Karunadu Studio

ಕರ್ನಾಟಕ

ಒಟಿಟಿಗೆ ಬರೋಕೆ ರೆಡಿ ಆಯ್ತು ‘ತಾಂಡೇಲ್’ ಸಿನಿಮಾ; ಯಾವಾಗ ಗೊತ್ತಾ….?


ತೆಲಂಗಾಣ :

   ನಾಗ ಚೈತನ್ಯ ವೃತ್ತಿ ಜೀವನದಲ್ಲಿ ದೊಡ್ಡ ಯಶಸ್ಸು ಕಂಡಿದ್ದು ‘ತಾಂಡೇಲ್’ ಚಿತ್ರದ ಮೂಲಕ. ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡಿದೆ. ಈ ಚಿತ್ರ 100 ಕೋಟಿ ರೂಪಾಯಿ ಗಳಿಕೆ ಮಾಡಿದ ಬಳಿಕ ಒಟಿಟಿಗೆ ಬರೋಕೆ ರೆಡಿ ಆಗಿದೆ. ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಅವರ ಪರ್ಫಾರ್ಮೆನ್ಸ್​​ನ ಒಟಿಟಿಯಲ್ಲಿ ನೋಡುವ ದಿನ ಹತ್ತಿರವಾಗಿದೆ. ಈ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಇಲ್ಲಿದೆ ಮಾಹಿತಿ.

   ನಾಗ ಚೈತನ್ಯ ಅವರು ಇತ್ತೀಚೆಗೆ ಸಾಲು ಸಾಲು ಸೋಲು ಕಂಡರು. ಅವರಿಗೆ ‘ತಾಂಡೇಲ್’ ಚಿತ್ರದಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಈಗ ಅವರು ಗೆದ್ದು ತೋರಿಸಿದ್ದಾರೆ. ಈ ಮೂಲಕ ವಿವಾಹ ಆದ ಬಳಿಕ ರಿಲೀಸ್ ಆದ ಮೊದಲ ಚಿತ್ರವೇ ಹಿಟ್ ಆಗಿದೆ. ಹೀಗಾಗಿ, ಅನೇಕರು ಶೋಭಿತಾ ಅವರನ್ನು ಅದೃಷ್ಟ ದೇವತೆ ಎನ್ನುತ್ತಿದ್ದಾರೆ. ಈಗ ಸಿನಿಮಾ ಒಟಿಟಿಗೆ ಕಾಲಿಡುತ್ತಿದೆ.

   ನೆಟ್​ಫ್ಲಿಕ್ಸ್ ಒಟಿಟಿ ಈ ಚಿತ್ರದ ಹಕ್ಕನ್ನು ಪಡೆದಿದೆ. ಮಾರ್ಚ್​ 7ರಂದು ಸಿನಿಮಾ ಒಟಿಟಿಯಲ್ಲಿ ಪ್ರಸಾರ ಆಗುವ ನಿರೀಕ್ಷೆ ಇದೆ. ಈ ಸಿನಿಮಾ ನೈಜ ಘಟನೆ ಆಧರಿಸಿದೆ. ಮೀನುಗಾರನೋರ್ವ ಸಮುದ್ರದಲ್ಲಿ ಮೀನು ಹಿಡಿಯಲು ಹೋದಾಗ ಅಂತಾರಾಷ್ಟ್ರೀಯ ಗಡಿ ದಾಟಿ ತೆರಳುತ್ತಾನೆ. ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಾನೆ. ಇದು ಚಿತ್ರದ ಕಥೆ. ಈ ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದಾರೆ.

   ನಾಗ ಚೈತನ್ಯ ಅವರು ‘ತಾಂಡೇಲ್’ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಿದ್ದಾರೆ. ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿ ಮತ್ತಷ್ಟು ಸಂಚಲನ ಸೃಷ್ಟಿಸುವ ನಿರೀಕ್ಷೆ ಇದೆ. ಸದ್ಯ ಥಿಯೇಟರ್​​ನಲ್ಲಿ ಸಿನಿಮಾದ ಹವಾ ಕಡಿಮೆ ಆಗುತ್ತಿದ್ದು, ಚಿತ್ರ ಒಟಿಟಿಗೆ ಬರೋಕೆ ಇದು ಸರಿಯಾದ ಸಮಯ ಎಂದು ತಂಡ ನಿರ್ಧರಿಸಿದಂತೆ ಇದೆ. 

   2023ರಲ್ಲಿ ರಿಲೀಸ್ ಆದ ನಾಗ ಚೈತನ್ಯ ನಟನೆಯ ‘ಕಸ್ಟಡಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿರಲಿಲ್ಲ. ಆ ಬಳಿಕ ಅವರು ಒಪ್ಪಿಕೊಂಡಿದ್ದು, ‘ತಾಂಡೇಲ್’. ಸದ್ಯ ನಾಗ ಚೈತನ್ಯ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »