಷೇತ್ರಕ್ಕೆ ನೀಡುವ ಅತಿ ದೊಡ್ಡ ಪ್ರಶಸ್ತಿ ಇದಾಗಿದೆ. ಪ್ರಶಸ್ತಿಯೊಂದಿಗೆ ಪದಕ ಮತ್ತು 25ಲಕ್ಷ ನಗದು ಬಹುಮಾನ ನೀಡಲಾಗುತ್ತದೆ.
ಜನವರಿ 17ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿಷೇಶವಾಗಿ ಆಯೋಜಿಸಲಾದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೇಜರ್ ಧ್ಯಾನಚಂದ ಖೇಲ್ ರತ್ನ ಪ್ರಶಸ್ತಿಗಯನ್ನು ಈ ಸಾಧಕರು ಸ್ವೀಕರಿಸಲಿದ್ದಾರೆ.
