ಬೆಂಗಳೂರು:
ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಸದಸ್ಯರಾಗಿ ಏಳು ಮಂದಿಯನ್ನು ನೇಮಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಪತ್ರಿಕೋದ್ಯಮ, ಸಿನಿಮಾ ಕ್ಷೇತ್ರದ ಪ್ರತಿನಿಧಿಗಳನ್ನು ಸಾಮಾನ್ಯ ಸಮಿತಿಗೆ ಸದಸ್ಯರನ್ನು ನೇಮಕ ಮಾಡಲಾಗಿದೆ.
ಹಿರಿಯ ಪತ್ರಕರ್ತರಾದ ಕೊಪ್ಪಳದ ಸಾವಿತ್ರಿ ಮಜುಂದಾರ್, ಶಿವಮೊಗ್ಗದ ನಮ್ಮ ನಾಡು ಕನ್ನಡ ಡೈಲಿಯ ಸಿನಿಮಾ ವಿಶ್ಲೇಷಕ ಹೆಚ್ ದೇಶಾದ್ರಿ, ಚಿದಾನಂದ ಪಟೇಲ್ ಹಾಗೂ ಸಿನಿಮಾ ಕಲಾವಿದರಾದ ನಿಖಿತಾಸ್ವಾಮಿ, ಸಿನಿಮಾ ಪ್ರಚಾರ ಡಿ.ಜಿ. ವೆಂಕಟೇಶ್, ಚಿತ್ರೋದ್ಯಮಿ ವಿಷ್ಣು ಕುಮಾರ್ ಹಾಗೂ ಸಿನಿಮಾ ತಂತ್ರಜ್ಞರಾದ ಐವಾನ್ ಡಿಸಿಲ್ವ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಚಲನಚಿತ್ರ ಅಕಾಡೆಮಿಯ ಸಾಮಾನ್ಯ ಸಮಿತಿಯ ಸದಸ್ಯರುಗಳನ್ನಾಗಿ ನೇಮಿಸಲಾಗಿದೆ. ನಿಗಮ ಮಂಡಳಿ ಪಟ್ಟಿ ಬಿಡುಗಡೆ: ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಸಾಧು ಕೋಕಿಲ ನೇಮಕ; ಇಲ್ಲಿದೆ ಸಂಪೂರ್ಣ ಮಾಹಿತಿ
ಸರ್ಕಾರದ ಮುಂದಿನ ಆದೇಶದವರೆಗೂ ನೂತನ ಸದಸ್ಯರು ರಾಜ್ಯ ಚಲನಚಿತ್ರ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.