Karunadu Studio

ಕರ್ನಾಟಕ

ಆಶಾಗೋಪುರದ ಬಜೆಟ್‌ಗಳಿಂದ ಉಪಯೋಗವಿಲ್ಲ : ನೀರು ಮತ್ತು ಹಣದ ಹಂಚಿಕೆ ಸಮವಾಗಿರಬೇಕು – Kannada News | Ashagopur budgets are useless: water and money should be distributed equally


ಚಿಕ್ಕಬಳ್ಳಾಪುರ : ಜನಸಾಮಾನ್ಯರ ಹೊರೆ ಕಡಿಮೆ ಮಾಡುವ ಬಜೆಟ್‌ಗಳ ಬದಲಿಗೆ ಆದರೆ ಹೊರೆ ಹೆಚ್ಚಾಗುತ್ತಿದ್ದು, ಇದರಿಂದ ಬಜೆಟ್ ಎಂಬುದು ಕೇವಲ ಆಶಾಗೋಪುರವಾಗಿ ಪರಿಣಮಿಸಿದೆ. ನೀರಾವರಿಯಲ್ಲಿ ಕ್ರಾಂತಿಕಾರಕ ಬದಲಾವಣೆ ಕಾಣದೆ ಅಸಮಾನತೆಯು ಹೆಚ್ಚಾಗುತ್ತಿದ್ದು, ನೀರು ಮತ್ತು ಹಣ ಸಮಾನ ಹಂಚಿಕೆಯಾದಲ್ಲಿ ಮಾತ್ರ ಸಮಾನತೆ ಕಾಣಲು ಸಾಧ್ಯ ಪರಿಸರವಾದಿ ಚೌಡಪ್ಪ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯಾ ನಂತರದ ಭಾರತದ ಮೊದಲ ಬಜೆಟ್ 250 ಕೋಟಿಯಾಗಿದ್ದರೆ, ಪ್ರಸ್ತುತ ನೆನ್ನೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಗಾತ್ರ ಬರೋ ಬ್ಬರಿ 56 ಲಕ್ಷ ಕೋಟಿ. ವರ್ಷದಿಂದ ವರ್ಷಕ್ಕೆ ಬಡವರ ರಕ್ತಹೀರಿ ಬಜೆಟ್‌ನಲ್ಲಿ ಗಾತ್ರ ಹೆಚ್ಚುತ್ತಿದೆಯೇ ಹೊರತು ಜನರ ಬಡತನ ನಿರ್ಮೂಲನೆ ಆಗುತ್ತಿಲ್ಲ. ಗ್ರಾಮಮಟ್ಟದಿಂದ ಸಮಸ್ಯೆಗಳ ಪರಿಹಾರ ಕ್ಕೆ ಗಮನ ಹರಿಸದಿರುವುದು ಇದಕ್ಕೆ ಕಾರಣವಾಗಿದೆ ಎಂದರು.

ಇದನ್ನೂ ಓದಿ: Chikkaballapur News: ಘಂಟಂವಾರಿಪಲ್ಲಿಯಲ್ಲಿ: ಗಮನ ಸೆಳೆದ ಮಕ್ಕಳ ಗ್ರಾಮ ಸಭೆ: ಸಮಸ್ಯೆಗಳ ಅನಾವರಣ

ಕಳೆದ 75 ವರ್ಷಗಳಿಂದ ಬಂಡನೆಯಾಗಿರುವ ಬಜೆಟ್‌ಗಳ ಅನುದಾನ ಎಲ್ಲಿ ಹೋಗುತ್ತಿದೆ ಎಂಬು ದೇ ಚಿದಂಬರ ರಹಸ್ಯವಾಗಿದ್ದು, ಇಂದಿಗೂ ದೇಶದ 90 ಕೋಟಿ ಜನರು ಇನ್ನೂ ಬಿಪಿಎಲ್ ಆಗಿದ್ದಾ ರೆ. ಅಲ್ಲದೆ ವೈಜ್ಞಾನಿಕವಾಗಿ ಅನುದಾನ ಹಂಚಿಕೆಯಾಗುವ ಬದಲಿಗೆ ರಾಜಕೀಯವಾಗಿ ಹಂಚಿಕೆ ಯಾಗುತ್ತಿದ್ದು, ಬಜೆಟ್‌ಗಳ ಅನುದಾನ ಹಂಚಿಕೆ ಹಾಗೂ ವ್ಯಯದ ಕುರಿತು ಪುನರ್ ಪರಿಶೀಲನೆ ಆಗಬೇಕಿದೆ. ನೀರು, ಕೃಷಿ, ವಿದ್ಯುತ್, ಅರಣ್ಯ ಅಭಿವೃದ್ಧಿಗೆ ನೀಡಿದರೆ ದೇಶದ ಶೇ.70ರಷ್ಟು ಜನತೆ ಸ್ವಾವಲಂಭಿಗಳಾಗಲು ಸಹಕಾರಿಯಾಗಲಿದೆ ಎಂದು ನುಡಿದರು.

ನರೇಂದ್ರಮೋದಿ ಅವರು ಪ್ರಧಾನಿಯಾದ ನಂತರ ದೇಶದಲ್ಲಿ ರಸ್ತೆ, ರೈಲ್ವೆ, ಕೈಗಾರಿಕೆ ಸೇರಿದಂತೆ ಇತರೆ ಅಭಿವೃದ್ಧಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆದರೆ ದೇಶದ ಪ್ರಧಾನ ಕಸುಬಾದ ಕೃಷಿ ಕ್ಷೇತ್ರ ಮಾತ್ರ ಅಭಿವೃದ್ಧಿಯಾಗುವ ಬದಲು ಅವಸಾನದತ್ತ ಸಾಗುತ್ತಿದೆ. ಕೃಷಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫವಾಗಿದ್ದು, ಇದರಿಂದ ಲಕ್ಷಾಂತರ ಮಂದಿ ಕೃಷಿ ಕೈಬಿಡು ತ್ತಿದ್ದಾರೆ. ಆದ್ದರಿಂದ ದೇಶದಲ್ಲಿ ಮಂಡಿಸುವ ಆಯವ್ಯಯಗಳು ಹಣದ ಜೊತೆಗೆ ನೀರಿನ ಬಜೆಟ್‌ ಗಳಾಗಿದ್ದರೆ ಮಾತ್ರ ಸಾಧ್ಯವೆಂದರು.

ದೇಶದಲ್ಲಿ ಜಲಸಂಪತ್ತು ಸದ್ಬಳಕೆ ಆಗುತ್ತಿಲ್ಲ, ನದಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಕನಿಷ್ಟ ಪ್ರಯತ್ನ ಆಗಲಿಲ್ಲ. ಈ ಹಿಂದೆ ವಿರೋಧ ಪP??Àದಲ್ಲಿದ್ದಾಗ ಡಿ.ಕೆ.ಶಿವಕುಮಾರ್ ಅವರು ಮೇಕೆ ದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಮಾಡಿದರು. ಅಧಿಕಾರ ದೊರೆತ ಬಳಿಕ ಆದರತ್ತ ಗಮನ ಹರಿಸುತ್ತಿಲ್ಲ. ಇನ್ನು ನದಿ ಜೋಡಣೆ ವಿಚಾರಕ್ಕೆ ಸಂಬAಧಿಸಿ ನದಿ ಜೋಡಣೆ ಬೇಡವೇ ಬೇಡ ಎಂದು ಎಚ್‌ಕೆ ಪಾಟೀಲರು ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ನದಿ ಜೋಡಣೆ ಬೇಡ ಎನ್ನುವ ಕಾಂಗ್ರೆಸ್ ಮೇಕೆದಾಟು ಬೇಕು ಎಂದು ಪಾದಯಾತ್ರೆ ಮಾಡುತ್ತಾರೆ. ಇದು ಯಾವ ರಾಜಕಾರಣ ಎಂದು ಪ್ರಶ್ನಿಸಿದರು.

ರಾಜ್ಯಸ್ಥಾನವನ್ನು ಹೊರತಡುಪಡಿಸಿ ದೇಶದಲ್ಲಿಯೇ ಅತಿ ಹೆಚ್ಚು ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶದಲ್ಲಿ ಬೆಂಗಳೂರು ಸುತ್ತಲಿನ 80 ತಾಲೂಕುಗಳಿವೆ. ಈ ಎಲ್ಲ ತಾಲೂಕುಗಳಿಗೆ ಕನಿಷ್ಠ 180 ಟಿಎಂಸಿ ನೀರಿನ ಅಗತ್ಯವಿದೆ. ಆದರೆ ಈ ಭಾಗಕ್ಕೆ ಅಗತ್ಯವಿರುವ ನೀರಿನ ಪ್ರಮಾಣ ಮತ್ತು ಅದು ದೊರೆಯುವ ಮೂಲಗಳ ಬಗ್ಗೆ ಪರಿಶೀಲನೆ ನಡೆಸುವತ್ತ ಸರ್ಕಾರಗಳು ಮಾತ್ರ ಗಮನ ಹರಿಸುತ್ತಿಲ್ಲ. ಕಷ್ಣಾ, ಕಾವೇರಿ ಸೇರಿದಂತೆ ಇತರೆ ಮೂಲಗಳಿಂದ ನೀರು ನೀಡುವ ಕೆಲಸವಾಗಬೇಕು. ಆದರೆ ಅದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡುತ್ತಿಲ್ಲ. ಜನರು ಜಾಗೃತರಾಗಿ ಪ್ರಶ್ನಿಸದಿದ್ದರೆ ಸಮಸ್ಯೆಗೆ ಎಂದಿಗೂ ಮುಕ್ತಿ ಸಿಗುವುದಿಲ್ಲ ಎಂದರು.

*
ಎತ್ತಿನಹೊಳೆ ಎಂಬ ಅವೈಜ್ಞಾನಿಕ ಯೋಜನೆ ಮುಂದಿಟ್ಟುಕೊಂಡು ರಾಜಕಾರಣ ಮಾಡಲಾಗು ತ್ತಿದೆ. ಈ ಯೋಜನೆಯ ಹೆಸರಿನಲ್ಲಿ ಸಾವಿರಾರು ಕೋಟಿ ತೆರಿಗೆ ಹಣ ಪೋಲಾಗುತ್ತಿದೆ ಹೊರತು, ಎತ್ತಿನಹೊಳೆಯಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಒಂದು ಹನಿ ನೀರು ಬರಲು ಸಾಧ್ಯವಿಲ್ಲ ಎಂದು ಚೌಡಪ್ಪ ನುಡಿದರು. ಪ್ರಸ್ತುತ ವೈಜ್ಞಾನಿಕಯುಗದಲ್ಲಿಯೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸುಮಾರು 45 ಸಾವಿರ ಟಿಎಂಸಿ ನೀರು ಸಮುದ್ರ ಸೇರುತ್ತಿದೆ. ನದಿ ಜೋಡಣೆಯಿಂದ ದೇಶದ ಬರಪೀಡಿತ ಪ್ರದೇಶಗಳ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಆದರೆ ಗಮನಹರಿಸುವವರು ಇಲ್ಲವಾಗಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »