ಬೆಳಗಾವಿ
ಪರಸ್ತ್ರೀ ಜೊತೆಗೆ ಓಡಿ ಹೋದ ಪಂಚಾಯತಿ ಸದಸ್ಯೆ ಗಂಡ ಪ್ರಕರಣಕ್ಕೆ ಸಂಭಂದಪಟ್ಟಂತ ಓಡಿ ಹೋದವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದಲ್ಲಿ ಘಟನೆ ನಡೆದಿತ್ತು. ಎರಡು ವಾರದ ಹಿಂದೆ ಅದೇ ಗ್ರಾಮ ಪಂಚಾಯತಿ ಸದಸ್ಯೆ ವಾಣಿಶ್ರೀ ಪತಿ ಬೇರೆ ಮಹಿಳೆಯೊಂದಿಗೆ ಓಡಿ ಹೋಗಿದ್ದನು. ಬಸವರಾಜ ಸೀತಮನಿ ಎಂಬಾತನೇ ಮಗನ ಜೊತೆಗೆ ಎಸ್ಕೇಪ್ ಆಗಿದ್ದವನು.
ಅದೇ ಗ್ರಾಮದ ಮಾಸಾಬಿ ಸೈಯದ್ ಎಂಬಾಕೆ ಜೊತೆಗೆ ಪರಾರಿ ಆಗಿದ್ದನು. ಮಾಸಾಬಿ ಸಹ ತನ್ನ ಮಕ್ಕಳು ಮತ್ತು ತನ್ನ ಪತಿಯ ಕಾರಿನೊಂದಿಗೆ ಬಸವರಾಜ ಜೊತೆ ಎಸ್ಕೇಪ್ ಆಗಿದ್ದಳು. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾಣೆ ಆಗಿದ್ದಾಳೆ ಅಂತಾ ಮಾಸಾಬಿ ಪತಿ ಆಸೀಫ್ ನಿಂದ ದೂರು ದಾಖಲು ಮಾಡಲಾಗಿತ್ತು.
ಬಸವರಾಜ ಭಾವಚಿತ್ರ ಇರೋ ಟ್ಯಾಟೋ ವಿಡಿಯೋ ಮತ್ತು ಮಾಸಾಬಿ ತನ್ನ ಕೈ ಮೇಲೆ ಬಸು ಅಂತಾ ಹಾಕೊಂಡಿರೋ ಟ್ಯಾಟೂ ವಿಡಿಯೋ ಈಗ ಫುಲ್ ವೈರಲ್ ಆಗ್ತಾ ಇದೆ.
