ಬೆಳಗಾವಿ
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಕುರಿತು ಕರ್ನಾಟಕದ ಪರವಾಗಿ ಕಾನೂನು ಹೋರಾಟವನ್ನ ಸಮರ್ಥವಾಗಿ ಮಾಡಲಿದ್ದೇವೆ. ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಗಡಿ ವಿವಾದ ಬರಲ್ಲಾ ಅಂತಾ ಕರ್ನಾಟಕದ ಪರ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಕನ್ನಡಿಗರಿಗೆ ಅಭಯ ನೀಡಿದರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಬೆಳಗಾವಿ ಸೇರಿ 865 ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು 2004 ರಲ್ಲಿ ಸುಪ್ರೀಂ ಕೋರ್ಟನಲ್ಲಿ ಮಹಾರಾಷ್ಟ್ರ ಸರ್ಕಾರ ಅರ್ಜಿ ಸಲ್ಲಿಸಿದೆ. ಕಳೆದ 20 ವರ್ಷಗಳಿಂದ ಸುಪ್ರೀಂ ಕೋರ್ಟ್ ನಲ್ಲಿ ಈ ಗಡಿ ವಿವಾದ ಇದೆ ಎಂದರು.
ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಗಡಿ ವಿವಾದ ಬರಲ್ಲಾ ಅಂತಾ ಕರ್ನಾಟಕದ ವಾದವನ್ನ ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ. ನಾಲ್ಕು ಬಾರಿ ಸುಪ್ರೀಂ ಕೋರ್ಟ್ ಪೀಠದ ಮುಂದೆ ವಿಚಾರಣೆಗೆ ಬಂದ ಅರ್ಜಿ ಮುಂದೂಡಿಕೆಯಾಗಿದೆ. ನಾಲ್ಕು ಬಾರಿ ಸುಪ್ರೀಂ ಕೋರ್ಟ್ ಪೀಠದಲ್ಲಿ ಇರೋ ನ್ಯಾಯಾಧೀಶರಲ್ಲಿ ಒಬ್ಬರು ಕರ್ನಾಟಕದವರಿದ್ದರು. ಹೀಗಾಗಿ ಸುಪ್ರೀಂ ಕೋರ್ಟನಿಂದ ಅರ್ಜಿ ಮುಂದೂಡಿಕೆಮಾಡಲಾಗಿದೆ ಎಂದು ಹೇಳಿದರು.
ಇನ್ನೂ ಕೆಲವೇ ತಿಂಗಳಲ್ಲಿ ಗಡಿ ವಿವಾದದ ಅರ್ಜಿ ವಿಚಾರಣೆಗೆ ಬರೋ ಸಾಧ್ಯತೆಯಿದೆ. ಕರ್ನಾಟಕದ ಪರ ಪ್ರಭಲ ವಾದ ಮಂಡಿಸೋ ಹಿರಿಯ ವಕೀಲರ ತಂಡವಿದೆ. ಕರ್ನಾಟಕದ ಪರವಾಗಿ ಕಾನೂನು ಹೋರಾಟವನ್ನ ಸಮರ್ಥವಾಗಿ ಮಾಡಲಿದ್ದೇವೆ. ಮಹಾರಾಷ್ಟ್ರದವರು ಹೊರಗೆ ಏನ ಮಾಡ್ತಾರೆ ಅನ್ನೋದಕ್ಕಿಂತಲೂ, ನಾವೇನಿದ್ದರೂ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಬೇಕು ಎಂದು ಶಿವರಾಜ ಪಾಟೀಲ ಹೇಳಿದರು.
