ಬೆಳಗಾವಿ
ಮತ್ತೆ ಕುಂದಾನಗರಿಯಲ್ಲಿ ಮೂರ್ತಿ ವಿವಾದದ ಕಗ್ಗಂಟು ಏರ್ಪಟ್ಟಿದೆ.
ಅಂದು ಲಕ್ಷ್ಮೀ ಹೆಬ್ಬಾಳ್ಕರ ವರ್ಸಸ್ ರಮೇಶ ಜಾರಕಿಹೊಳಿ ನಡುವೆ ಇತ್ತು. ಇಂದು ಅಭಯ ಪಾಟೀಲ ವರ್ಸಸ್ ಸತೀಶ ಝಾರಕಿಹೊಳಿ ಮಧ್ಯೆ ಫೈಟ್ ಏರ್ಪಟ್ಟಿದೆ.
ಬೆಳಗಾವಿಯ ಅನಗೋಳದಲ್ಲಿ ಪ್ರತಿಷ್ಠಾಪಿಸಿರೋ ಸಂಭಾಜಿ ಮಹಾರಾಜರ ಮೂರ್ತಿ ಇಂದು ಲೋಕಾರ್ಪಣೆ ಮಾಡಲು ಬಿಜೆಪಿ ಶಾಸಕ ಅಭಯ ಪಾಟೀಲ ಪ್ಲಾನ್ ಮಾಡಿದ್ದರು.
ಆದರೆ ಜನೆವರಿ 5ರಂದು ನಡೆಯಬೇಕಿದ್ದ ಸಂಭಾಜಿ ಮಹಾರಾಜರ ಮೂರ್ತಿ ಉದ್ಘಾಟನೆಯ ಅಧಿಕೃತ ಸರ್ಕಾರಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.
ಸಂಭಾಜಿ ಮಹಾರಾಜರ ಮೂರ್ತಿ ಲೋಕಾರ್ಪಣೆಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಸ್ಥಳಕ್ಕೆ ಭೇಟಿ ಪರಿಶೀಲನೆನಡೆಸಿದ್ದಾರೆ. ಅದ್ಧೂರಿಯಾಗಿ ಸರ್ಕಾರಿ ಕಾರ್ಯಕ್ರಮ ಮಾಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ.

