ಬೆಳಗಾವಿ
ಕ್ಯಾನ್ಸರ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಸೇವೆ ಸಿಗಲಿ. ಅತ್ಯುನ್ನತ ಕ್ಯಾನ್ಸರ್ ಚಿಕಿತ್ಸೆ ರೋಗಿಗಳಿಗೆ ಸಿಗಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಸಮಾರಂಭದಲ್ಲಿ ಕೆಎಲ್ಇ ಸಂಸ್ಥೆ ಕ್ಯಾನ್ಸರ್ ಆಸ್ಪತ್ರೆಯ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಜಗತ್ತಿನಲ್ಲಿ 20 ಮಿಲಿಯನ್ ಕ್ಯಾನ್ಸರ್ ಕೇಸ್ ಪತ್ತೆ ಆಗ್ತಿವೆ, 9 ಮಿಲಿಯನ್ ಸಾವು ಆಗ್ತಿವೆ. ಕ್ಯಾನ್ಸರ್ ರೋಗಿ ಜೊತೆಗೆ ಆತನ ಕುಟುಂಬಕ್ಕೂ ಸಂಕಷ್ಟ ತರುತ್ತದೆ. ಪ್ರತಿಯೊಬ್ಬ ವೈದ್ಯರು ಕ್ಯಾನ್ಸರ್ ರೋಗಿಗಳ ಬಗ್ಗೆ ವಿಶೇಷ ಕಾಳಜಿಯಿಂದ ಚಿಕಿತ್ಸೆ ಕೊಡಬೇಕು. ಭಾರತ ಸರ್ಕಾರ ಆರೋಗ್ಯ ಸೇವೆ ಗುಣಮಟ್ಟ ಗೊಳಿಸಲು ಕ್ರಮವಹಿಸಿದೆ ಎಂದು ಹೇಳಿದರು.
ಭಾರತ ಸರ್ಕಾರದ ಅನೇಕ ಆರೋಗ್ಯ ಸೇವೆಗಳನ್ನ ಜಾರಿಗೊಳಿಸಿದೆ. ಆಯುಷ್ಯ ಮಾನ್ ಭಾರತ ಅಂತಾ ಯೋಜನೆಗಳು ಜನಮುಖಿ ಆಗಿವೆ. ಸಮಾಜದಲ್ಲಿ ಕ್ಯಾನ್ಸರ್ ರೋಗ ತಡೆಯಲು ಜಾಗೃತಿ ಮೂಡಿಸಬೇಕಿದೆ. ಇಂತಹ ಮಾರಕ ರೋಗ ತಡೆಯಲು ಕುಟುಂಬದ ಸದಸ್ಯರು, ಸಮಾಜ ಪ್ರಮುಖ ಪಾತ್ರ ನಿರ್ಮಿಸಬೇಕಿದೆ ಎಂದರು.
ಮಾರಕ ರೋಗಗಳನ್ನ ಆರಂಭದಲ್ಲಿ ಪತ್ತೆ ಮಾಡಿ, ಚಿಕಿತ್ಸೆ ಕೊಡಿಸುವ ಅಗತ್ಯವಿದೆ. ನನಗೆ ಕೆಎಲ್ಇ ಸಂಸ್ಥೆ ಸೇವೆ ಸಂತೋಷ ತಂದಿದೆ. ನಿಮ್ಮಲ್ಲರಿಗೂ ನಾನು ಶುಭಾಶಯ ತಿಳಿಸುವೆ, ನಿಮ್ಮಲ್ಲರ ಭವಿಷ್ಯ ಉಜ್ವಲ ಆಗಲಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
