ಬೆಳಗಾವಿ
ಎಂ.ಎಲ್.ಸಿ. ಸಿ.ಟಿ. ರವಿ ಅವರು ಸುಮ್ಮನೆ ಕಥೆ ಹೇಳಿಕೊಂಡು ಒಡಾಡುತ್ತಿದ್ದಾರೆ. ಯಾರೋ ಲಕ್ಷ್ಮೀ ಹೆಬ್ಬಾಳ್ಕರ ಬೆಂಬಲಿಗರು ಬರೆದಿದ್ದಾರೆ. ಅದು ಮಾಡಿದ್ದಾರೆ ಅಂತಾ ಹೇಳುತ್ತಿದ್ದಾರೆ. ಇದು ಎಲ್ಲವೂ ಇವರೇ ಸೃಷ್ಟಿ ಮಾಡಿಕೊವಂತಹದ್ದು ಎಂದು ಸಚಿವ ಎಂ.ಬಿ. ಪಾಟೀಲ ಹೇಳಿ ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಎಂಎಲ್ಸಿ ಸಿ.ಟಿ. ರವಿಗೆ ಕೊಲೆ ಬೆದರಿಕೆ ಪತ್ರ ಬಂದ ವಿಚಾರವಾಗಿ ಅವರು ಮಾತನಾಡಿದರು. ಸಿ.ಟಿ. ರವಿ ಅವರು ಸುಮ್ಮನೆ ಕಥೆ ಹೇಳಿಕೊಂಡು ಒಡಾಡುತ್ತಿದ್ದಾರೆ. ಇದು ಇವರೇ ಸೃಷ್ಟಿ ಮಾಡಿರುತ್ತಾರೆ ಅದನ್ನ ಎಂದು ಎಂ.ಬಿ. ಪಾಟೀಲ ವಾಗ್ದಾಳಿ ನಡೆಸಿದರು.
