ಬೆಳಗಾವಿ
ಮುಡಾ ಹಗರಣ ಬಂದ ಮೇಲೆ ಸಿದ್ದರಾಮಯ್ಯ ತಪ್ಪಿತಸ್ಥರು ಅಂತಾ ಹೇಳ್ತಿದ್ದಾರೆ. ಹಗರಣ ಹೊರ ಬಂದ ಮೇಲೆ ಸೈಟ್ ಗಳನ್ನ ವಾಪಾಸ್ ಕೊಟ್ರೂ. ಆರಂಭದಲ್ಲಿ 64ಕೋಟಿ ಕೊಡಿ ಅಂದ್ರೂ ಈಗ ಆ ಮಾತು ಇಲ್ಲ. ಈ ಎಲ್ಲ ಬೆಳವಣಿಗೆ ನೋಡಿದ್ರೇ ಸಿದ್ದರಾಮಯ್ಯ ತಪ್ಪು ಮಾಡಿದಾರೆ ಅನ್ಸತ್ತೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಇಡಿಯಿಂದ ಮುಡಾ ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವ ವಿಚಾರವಾಗಿ ಮಾತನಾಡಿದರು. ಇಡಿಯವರು ತನಿಖೆ ನೋಡಿದಾಗ ಕಾನೂನು ಬಾಹಿರ ಸೈಟ್ ಗಳನ್ನ ಮುಟ್ಟುಗೋಲು ಹಾಕಿದ್ದಾರೆ.
ಇಡಿ ಮೇಲೆ ಕೇಂದ್ರ ಸರ್ಕಾರ ಒತ್ತಡ ಹಾಕಿದಾರೆ ಎಂಬ ಸುರ್ಜೇವಾಲ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇಡಿ ಮೇಲೆ ರಾಜಕೀಯ ಒತ್ತಡ ಇಲ್ಲ ಕಾನೂನು ರೀತಿ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು.
ಮಹಾತ್ಮಾ ಗಾಂಧಿ ಹೆಸರಿನಲ್ಲಿ ಸರ್ಕಾರದ ಹಣ ಖರ್ಚು ಮಾಡಿ ಸಮಾವೇಶ ಮಾಡ್ತಿದ್ದಾರೆ. ಬೆಳಗಾವಿಯಲ್ಲಿ ಗಾಂಧಿವರು ಫೋಟೋ ಹುಡುವ ಸ್ಥಿತಿ ಇದೆ.
ಕಾಂಗ್ರೆಸ್ ನಾಯಕರದ್ದೇ ಫೋಟೋ ಗಳೇ ಕಾಣಿಸುತ್ತಿದೆ. ಬಿಜೆಪಿ, ಕೇಂದ್ರ ಸರ್ಕಾರದ ಬಗ್ಗೆ ಮಾತಾಡೋ ನೈತಿಕತೆ ಇಲ್ಲ. ಸಮಾವೇಶಕ್ಕೂ ಮುಡಾ ಹಗರಣಕ್ಕೂ ಯಾವ ಸಂಬಂಧ ಇಲ್ಲ. ಒಂದು ದಿನದ ಅಧಿವೇಶನ ಜಾತ್ರೆ ಮಾಡಿಕೊಂಡು ಹೋಗ್ತಾರೆ.ಯ ಎಂದು ಆರೋಪಿಸಿದರು.
ಬೆಳಗ್ಗೆ ಯಿಂದ ಸಂಜೆ ವರೆಗೂ ಡಿನ್ನರ್ ಪಾರ್ಟಿ ನಡೆದಿವೆ. ಖರ್ಗೆಯವರು ಸುಮ್ಮನಿರ್ತಿರೋ ಇಲ್ವೋ ಇಲ್ಲಾ ನಾನು ನೋಡ್ಕೊತೇನಿ ಅಂದ್ರೂ. ಯಾರು ಮಾತಾಡಬಾರು ಅಂತಾ ಹೇಳುವ ಮಟ್ಟಿಗೆ ಹೋಗಿದ್ದು ಎಷ್ಟು ಗಂಭೀರ ಸ್ಥಿತಿಗೆ ಹೋಗಿದೆ ನೋಡಿ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ತಪ್ಪಿತಸ್ಥರು. ತನಿಖೆ ಸರಿಯಾಗಿ ನಡೆಸಬೇಕು ಅಂದ್ರೇ ಸಿಬಿಐಯಿಂದ ತನಿಖೆ ಆಗಲಿ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಅಂತಾ ಒತ್ತಾಯ ಮಾಡ್ತೇವಿ. ಇದು ಆಗದಿದ್ರೂ ಕಾಂಗ್ರೆಸ್ ಇನ್ ಫೈಟಿಂಗ್ ಇಪೇಕ್ಟ್ ಆಗುತ್ತೆ. ಸಿದ್ದರಾಮಯ್ಯ ಯಾವಗಬೇಕಾದ್ರೂ ರಾಜೀನಾಮೆ ಕೊಡಬಹುದು ಎಂದು ಹೇಳಿದರು.
ಬಿಜೆಪಿಯಲ್ಲಿ ಕಿತ್ತಾಟ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನೂರಕ್ಕೆ ನೂರು ಸರಿ ಇದೆ ಅಂತಾ ಹೇಳಲ್ಲ. ಸಮಸ್ಯೆಗಳ ಬಗ್ಗೆ ವರಿಷ್ಠರು ನೋಡುತ್ತಿದ್ದಾರೆ ಸರಿ ಪಡಿಸ್ತಾರೆ. ವೈಯಕ್ತಿಕ ಹೇಳಿಕೆ ವಿಚಾರದ ಬಗ್ಗೆ ನಾನು ಹೇಳಲ್ಲ. ಹಲವಾರು ಬಾರಿ ಎಲ್ಲರ ಜೊತೆಗೆ ಹೈಕಮಾಂಡ್ ಮಾತಾಡ್ತಿದ್ದಾರೆ. ಪಕ್ಷದಲ್ಲಿನ ವಿದ್ಯಮಾನ ವರಿಷ್ಠ ಗಮನಿಸುತ್ತಿದ್ದಾರೆ ಸರಿ ಮಾಡ್ತಾರೆ. ನಾವು ಸೀನಿಯರ್ ಲೀಡರ್ ಇದ್ದೇವೆ ಅವರ ಗಮನಕ್ಕೆ ತರ್ತೇವಿ ಹೈಕಮಾಂಡ್ ಸರಿ ಮಾಡ್ತಾರೆ ಎಂದು ಹೇಳಿದರು.
ಜಾತಿ ಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಸರ್ಕಾರಕ್ಕೆ ಇದರ ಅಧಿಕಾರ ಇದೆ. ಸಿದ್ದರಾಮಯ್ಯ ಈ ಹಿಂದೆ ಮುನ್ನೂರು ಕೋಟಿ ಖರ್ಚು ಮಾಡಿ ಜಾತಿ ಗಣತಿ ಮಾಡಲು ಹೊರಟ್ರೂ. ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಪೆಂಡಿಂಗ್ ಇದೆ. ಇದು ವೈಜ್ಞಾನಿಕವಾಗಿ ಇಲ್ಲ. ಕಾಂಗ್ರೆಸ್ ನಲ್ಲಿರುವ ಲೀಡರ್ಸ್ ವಿರೋಧ ಮಾಡ್ತಿದ್ದಾರೆ. ಅವರು ಕೂಡ ಜಾತಿ ಗಣತಿಗೆ ವಿರೋಧ ಮಾಡುತ್ತಿದ್ದಾರೆ ಎಂದು ಹೇಳಿದರು.