ಬೆಳಗಾವಿ
ಇಂದು ಯಾರ ಮನೆಗೆ ಹೋಗಿ ಊಟ ಮಾಡುವುದು, ಬಿಡುವುದು. ಇದಕ್ಕೆಲ್ಲಾ ತೀರಾ ಮಹತ್ವ ಕೊಡಬೇಕಾಗಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬೆಳಗಾವಿಯಲ್ಲಿ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಡಿನ್ನರ್ ಪಾಲಿಟಿಕ್ಸ್ ವಿಚಾರವಾಗಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ಸತೀಶ ಜಾರಕಿಹೊಳಿ ಅವರ ಮನೆಗೆ ಡಿನ್ನರ್ ಗೆ ಹೋಗಿದ್ದಾರೆ. ನನ್ನ ಮನೆಗೂ ನಾನು ಎರಡು ಸಾರಿ ಕರೆದಿದ್ದೇನೆ, ಅವರು ಬಂದಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಿಕೊಡುವುದು ಸರಿಯಲ್ಲ ಎಂದು ಹೇಳಿದರು.
ಅಷ್ಟೆ ಯಾಕೆ ವಿರೋಧ ಪಕ್ಷದವರು ನಮ್ಮ ಮನೆಗೆ ಊಟಕ್ಕೆ ಬರ್ತಾರೆ. ನಾವು ಅವರ ಮನೆಗೆ ಊಟಕ್ಕೆ ಹೋಗ್ತೆವಿ ಎನೂ ತಪ್ಪಿದೆ ಅದರಲ್ಲಿ ಎಂದು ಅವರು ಹೇಳಿದರು.
ಮತ್ತೆ ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶ ಮಾಡಲು ಪ್ಲ್ಯಾನ್ ವಿಚಾರವಾಗಿ ಮಾತನಾಡಿ, ಸಿಎಲ್‌ಪಿಯಲ್ಲಿ ಯಾವ ರೀತಿಯಾಗಿ ಮಾಡಬೇಕು ಅಂತಾ ಚರ್ಚೆ ಮಾಡುತ್ತೇವೆ. ಸುರ್ಜೇವಾಲಾ ಅವರು ಬರ್ತಾರೆ ಅವರು ಎಲ್ಲವನ್ನೂ ಕೂಡ ಹೇಳಿದ ಮೇಲೆ ಗೊತ್ತಾಗುತ್ತೆ. ಬೆಳಗಾವಿ ಕಾರ್ಯಕ್ರಮಕ್ಕೆ ಯಾರು ಬರ್ತಾರೆ ಅನ್ನೋದು ಗೊತ್ತಾಗುತ್ತೆ. ಸುರ್ಜೇವಾಲಾ ಬಂದು ಸಿಎಲ್‌ಪಿಯಲ್ಲಿ ಡಿಸ್ಕಷನ್ ಮಾಡ್ತಾರೆ ಎಂದು ಹೇಳಿದರು.
ನಂತರ ಬೆಳಗಾವಿಯಿಂದ ಸಚಿವ ಎಂ.ಬಿ. ಪಾಟೀಲ ಬೆಂಗಳೂರಿಗೆ ತೆರಳಿದರು.
