Karunadu Studio

ಕರ್ನಾಟಕ

Nenapugala Maatu Madhura Movie: ಸೆವೆನ್ ರಾಜ್ ನಟಿಸಿ, ನಿರ್ಮಿಸಿರುವ ʼನೆನಪುಗಳ ಮಾತು ಮಧುರʼ ಚಿತ್ರದ ಟೀಸರ್, ಹಾಡು ರಿಲೀಸ್‌ – Kannada News | Nenapugala Maatu Madhura Movie Nenapugala Matu Madhura Movie Teaser and songs released


ಬೆಂಗಳೂರು: ಪತ್ರಕರ್ತ, ಕಾರ್ಯಕಾರಿ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಪರಿಚಯವಿರುವ ಅಫ್ಜಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನೃತ್ಯ ನಿರ್ದೇಶನದ ಜತೆಗೆ ನಿರ್ದೇಶನವನ್ನು ಮಾಡಿರುವ ಹಾಗೂ RED & WHITE ಸೆವೆನ್ ರಾಜ್ ನಟಿಸಿ, ನಿರ್ಮಿಸಿರುವ ʼನೆನಪುಗಳ ಮಾತು ಮಧುರʼ ಚಿತ್ರದ (Nenapugala Maatu Madhura Movie) ಟೀಸರ್ ಹಾಗೂ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ʼನೆನಪುಗಳ ಮಾತು ಮಧುರʼ ಚಿತ್ರದಲ್ಲಿ ಆರು ಕಥೆಗಳ ಸಂಗಮವಿದೆ. ಹಾಗೆ ಆರು ಜೋಡಿಗಳ ಪ್ರೇಮಕಥೆಯೂ‌ ಇದೆ. ಸದ್ಯದಲ್ಲೇ ನಾವು ಎದುರುಸುತ್ತಿರುವ ಹಾಗೂ ಕಣ್ಣಮುಂದೆ ನೋಡುತ್ತಿರುವ ಕೆಲವು ವಿಷಯಗಳೇ ಈ ಚಿತ್ರದ ಕಥೆಗೆ ಸ್ಪೂರ್ತಿ. ಪ್ರಸ್ತುತ ಚಿತ್ರದ ಚಿತ್ರೀಕರಣ ಹಾಗೂ ಉಳಿದ ಕೆಲಸಗಳು ಮುಕ್ತಾಯವಾಗಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಇಂದು ಟೀಸರ್ ಹಾಗೂ ಹಾಡುಗಳು ಅನಾವರಣವಾಗಿದೆ. FMD music ಯೂಟ್ಯೂಬ್ ಚಾನಲ್‌ನಲ್ಲಿ ಹಾಡುಗಳನ್ನು ನೋಡಬಹುದು ಎಂದು ನಿರ್ದೇಶಕ ಅಫ್ಜಲ್ ತಿಳಿಸಿದರು.

ನಿರ್ದೇಶಕ ಅಫ್ಜಲ್ ಹೇಳಿದ‌ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಜತೆಗೆ ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದೇನೆ.‌ ಮಾರ್ಚ್‌ನಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಸುತ್ತಿದ್ದೇನೆ ಎಂದು ತಿಳಿಸಿದ ನಿರ್ಮಾಪಕ ಸೆವೆನ್ ರಾಜ್,‌ ನನಗೆ ಏಳು ಭಾಷೆಗಳ ಚಿತ್ರಗಳಲ್ಲಿ ನಟಿಸುವ ಆಸೆಯಿದೆ. ಈಗಾಗಲೇ ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದೇನೆ. ಸದ್ಯದಲ್ಲೇ ಹಿಂದಿ ಚಿತ್ರದಲ್ಲೂ ಅಭಿನಯಿಸಲಿದ್ದೇನೆ ಎಂದರು.

ಈ ಸುದ್ದಿಯನ್ನೂ ಓದಿ | Valentines Day Shopping 2025: ಆಗಲೇ ಶುರುವಾಯ್ತು ವ್ಯಾಲೆಂಟೈನ್ಸ್ ಡೇ ಶಾಪಿಂಗ್ !

ಹಾಡುಗಳ ಕುರಿತು ರಾಜು ಎಮ್ಮಿಗಾನೂರು ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸಿರುವ ವಸಿಷ್ಠ ಬಂಟನೂರು, ರಣವೀರ್, ರಾಜ್ ಪ್ರಭು, ಅಂಜಲಿ, ರೇಖಾ ರಮೇಶ್, ವಾದ್ಯ, ರನ್ವಿತ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಆಡಿಯೋ ಸಂಸ್ಥೆಯ ರಮೇಶ್ ಭಂಡಾರಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಚಿತ್ರದ ಉಳಿದ ತಾರಾಗಣದಲ್ಲಿ ವಿನಯ್ ಕುಮಾರ್ , ನಾಗರಾಜ್ ಗುಬ್ಬಚ್ಚಿ, ನಾಗೇಂದ್ರ ಅರಸ್ , ಹುಸೇನ್, ಅರವಿಂದ್ ನಟಿಸಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »