ಧಾರವಾಡ:
ರೈತ ದಂಪತಿ ನಲ್ಲೂ ಒಂದಾದ ಘಟನೆ ಧಾರವಾಡದಲ್ಲಿ ನಡೆದಿದೆ. ಈ ದಂಪತಿ ರಾತ್ರಿ ಊಟ ಮಾಡಿ ಒಟ್ಟಿಗೆ ಮಲಗಿದವರು ಬೆಳಿಗ್ಗೆಯಾದರೂ ಏಳದೇ ಇದ್ದಾಗ ಕುಟುಂಬಸ್ಥರು ಎದ್ದೇಳಿಸಲು ನೋಡಿದ್ದಾರೆ. ಆದರೆ ಇಬ್ಬರೂ ಎದ್ದಿಲ್ಲ. ಸಾವಿನ ಮನೆಗೆ ಇಬ್ಬರೂಜೊತೆಯಾಗಿ ನಡೆದಿದ್ದಾರೆ.
ಧಾರವಾಡ ತಾಲ್ಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲಿಈ ಘಟನೆ ನಡೆದಿದೆ. ಈಶ್ವರ್ ಅರೇರ್(82) ಹಾಗೂ ಪಾರ್ವತಿ ಅರೇರ್ (73) ಎಂಬುವರೇ ಸಾವಿನಲ್ಲೂ ಒಂದಾದ ರೈತ ದಂಪತಿಗಳು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪತ್ನಿ ಪಾರ್ವತಿಯನ್ನು ಪತಿ ಈಶ್ವರ್ ಅರೇರ್ ಅವರೇ ಆರೈಕೆ ಮಾಡುತ್ತಿದ್ದರು. ನಿನ್ನೆ ರಾತ್ರಿ ಒಟ್ಟಿಗೆ ಊಟ ಮಾಡಿದ ದಂಪತಿಗಳು ಮಲಗಿದ್ದಾರೆ. ಆದರೆ ಬೆಳಿಗ್ಗೆ ಎಬ್ಬಿಸಲು ಹೋದಾಗ ಇಬ್ಬರೂ ಎದ್ದಿಲ್ಲ.ಈಶ್ವರ್ ಹಾಗೂ ಪಾರ್ವತಿ ದಂಪತಿಗೆ ನಾಲ್ವರು ಪುತ್ರಿಯರು. 12 ಮಂದಿ ಮೊಮ್ಮಕ್ಕಳಿದ್ದಾರೆ. ಇಂತಹ ರೈತ ದಂಪತಿಗಳು ನಿನ್ನೆ ಮಲಗಿ, ಇಂದು ಬೆಳಿಗ್ಗೆ ಇನ್ನಿಲ್ಲವಾಗಿ ಸಾವಿನಲ್ಲೂ ಒಟ್ಟಾಗಿ ಪಯಣಿಸಿದ್ದಾರೆ.