ಹಾವೇರಿ:
ಬಹಿರ್ದೆಸೆ ಮುಗಿಸಿದ ಬಳಿಕ ಕೆರೆಗೆ ತೆರಳಿ ಕೈಕಾಲು ತೊಳೆಯುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಬಾಲಕರಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿಯ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಜಗದೀಶ್ ನಾಗೋಜಿ ಎಂಬುವರ ಪುತ್ರ ನಿಖಿಲ್ ನಾಗೋಜಿ(11) ಮತ್ತು ಪ್ರಕಾಶ್ ಚೋಳಪ್ಪನವರ್ ಎಂಬುವರ ಪುತ್ರ ಧನುಷ್ ಚೋಳಪ್ಪನವರ್ (13) ಎಂಬವರೇ ಮೃತ ಬಾಲಕರಾಗಿದ್ದಾರೆ.
ಈ ಇಬ್ಬರು ಗ್ರಾಮದ ಕಾರ್ಯಕ್ರಮವೊಂದಕ್ಕೆ ತೆರಳಿ, ಬಹಿರ್ದೆಸೆ ಮುಗಿಸಿ, ಕೆರೆಗೆ ಕೈಕಾಲು ತೊಳೆಯಲು ದೊಡ್ಡಕೆರೆಗೆ ಹೋಗಿದ್ದರು. ಈ ವೇಳೆಯಲ್ಲಿ ಕಾಲುಜಾರಿ ಕೆರೆಗೆ ಬಿದ್ದ ಒಬ್ಬನನ್ನು ರಕ್ಷಣೆ ಮಾಡಲು ಹೋಗಿ, ಇಬ್ಬರೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.