ದುಬೈ
ಮಂಗಳವಾರ ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ನಾಲ್ಕು ವಿಕೆಟ್‌ಗಳ ಸೋಲು ಕಂಡಿದ್ದು, ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಏಕದಿನ ಕ್ರಿಕೆಟ್‌ನಿಂದ ತಕ್ಷಣವೇ ನಿವೃತ್ತಿಯಾಗುವುದಾಗಿ ಪಂದ್ಯದ ನಂತರ ಸ್ಮಿತ್ ಸಹ ಆಟಗಾರರಿಗೆ ತಿಳಿಸಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, ಸ್ಮಿತ್ ಟೆಸ್ಟ್ ಮತ್ತು ಟಿ20 ಅಂತರಾಷ್ಟ್ರೀಯ ಪಂದ್ಯಗಳಿಗೆ ಲಭ್ಯವಾಗಲಿದ್ದಾರೆ.
2010ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಲೆಗ್ ಸ್ಪಿನ್ನಿಂಗ್ ಆಲ್‌ರೌಂಡರ್ ಆಗಿ ಸ್ಮಿತ್ ಪದಾರ್ಪಣೆ ಮಾಡಿದ್ದರು. ಅದಾದ ನಂತರ, 170 ODIಗಳಲ್ಲಿ 12 ಶತಕಗಳು ಮತ್ತು 35 ಅರ್ಧ ಶತಕಗಳು ಒಳಗೊಂಡಂತೆ 43.28 ಸರಾಸರಿಯಲ್ಲಿ 5800 ರನ್ ಗಳಿಸಿದ್ದಾರೆ ಮತ್ತು 28 ವಿಕೆಟ್‌ಗಳನ್ನು ಪಡೆದಿದ್ದಾರೆ.
ಆಸ್ಟ್ರೇಲಿಯಾದ 2015 ಮತ್ತು 2023 ಐಸಿಸಿ ವಿಶ್ವಕಪ್ ವಿಜೇತ ತಂಡಗಳ ಭಾಗವಾಗಿದ್ದ ಸ್ಮಿತ್, 2015 ರಲ್ಲಿ ಏಕದಿನ ಕ್ರಿಕೆಟ್ ನಾಯಕರಾದರು. ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಹಿರಿಯ ಆಟಗಾರ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು.