ಬೆಳಗಾವಿ
ಸಿಎಂ ಮನೆಗೆ ಬಂದಿದ್ದು ಹೊಸದೇನೂ ಅಲ್ಲಾ. ಸುಮಾರು ಬಾರಿ ನಮ್ಮ ಮನೆಗೆ ಬಂದಿದ್ದಾರೆ. ನಾವು ಬೇರೆ ಬೇರೆ ಕಡೆ ಹೋಗಿದ್ದೇವೆ ಇದರಲ್ಲಿ ಎನೂ ಹೊಸದಿಲ್ಲ. ಮೊದಲಿನ ಸಿಸ್ಟಮ್ ನಲ್ಲಿ ಮಾಡಿದ್ದೇವೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನೆನ್ನೆ ರಾತ್ರಿ ಸಚಿವ ಸತೀಶ ಜಾರಕಿಹೊಳಿ ತಮ್ಮ ಮನೆಯಲ್ಲಿ ನಡೆದ ಡಿನ್ನರ್ ಮೀಟಿಂಗ್ ವಿಚಾರವಾಗಿ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಸಚಿವರು ಮಾತನಾಡಿದರು.
ಹೊಸ ವರ್ಷ ಬಹಳಷ್ಟು ಜನರು ಕೂಡಬೇಕು ಅಂತಾ ಸೇರಿದ್ದೇವೆ. ಅಧ್ಯಕ್ಷರನ್ನ, ಸಿಎಂ ಅವರನ್ನ ಯಾರು ಚೇಂಜ್ ಮಾಡ್ತಾರೆ ನಮಗೆ ಗೊತ್ತಿಲ್ಲ. ರಾಜಕೀಯ ಬಗ್ಗೆ, ಸಂಘಟನೆ ಬಗ್ಗೆ ಸ್ವಾಭಾವಿಕವಾಗಿ ಚರ್ಚೆ ಆಗುತ್ತೆ ಎಂದು ಹೇಳಿದರು.
ಸಿಎಂ ಬದಲಾವಣೆ ಕುರಿತು ನಮಗೆ ಮಾಹಿತಿ ಇಲ್ಲಾ ಅಂತಾ ಹೇಳಿದ್ದೇವೆ. ಮುಂದಿನ ಬಾರಿ ಮತ್ತೆ ನಮ್ಮ ಸರ್ಕಾರ ಬರಬೇಕು ಅಂತಾ ಚರ್ಚೆ ಮಾಡಿದ್ದೇವೆ. ಒಂದೇ ಹುದ್ದೆ ಇರಬೇಕು ಅಂತೇನಿಲ್ಲ ಅವರಿಗೆ ಸಾಮರ್ಥ್ಯ ಇದ್ರೇ ಕೊಡಬಹುದು ಎಂದರು.
ಈಗಾಗಲೇ ಡಿ.ಕೆ. ಶಿವಕುಮಾರ ಇದಾರೆ ಬೇರೆ ಬೇರೆ ರಾಜ್ಯದಲ್ಲಿ ಈ ರೀತಿ ಇವೆ. ಈಗ ಒಬ್ಬರಿಗೆ ಒಂದೇ ಹುದ್ದೆ ಅಂತಾ ಮಾಡಿದ್ದಾರೆ. ಬದಲಾವಣೆ ಏನೂ ಇಲ್ಲ, ಇರೋದನ್ನ ಸರಿ ಮಾಡಬೇಕು ಅಂತಿದೆ. ನಮ್ಮ ಹಂತದಲ್ಲಿ ಏನಿಲ್ಲ, ಎಲ್ಲ ಪಕ್ಷದ ನಿರ್ಧಾರ ಎಂದು ಹೇಳಿದರು.
ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ಬಂದಿಲ್ಲ. ನಮ್ಮನ್ನ ಹೈಕಮಾಂಡ್ ಕರೆದಾಗೂ ಚರ್ಚೆ ಮಾಡಬೇಕಾಗುತ್ತೆ. ಚರ್ಚೆ ಮಾಡಿ ನಿರ್ಧಾರ ಮಾಡಬೇಕಾಗುತ್ತೆ. ಈಗ ಸದ್ಯ ಡಿ.ಕೆ. ಶಿವಕುಮಾರ ಅಧ್ಯಕ್ಷರಾಗಿ ಇದ್ದಾರೆ. ಈಗ ಅಧ್ಯಕ್ಷರು ಇದ್ದಾಗ ನಾವು ಆಗ್ತೇವಿ ಅಂತಾ ಹೇಳುವುದು ತಪ್ಪಾಗುತ್ತೆ ಎಂದು ಹೇಳಿದರು.
ಬದಲಾವಣೆ ವಿಚಾರ ಅಧ್ಯಕ್ಷರು, ಸಿಎಂ ಹೈಕಮಾಂಡ್ ಬಳಿ ಪ್ರಸ್ತಾಪ ಮಾಡಬೇಕು ಅವರ ಜವಾಬ್ದಾರಿ. ಇದ್ದವರು ತೀರ್ಮಾನ ಮಾಡಬೇಕು ಎಂದು ಸತೀಶ ಜಾರಕಿಹೊಳಿ ಹೇಳಿದರು.
ಅಹಿಂದ ನಾಯಕರೆಲ್ಲ ಸೇರಿ ಡಿನ್ನರ್ ಮೀಟಿಂಗ್ ಮಾಡಿದ ವಿಚಾರವಾಗಿ ಮಾತನಾಡಿ, ಅಹಿಂದ ನಾಯಕರು ಅಂತೇನಿಲ್ಲ ನಿನ್ನೆ ಕ್ಯಾಬಿನೆಟ್ ಬಳಿಕ ಸಡನ್ ಆಗಿ ಮೀಟಿಂಗ್ ಫಿಕ್ಸ್ ಆಯ್ತು. ಕೆಲವರು ವಿದೇಶಿ ಟೂರ್ ಗೆ ಹೋಗಿದ್ದಾರೆ ಬರಲು ಆಗಿಲ್ಲ. ಈ ರೀತಿ ಏಳೆಂಟು ಬಾರಿ ಊಟಕ್ಕೆ ಸೇರಿದ್ದೇವು ಎಂದು ಹೇಳಿದರು.
