ಕೊರಟಗೆರೆ:-
ಕನ್ನಡ ಧ್ವಜಸ್ತಂಭದ ತೆರವು ಕನ್ನಡಿಗರಿಗೆ ಮಾಡಿದ ಅವಮಾನ , ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದಲ್ಲದೆ, ಹೆತ್ತ ತಾಯಿಗೆ ದ್ರೋಹ ಮಾಡಿದಂತೆ, ಹೆತ್ತ ತಾಯಿಯ ಕರುಳು ಕುಯ್ದಂತೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು.
ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣದಿಂದ ಪಪಂ ಕಚೇರಿಯ ವರೇಗೆ ಕರವೇಯಿಂದ ಸೋಮವಾರ ನಡೆದ ಬೃಹತ್ ಪ್ರತಿಭಟನೆಯ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರಳಸಜ್ಜನ ರಾಜಕಾರಣಿ ಗೃಹಸಚಿವ ಡಾ.ಜಿ.ಪರಮೇಶ್ವರ ಸ್ವಕ್ಷೇತ್ರದಲ್ಲೇ ರಾತ್ರೋರಾತ್ರಿ ಕನ್ನಡ ಧ್ವಜಸ್ತಂಭದ ತೆರವು ನಡೆದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ, ಸಿಎಂ ಸಿದ್ದರಾಮಯ್ಯ ಮತ್ತು ಗೃಹಸಚಿವ ಡಾ.ಜಿ.ಪರಮೇಶ್ವರ ಜೊತೆ ನಾನೇ ಖುದ್ದಾಗಿ ಮಾತನಾಡ್ತೀನಿ, ಕನ್ನಡ ಧ್ವಜಸ್ತಂಭದ ತೆರವು ಕೆಲಸವನ್ನ ಕನ್ನಡಿಗ ಅಧಿಕಾರಿಗಳೇ ಮಾಡ್ತಿದ್ರೇ ನಾವು ಯಾರ ವಿರುದ್ದ ಹೋರಾಟ ಮಾಡ್ಬೇಕು, ಹೆತ್ತತಾಯಿಯ ಕರುಳನ್ನು ಕುಯ್ಯುವ ಕೆಲಸವನ್ನು ಅಧಿಕಾರಿವರ್ಗ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಕನ್ನಡ ಧ್ವಜಸ್ತಂಬ ತೆರವು ವಿಚಾರದಲ್ಲಿ ನಾವು ಎಲ್ಲಿದ್ದೇವೆ ನಾವು ಎಲ್ಲಿ ವಾಸ ಮಾಡುತ್ತಿದ್ದೇವೆ, ನಾವು ತಮಿಳುನಾಡು, ಕೇರಳ, ಮಹಾರಾಷ್ಟ್ರದ ವಿರುದ್ದ ಹೋರಾಟ ಮಾಡಬೇಕಾ ಅಥವಾ ನಮ್ಮ ಅಧಿಕಾರಿಗಳ ವಿರುದ್ದ ಮಾಡಬೇಕಾ, ಹೆತ್ತತಾಯಿಗೆ ದ್ರೋಹ ಮಾಡೋದು ಒಂದೇ ನಾಡಧ್ವಜವನ್ನು ಕಿತ್ತು ಹಾಕೋದು ಒಂದೇ ಅಲ್ವಾ, ಪಾಕಿಸ್ತಾನ ಗಡಿಯಲ್ಲಿ ರಾಷ್ಟ್ರಧ್ವಜ ತೆಗೆಸಿದ ರೀತಿ ನಮ್ಮ ಕೊರಟಗೆರೆಯಲ್ಲಿ ಕನ್ನಡಧ್ವಜ ತೆಗೆಸಿ ಖುಷಿ ಪಡ್ತೀರಾ ಎಂದು ಕಿಡಿಕಾರಿದರು,
ಕನ್ನಡ ನೆಲ-ಬಾಷೆಗಾಗಿ ಇನ್ನೂ ನೂರು ಸಲ ಜೈಲಿಗೆ ಹೋಗಲು ನಾನು ಸದಾಸಿದ್ದ, ಕೋರ್ಟ್ ಮತ್ತು ಜೈಲಿಗೆ ಹೋಗಲು ಹೆದರುವ ಮಗನಲ್ಲ ನಾನು, ಕನ್ನಡಾಂಭೆಯ ರಕ್ಷಣೆ ಮಾಡಲು ಹೋದ ನನಗೇ 16ಪ್ರಕರಣ ಹಾಕಿ 18ದಿನ ಜೈಲಲ್ಲಿ ಹಾಕಿದ್ರು. ಕನ್ನಡ ನೆಲ ಮತ್ತು ಬಾಷೆಗೆ ಕುತ್ತು ಬಂದರೇ ಯಾರು ಸಹಿಸಿಕೊಬಾದ್ರು ಎಂದರು.
ಪ್ರತಿಭಟನೆಯಲ್ಲಿ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಸಣ್ಣೀರಪ್ಪ, ಉಪಾಧ್ಯಕ್ಷ ವೀರಭದ್ರಪ್ಪ, ಬೆಂಗಳೂರು ನಗರಧ್ಯಕ್ಷ ಧರ್ಮರಾಜ್, ಉಪಾಧ್ಯಕ್ಷ ಪುಟ್ಟೇಗೌಡ, ಕಾರ್ಯಧರ್ಶಿ ಮಲ್ಲಿಕಾರ್ಜುನ್, ಜಿಲ್ಲಾಧ್ಯಕ್ಷ ರಂಗಸ್ವಾಮಿ, ಮಹಿಳಾ ಅಧ್ಯಕ್ಷೆ ಸುನಿತಾಮೂರ್ತಿ, ಮಧುಗಿರಿ ಶಿವಕುಮಾರ್, ಶಿರಾ ಕಿಶೋರ್, ಕುಣಿಗಲ್ ಮಂಜುನಾಥ್, ಚಿಕ್ಕನಾಯಕನಹಳ್ಳಿ ಪ್ರಕಾಶ್, ಕೊರಟಗೆರೆ ನಗರಧ್ಯಕ್ಷ ಸೈಪುಲ್ಲಾ ಸೇರಿದಂತೆ ನೂರಾರು ಜನ ಕರವೇ ಕಾರ್ಯಕರ್ತರು ಇದ್ದರು.
ಕರವೇಯಿಂದ ಪ್ರತಿಭಟನೆ…
ಸರಕಾರಿ ಬಸ್ ನಿಲ್ದಾಣದಿಂದ ಪ ಪಂ ಯ ಮುಂಭಾಗದ ವರೇಗೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ನೂರಾರು ಕರವೇ ಕಾರ್ಯಕರ್ತರು ಕನ್ನಡ ಧ್ವಜಸ್ತಂಭಾ ತೆರವಿನ ವಿರುದ್ದ ದಿಕ್ಕಾರ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿ ವೇದಿಕೆ ಕಾರ್ಯಕ್ರಮ ಮುಗಿದ ನಂತರ ತಹಶೀಲ್ದಾರ್ ಮಂಜುನಾಥ್‍ಗೆ ಕರವೇಯಿಂದ ತೆರವು ಮಾಡಿದ ಸ್ಥಳ ಅಥವಾ ನಿಗದಿತ ಸ್ಥಳದಲ್ಲಿ ಮತ್ತೇ ಕನ್ನಡ ಧ್ವಜಸ್ತಂಭ ನಿರ್ಮಾಣಕ್ಕೆ ಮನವಿ ಸಲ್ಲಿಸಿದರ
ವಾಟಾಳ್ ನಾಗರಾಜು ಕರೆ ನೀಡಿರುವ ಕರ್ನಾಟಕ ಬಂದ್ ಗೆ ನನ್ನ ಬೆಂಬಲವಿದೆ ಆದರೆ ಕರ್ನಾಟಕದ ಎಲ್ಲಾ ಸಮಸ್ಯೆಗಳಿಗೆ ಬಂದ್ ಮಾಡೋದೇ ಪರಿಹಾರವಲ್ಲ, ಮಾರ್ಚ್ ಮಾಹೆಯಲ್ಲಿ ಮಕ್ಕಳಿಗೆ ಪರೀಕ್ಷೆಗಳು ನಡೆಯಲಿವೆ, ಬಂದ್‍ಗೆ ಯಾವಾಗ ಬೇಕಾದ್ರು ಕರೆ ಕೊಡಬಹುದು, ಆದರೇ ಮಕ್ಕಳ ಭವಿಷ್ಯದ ಪರೀಕ್ಷೆಯನ್ನು ಮುಂದುಡುವ ಆದೇಶಕ್ಕೆ ಅರ್ಥವೇ ಇಲ್ಲ, ಆದ್ದರಿಂದ ಮಾ.23ರಂದು ಕರೆ ನೀಡಿರುವ ಬಂದ್‍ಗೆ ನನ್ನ ಬೆಂಬಲವಿಲ್ಲ ಎಂದು ಕರಾವೇ ರಾಜ್ಯಾಧ್ಯಕ್ಷ ನಾರಾಯಣಗೌಡರು ಪ್ರತಿಕ್ರಿಸಿದರು
56ಅಡಿ ಎತ್ತರದ ಕನ್ನಡ ಧ್ವಜಸ್ತಂಭನಾ ಕೊರಟಗೆರೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದು, ನಾಕಬಂಧಿ ಹಾಕಿ ಮಧ್ಯರಾತ್ರಿ ತೆರವು ಮಾಡಿದ್ರು, ಅಧಿಕಾರಿಗಳಿಗೆ ನಾನು ತೆರವಿಗೆ ಮಾಡಿರುವ ಆದೇಶ ಪ್ರತಿ ಕೇಳಿದ್ರೇ ಇಲ್ಲಿವರ್ಗೆ ನೀಡಿಲ್ಲ, ನನ್ನ ಹೋರಾಟದ ಗುರುಗಳಾದ ನಾರಾಯಣಗೌಡ್ರು ನನಗೇ ನ್ಯಾಯ ಕೋಡಿಸ್ತಾರೇ , ಕರ್ನಾಟಕ ರಾಜ್ಯ ಮತ್ತು ತುಮಕೂರು ಜಿಲ್ಲೆಯ ಎಲ್ಲಾ ಕರವೇ ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದ.-ನಟರಾಜ್.ಕೆ.ಎನ್. ಕರವೇ ಅಧ್ಯಕ್ಷ. ಕೊರಟಗೆರೆ