Karunadu Studio

ಕರ್ನಾಟಕ

Union Budget: ಬಜೆಟ್‌ ಎಷ್ಟು ಗೌಪ್ಯವಾಗಿರುತ್ತೆ? ಬಜೆಟ್‌ನ ಮುದ್ರಿತ ಪ್ರತಿ ಯಾರಿಗೆಲ್ಲ ತಲುಪಿರುತ್ತೆ? ಇಲ್ಲಿದೆ ಸಂಪೂರ್ಣ ವಿವರ – Kannada News | How Union Budget is kept strictly confidential


ನವದೆಹಲಿ: ಕೇಂದ್ರ ಬಜೆಟ್ (Union budget) ಮಂಡನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ತಮ್ಮ 8ನೇ ದಾಖಲೆಯ ಬಜೆಟ್‌ ಅನ್ನು (budget 2025) ಸಂಸತ್ತಿನಲ್ಲಿ ನಾಳೆ (ಫೆ. 1) ಮಂಡಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 3.0 ಅಧಿಕಾರಕ್ಕೆ ಬಂದ ನಂತರ ಇದು 2ನೇ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಆಗಿದೆ. ಬಜೆಟ್‌ ಕುರಿತಾದ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ.

ಬಜೆಟ್ ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರೂ ವಸ್ತುಗಳ ಬೆಲೆ ಏರಿಕೆ ಮತ್ತು ಇಳಿಕೆ ಎಂದುಕೊಳ್ಳುತ್ತಾರೆ. ಇನ್ನು ಬಜೆಟ್‌ ಎಂದರೆ ಯಾವ್ಯಾವ ಕ್ಷೇತ್ರಕ್ಕೆ ಏನೇನು ಕೊಡುಗೆ ಸಿಗುತ್ತದೆ, ಯಾವ ವಲಯಕ್ಕೆ ಆರ್ಥಿಕ ಹೊರೆ ಬೀಳುತ್ತದೆ ಎಂದಷ್ಟೇ ತಿಳಿದುಕೊಳ್ಳುವುದು ಎಂದು ಭಾವಿಸಿದ್ದಾರೆ . ಆದರೆ ಬಜೆಟ್ ಮತ್ತು ಬಜೆಟ್‌ನ ಗೌಪ್ಯತೆಯ ಕುರಿತು ಹಲವರಿಗೆ ತಿಳಿದಿಲ್ಲ. ಬಜೆಟ್‌ ಮತ್ತು ಬಜೆಟ್‌ನ ಗೌಪ್ಯತೆಯ ಬಗ್ಗೆ ಇಲ್ಲಿ ಸರಳವಾಗಿ ವಿವರಿಸಲಾಗಿದೆ.

ಬಜೆಟ್‌ನ ಗೌಪ್ಯತೆಯ ಬಗ್ಗೆ ನಿಮಗೆಷ್ಟು ಗೊತ್ತು?

ಹಣಕಾಸು ಸಚಿವಾಲಯವು ಕೇಂದ್ರ ಬಜೆಟ್ ಅನ್ನು ಹೇಗೆ ಗೌಪ್ಯವಾಗಿರಿಸುತ್ತದೆ ಮತ್ತು ಸೋರಿಕೆಯಿಂದ ಹೇಗೆ ರಕ್ಷಿಸುತ್ತದೆ ಎಂಬುದರ ಕುರಿತು ತಿಳಿದುಕೊಳ್ಳೋಣ.

ಬಜೆಟ್ ಮುದ್ರಿತ ಪ್ರತಿಯನ್ನು ಅತ್ಯಂತ ಗೌಪ್ಯ ಮತ್ತು ಸುರಕ್ಷಿತವಾಗಿರಿಸಬೇಕು. ಬಜೆಟ್ ಮಂಡನೆಗೂ 15 ದಿನಗಳ ಮೊದಲು ಹಣಕಾಸು ಸಚಿವಾಲಯಕ್ಕೆ ಬಿಗಿ ಭದ್ರತೆಯನ್ನು ಒದಗಿಸಲಾಗುತ್ತದೆ.

ಸಚಿವಾಲಯದ ಕಾರಿಡಾರ್‌ಗಳ ಮೇಲ್ವಿಚಾರಣೆಗಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಮತ್ತು ಗುಪ್ತಚರ ಬ್ಯೂರೋ (IB) ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ಸಿಐಎಸ್‌ಎಫ್ ಸಿಬ್ಬಂದಿ ಹಣಕಾಸು ಸಚಿವರು, ಹಣಕಾಸು ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳು ಪ್ರಮುಖರು ಕಚೇರಿಗಳನ್ನು ಕಾವಲು ಕಾಯುತ್ತಾರೆ. ಅನಧಿಕೃತ ಸಿಬ್ಬಂದಿಗೆ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ.

ಐಬಿ ಅಧಿಕಾರಿಗಳು ಮಫ್ತಿ ಉಡುಪಿನಲ್ಲಿ ಸಚಿವಾಲಯದ ಸುತ್ತಲೂ ಗಸ್ತು ತಿರುಗುತ್ತಾರೆ. ಸಿಬ್ಬಂದಿ ಮತ್ತು ಸಂದರ್ಶಕರ ಮೇಲೆ ನಿಗಾ ಇಡುತ್ತಾರೆ. ಬಜೆಟ್ ಮಂಡಿಸುವ 2 ವಾರಗಳ ಮೊದಲು ಪ್ರವೇಶವನ್ನು ಹೆಚ್ಚು ನಿರ್ಬಂಧಿಸಲಾಗುತ್ತದೆ. ಇನ್ನು ಸಂದರ್ಶಕರ ಭೇಟಿಯನ್ನು ಮುಂದೂಡಲಾಗುತ್ತದೆ. ಒಂದು ವಾರದ ಮೊದಲು ಹಣಕಾಸು ಸಚಿವಾಲಯವು ನಿಷೇಧಿತ ವಲಯವಾಗುತ್ತದೆ. ಜಂಟಿ ಕಾರ್ಯದರ್ಶಿ ಮತ್ತು ಮೇಲಿನ ಹಿರಿಯ ಅಧಿಕಾರಿಗಳಿಗೂ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ.

ಬಜೆಟ್ ಕರಡನ್ನು ಅತ್ಯಂತ ಗೌಪ್ಯವಾಗಿಡಲಾಗಿದ್ದು, ಸಂಸತ್ತಿನಲ್ಲಿ ಮಂಡಿಸುವ ಕೇವಲ 24 ಗಂಟೆಗಳ ಮೊದಲು ಕರಡನ್ನು ಅಂತಿಮಗೊಳಿಸಲಾಗುತ್ತದೆ.

ಈ ಸುದ್ದಿಯನ್ನೂ ಓದಿ:Union Budget 2025: ವಾರ್ಷಿಕ 10 ಲಕ್ಷ ರೂ. ತನಕ ಆದಾಯ ತೆರಿಗೆ ಮುಕ್ತ ಘೋಷಣೆ? ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ? ಬಜೆಟ್‌ ನಿರೀಕ್ಷೆಗಳೇನು?

ಬಜೆಟ್ ಮುದ್ರಣ ಪ್ರಕ್ರಿಯೆ

  • ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸುವ ಕೇವಲ 24 ಗಂಟೆಗಳ ಮೊದಲು ಪೂರ್ಣ ಬಜೆಟ್ ದಾಖಲೆಯನ್ನು ಮುದ್ರಿಸಲಾಗುತ್ತದೆ.
  • ಮುದ್ರಣ ಪ್ರಕ್ರಿಯೆಯನ್ನು ಅತ್ಯಂತ ಗೌಪ್ಯವಾಗಿ ನಡೆಸಲಾಗುತ್ತದೆ. ಭಾರೀ ಕಣ್ಗಾವಲು ಮೂಲಕ ಬಜೆಟ್‌ ಪ್ರತಿಯನ್ನು ಸುರಕ್ಷಿತಗೊಳಿಸಲಾಗುತ್ತದೆ.
  • ಕಟ್ಟುನಿಟ್ಟಾದ ಸರ್ಕಾರಿ ಪ್ರೋಟೋಕಾಲ್‌ಗಳು ಬಜಟ್‌ ಪ್ರತಿಯನ್ನು ಗೌಪ್ಯವಾಗಿ ಇರಿಸುತ್ತದೆ.

ಬಜೆಟ್‌ ಸೋರಿಕೆಯಾದ ಇತಿಹಾಸ

ಭಾರತದಲ್ಲಿ ಬಜೆಟ್‌ ಸೋರಿಕೆಯಾದ ಉದಾಹರಣೆಗಳಿವೆ. 1947ರಲ್ಲಿ ಷಣ್ಮುಖಂ ಚೆಟ್ಟಿಯವರು ಅಧಿಕೃತ ಪ್ರಕಟಣೆಗೂ ಮುನ್ನವೇ ಅಜಾಗರೂಕತೆಯಿಂದ ಪತ್ರಕರ್ತರ ಮುಂದೆ ಬಜೆಟ್‌ ವಿವರಗಳನ್ನು ಬಹಿರಂಗಪಡಿಸಿದ್ದರು. 1950ರಲ್ಲಿ ರಾಷ್ಟ್ರಪತಿ ಭವನದಲ್ಲಿ ಬಜೆಟ್ ಮುದ್ರಣದ ಸಮಯದಲ್ಲಿ ಸೋರಿಕೆಯಾಗಿತ್ತು. ನಂತರ ಸರ್ಕಾರವು 1980ರಲ್ಲಿ ಬಜೆಟ್‌ನ ಮುದ್ರಿತ ಪ್ರತಿಯನ್ನು ಮಿಂಟೋ ರಸ್ತೆಯಲ್ಲಿರುವ ಸೆಕ್ರೆಟರಿಯೇಟ್ ಕಟ್ಟಡದ ನಾರ್ತ್ ಬ್ಲಾಕ್ ನೆಲಮಾಳಿಗೆಗೆ ವರ್ಗಾಯಿಸಿತು.

3 ಬಾರಿಯ ಬಜೆಟ್‌ ಗೌಪ್ಯತೆಯ ಉಲ್ಲಂಘನೆಯಿಂದ ಹಣಕಾಸು ಮಂತ್ರಿ ರಾಜೀನಾಮೆ ನೀಡಬೇಕಾಯಿತು. ಸಾರ್ವಜನಿಕ ಆಕ್ರೋಶಕ್ಕೂ ಕಾರಣವಾಯಿತು. ಈಗ ಕಟ್ಟುನಿಟ್ಟಾದ ಭದ್ರತಾ ಕ್ರಮವನ್ನು ಒದಗಿಸಿದ್ದು, ಸೋರಿಕೆಯಾಗದಂತೆ ಎಚ್ಚರವಹಿಸಲಾಗುತ್ತಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »