Karunadu Studio

ಅಂತರಾಷ್ಟ್ರೀಯ ಅಪಘಾತ ರಾಷ್ಟ್ರೀಯ ಸುದ್ದಿ

ಟಿಬೆಟ್ನಲ್ಲಿ ಪ್ರಬಲ ಭೂಕಂಪ: 53 ಜನ ಸಾವು, 60ಕ್ಕೂ ಹೆಚ್ಚು ಜನರಿಗೆ ಗಾಯ

ಟಿಬೆಟ

ಟಿಬೆಟ್ನಲ್ಲಿ ಪ್ರಬಲ ಭೂಕಂಪ ಸಮಭವಿಸಿದ್ದು. ಮಂಗಳವಾರ ಬೆಳಗಿನ ಜಾವ 6:35ರ ಸಮಯದಲ್ಲಿ ಈ ಭೂಕಂಪ ಸಂಭವಿಸಿದೆ. ರಿಕ್ಟಪ್ ಮಾಪಕದಲ್ಲಿ 7.1ರಷ್ಟು ತೀವ್ರತೆ ದಾಖಲಾಗಿದ್ದು. ಈ ದುರಂತದಲ್ಲಿ ಇಲ್ಲಿಯವರೆಗೂ 53 ಜನರು ಸಾವನ್ನಪ್ಪಿದ್ದು. 63ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಚೀನಾದ ಮಾಧ್ಯಮಗಳ ಪ್ರಕಾರ, ಭೂಕಂಪನದ ಕೇಂದ್ರದ ಬಳಿ ಹಲವಾರು ಕಟ್ಟಡಗಳು ಕುಸಿದಿವೆ ಮತ್ತು ಸುತ್ತಮತ್ತಲಿನ ಪ್ರದೇಶದಲ್ಲಿಯೂ ಪ್ರಬಲವಾದ ಭೂಕಂಪನದ ಅನುಭವವಾಗಿದೆ ಎಂದುಇ ಚೀನಾದ ಪ್ರಮುಖ ಮಾಧ್ಯಮ ಸಂಸ್ಥೆ ಸಿಸಿಟಿವಿ ಮಾಹಿತಿ ಹಂಚಿಕೊಂಡಿದೆ.

ಕೇವಲ ನೇಪಾಳ, ಟಿಬೆಟ್ ಮಾತ್ರವಲ್ಲದೆ ಭಾರತದ ಕೆಲವು ಕಡೆ ಕಂಪನದ ಅನುಭವವಾಗಿದ್ದು. ಬಿಹಾರದ ರಾಜಧಾನಿ ಪಾಟ್ನಾ ಸೇರಿದಂತೆ ಉತ್ತರದ ಅನೇಕ ರಾಜ್ಯದಲ್ಲಿ ಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ. ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲೂ ಭೂಕಂಪನದ ಅನುಭವವಾಗಿದೆ.

karunadustudioeditor

About Author

Leave a comment

Your email address will not be published. Required fields are marked *

You may also like

ಕರ್ನಾಟಕ ರಾಜಕೀಯ ರಾಷ್ಟ್ರೀಯ

“ನವದೆಹಲಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಶೆಟ್ಟರ್, ಮುನೇನಕೊಪ್ಪ, ನಿರಾಣಿ ಭಾಗಿ”

ವಾಲ್ಮೀಕಿಯವರ ಬದುಕು ಪ್ರತಿಯೊಬ್ವರಿಗೂ ಆದರ್ಶ ಆಗಬೇಕೆಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಅಭಿಪ್ರಾಯಪಟ್ಟರು. ನವದೆಹಲಿಯ ಕರ್ನಾಟಕ ಭವನದಲ್ಲಿ ವಾಲ್ಮೀಕಿ ಜಯಂತಿ ಆಚರಣೆಯ ಸಮಯದಲ್ಲಿ
ಕರ್ನಾಟಕ ಸುದ್ದಿ

ಮಾಜಿ ಶಾಸಕ ಜಯಣ್ಣ ಅವರ ನಿಧನ; ಡಿಸಿಎಂ ಡಿ.ಕೆ. ಶಿವಕುಮಾರ ಸಂತಾಪ

ಬೆಂಗಳೂರು ಕಾಂಗ್ರೆಸ್ ಮಾಜಿ ಶಾಸಕ ಜಯಣ್ಣ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾದ ಜಯಣ್ಣ ಅವರ ನಿಧನದ ಸುದ್ದಿ
Translate »