Karunadu Studio

ಕರ್ನಾಟಕ

ಅಮೆಜಾನ್ ಇಂಡಿಯಾದ ಎಲಿವೇಟ್ ಹರ್ 2025ರಲ್ಲಿ ಮಹಿಳೆಯರಿಗೆ ಸ್ಪೀಡ್ ಮೆಂಟರಿಂಗ್ ಮತ್ತು ವೃತ್ತಿಯ ಅಭಿವೃದ್ಧಿ ಮೂಲಕ ಸಬಲೀಕರಣ


 ಬೆಂಗಳೂರು

    ಅಂತಾರಾಷ್ಟ್ರೀಯ ಮಹಿಳಾ ದಿನ(ಐಡಬ್ಲ್ಯೂಡಿ) 2025ರ ಅಂಗವಾಗಿ ಅಮೆಜಾನ್ ಇಂಡಿಯಾ `ಅಮೆಜಾನ್ ಎಲಿವೇಟ್ ಹರ್ 2025’ ಸಂಭ್ರಮಿಸುತ್ತಿದ್ದು ಈ ಉಪಕ್ರಮವನ್ನು ಮಹಿಳೆಯರಿಗೆ ಮಾರ್ಗದರ್ಶನ ಮತ್ತು ವೃತ್ತಿ ಅಭಿವೃದ್ಧಿಯ ಅವಕಾಶಗಳ ಮೂಲಕ ಸಬಲೀಕರಿಸಲು ವಿನ್ಯಾಸಗೊಳಿಸಲಾಗಿದೆ.

    ಈ ವರ್ಷದ ಜಾಗತಿಕ ಐಡಬ್ಲ್ಯೂಡಿ ವಿಷಯ `ಆಕ್ಸಲರೇಟ್ ಆಕ್ಷನ್’ಗೆ ಪೂರಕವಾಗಿ ಈ ಕಾರ್ಯಕ್ರಮವು ಬೆಂಗಳೂರಿನಲ್ಲಿ ನಡೆದಿದ್ದು ಅಮೆಜಾನ್ ನಾಯಕರು ಮತ್ತು ಆಕಾಂಕ್ಷಿ ವೃತ್ತಿಪರರನ್ನು ಮಾರ್ಗದರ್ಶನ, ಸಹಯೋಗ ಮತ್ತು ವೃತ್ತಿಯ ಪ್ರಗತಿಗೆ ಪ್ರಾಯೋಜಕತ್ವದ ಕುರಿತಾದ ಒಳನೋಟಯುಕ್ತ ಚರ್ಚೆಗಳಿಗೆ ಒಗ್ಗೂಡಿಸಿತ್ತು. ಎಲಿವೇಟ್ ಹರ್ 2025 ಲಿಂಗ ಸಮಾನತೆಗೆ ಅಮೆಜಾನ್ ಬದ್ಧತೆಯನ್ನು ಬಿಂಬಿಸುತ್ತಿದೆ ಮತ್ತು ಮಹಿಳೆಯರಿಗೆ ಅವರ ಪೂರ್ಣ ಸಾಮರ್ಥ್ಯ ಕಂಡುಕೊಳ್ಳಲು ಅಗತ್ಯ ಸಾಧನಗಳು ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ.

   ಈ ಕಾರ್ಯಕ್ರಮದ ಪ್ರಮುಖಾಂಶವೆಂದರೆ ಸ್ಪೀಡ್ ಮೆಂಟರಿಂಗ್ ಸೆಷನ್, ಇದರಲ್ಲಿ 100ಕ್ಕೂ ಹೆಚ್ಚು ವಿವಿಧ ಹಿನ್ನೆಲೆಗಳ ಮಹಿಳೆಯರು ವೃತ್ತಿಯ ಪ್ರಗತಿ, ನಾಯಕತ್ವ ಅಭಿವೃದ್ಧಿ ಮತ್ತು ವೃತ್ತಿಪರವಾಗಿ ಅಭಿವೃದ್ಧಿ ಹೊಂದಲು ವಿಶ್ವಾಸ ನಿರ್ಮಾಣ ಕುರಿತು ಅಮೆಜಾನ್ ನಾಯಕರೊಂದಿಗೆ ಸಂವಹನಗಳಲ್ಲಿ ತೊಡಗಿಕೊಂಡರು. ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದ್ದು “ಮಹಿಳೆಯರ ಏಳಿಗೆಗೆ ಪ್ರಾಯೋಜಕತ್ವ, ಸದೃಢತೆ ಮತ್ತು ಸಬಲೀಕರಣದ ಮಾರ್ಗದರ್ಶಿ ಬೆಳಕು” (ಗೈಡಿಂಗ್ ಲೈಟ್: ಸ್ಪಾನ್ಸರ್ ಶಿಪ್, ರಿಸೈಲೆನ್ಸ್ ಅಂಡ್ ಎಂಪವರಿಂಗ್ ವಿಮೆನ್ ಟು ರೈಸ್) ಎಂಬ ಫೈರ್ ಸೈಡ್ ಚಾಟ್ ನಲ್ಲಿ ಖ್ಯಾತ ನಟಿ ಮತ್ತು ಲೇಖಕಿ ಸೊನಾಲಿ ಬೇಂದ್ರೆ ಮತ್ತು ಅಮೆಜಾನ್ ಇಂಡಿಯಾ, ಜಪಾನ್ ಅಂಡ್ ಎಮರ್ಜಿಂಗ್ ಮಾರ್ಕೆಟ್ಸ್ ಎಚ್.ಆರ್./ಪೀಪಲ್ ಎಕ್ಸ್ಪೀರಿಯೆನ್ಸ್ ಅಂಡ್ ಟೆಕ್ನಾಲಜಿಯ ವಿಪಿ ದೀಪ್ತಿ ವರ್ಮಾ ಭಾಗವಹಿಸಿದ್ದರು.

  “ಅಮೆಜಾನ್ ನಲ್ಲಿ ನಾವು ಪ್ರತಿಯೊಬ್ಬರೂ ಏಳಿಗೆ ಸಾಧಿಸುವ ಸಂಸ್ಕೃತಿಯನ್ನು ನಿರ್ಮಿಸುತ್ತಿದ್ದೇವೆ. ನಮ್ಮ ವಿಧಾನವು ಮಾರ್ಗದರ್ಶನದಿಂದ ಮಿತ್ರತ್ವ ಮತ್ತು ಪ್ರಾಯೋಜಕತ್ವಕ್ಕೆ ವಿಕಾಸಗೊಂಡಿದ್ದು ವೃತ್ತಿ ಸುಧಾರಣೆಗೆ ಬೆಂಬಲದ ವ್ಯವಸ್ಥೆ ಸೃಷ್ಟಿಸುತ್ತಿದೆ. ನಮ್ಮ ನಾಯಕರು ಉದ್ಯೋಗಿಗಳಿಗೆ, ಅಸೋಸಿಯೇಟ್ ಗಳಿಗೆ ಮತ್ತು ಪಾಲುದಾರರಿಗೆ ಅಮೆಜಾನ್ ಒಳಗಡೆ ಪ್ರಗತಿ ಸಾಧಿಸಲು ಅಗತ್ಯವಾದ ಉಪಕ್ರಮಗಳನ್ನು ಪ್ರತಿಪಾದಿಸುತ್ತಾರೆ.

   ಎಲಿವೇಟ್ ಹರ್ 2025 ವೈವಿಧ್ಯಮಯ ಹಿನ್ನೆಲೆಗಳ ಮಹಿಳೆಯರಿಗೆ ಅವರ ಉದ್ಯೋಗದ ಗುರಿಗಳನ್ನು ಸಾಧಿಸಲು ಅಗತ್ಯವಾದ ಕೌಶಲ್ಯಗಳು ಮತ್ತು ಜಾಲವನ್ನು ರೂಪಿಸುತ್ತದೆ ಮತ್ತು ನಾವು ಈ ಆಕಾಂಕ್ಷಿ ವೃತ್ತಿಪರರಿಗೆ ಆಯೋಜಿಸಿರುವ ಸ್ಪೀಡ್ ಮೆಂಟರಿಂಗ್ ಸೆಷನ್ ಗಳ ಅವಕಾಶಕ್ಕೆ ಉತ್ಸುಕರಾಗಿದ್ದೇವೆ” ಎಂದು ಅಮೆಜಾನ್ ಇಂಡಿಯಾ, ಜಪಾನ್ ಮತ್ತು ಎಮರ್ಜಿಂಗ್ ಮಾರ್ಕೆಟ್ಸ್ ಎಚ್.ಆರ್.ಪೀಪಲ್ ಎಕ್ಸ್ಪೀರಿಯೆನ್ಸ್ ಅಂಡ್ ಟೆಕ್ನಾಲಜಿಯ ವಿಪಿ ದೀಪ್ತಿ ವರ್ಮಾ ಹೇಳಿದರು.

  “ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಸಬಲೀಕರಣವು ಬರೀ ಅವಕಾಶವಲ್ಲ, ಅದು ವಿಶ್ವಾಸ, ನಾಯಕತ್ವ ಮತ್ತು ಪ್ರಗತಿ ಬೆಳೆಯುವ ಪರಿಸರ ಸೃಷ್ಟಿಸುವುದು. ಅಮೆಜಾನ್ ಎಲಿವೇಟ್ ಹರ್ ಭಾಗವಾಗುವುದು ನಿಜಕ್ಕೂ ಸ್ಫೂರ್ತಿದಾಯಕವಾಗಿದ್ದು ಹಲವಾರು ಪ್ರತಿಭಾವಂತ ಮಹಿಳೆಯರು ಅವರ ವೃತ್ತಿಗಳ ಜವಾಬ್ದಾರಿ ತೆಗೆದುಕೊಳ್ಳುವುದು ಮತ್ತು ಅಡೆತಡೆಗಳನ್ನು ಮುರಿಯುವುದನ್ನು ಕಾಣುವುದು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ” ಎಂದು ನಟಿ ಹಾಗೂ ಲೇಖಕಿ ಸೊನಾಲಿ ಬೇಂದ್ರೆ ಹೇಳಿದರು.

   ಎಲಿವೇಟ್ ಹರ್ 2025 ಸ್ಫೂರ್ತಿ ತುಂಬಲು ಮತ್ತು ಸಬಲೀಕರಿಸಲು ವಿನ್ಯಾಸಗೊಳಿಸಲಾದ ಸಕ್ರಿಯ ಕಾರ್ಯಕ್ರಮಗಳ ಸರಣಿ ಹೊಂದಿತ್ತು. “ಆಕ್ಸಲರೇಟಿಂಗ್ ಆಕ್ಷನ್: ಬಿಲ್ಡಿಂಗ್ ರಿಸೈಲೆಂಟ್ ಕೆರೀರ್ಸ್” ಎಂಬ ಚಿಂತನೆಗೆ ಹಚ್ಚುವ ಚರ್ಚೆಯು ಅಮೆಜಾನ್ ನಾಯಕರಾದ ಅಮೆಜಾನ್ ಇಂಡಿಯಾದ ಸಾಫ್ಟ್ ವೇರ್ ಡೆವಲಪ್ಮೆಂಟ್ ನಿರ್ದೇಶಕಿ ಗೀತಾಂಜಲಿ ಭುತಾನಿ; ಅಮೆಜಾನ್ ಇಂಡಿಯಾದ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ನಿರ್ದೇಶಕಿ ಝೆಬಾ ಖಾನ್, ಅಮೆಜಾನ್ ಟ್ಯಾಲೆಂಟ್ ಅಕ್ವಿಸಿಷನ್ ನಿರ್ದೇಶಕ ರಾಜೀವ್ ಶರ್ಮಾ ಅವರನ್ನು ಒಗ್ಗೂಡಿಸಿತು, ಕಾರ್ಯಕ್ರಮದ ನಿರ್ವಹಣೆಯನ್ನು ಅಮೆಜಾನ್ ಪೇ ನಿರ್ದೇಶಕಿ ನೇಹಾ ಗುಪ್ತಾ ಮಹಾತ್ಮೆ ಮಾಡಿದರು.

   ಈ ತಜ್ಞರು ಮಹಿಳೆಯೆ ವೃತ್ತಿಪರ ಪ್ರಗತಿಗೆ ಅಗತ್ಯವಾದ ಕ್ರಿಯಾತ್ಮಕ ಕಾರ್ಯತಂತ್ರಗಳು ಮತ್ತು ಎಲ್ಲರನ್ನೂ ಒಳಗೊಳ್ಳುವ ಉದ್ಯೋಗದ ಸ್ಥಳದ ರೂಢಿಗಳನ್ನು ಹೆಚ್ಚಿಸಬೇಕು ಎಂದರು.ಈ ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡ ಆಸ್ಥಾ ಪಂತ್, “ಅಮೆಜಾನ್ ಎಲಿವೇಟ್ ಹರ್ 2025ರಲ್ಲಿ ಭಾಗವಹಿಸುವುದು ನಿಜಕ್ಕೂ ಮೌಲ್ಯಯುತ ಅನುಭವವಾಗಿದೆ. ಹಿರಿಯ ನಾಯಕರಿಂದ ನಾನು ಪಡೆದ ಒಳನೋಟಗಳು ನನಗೆ ಉದ್ಯೋಗದ ಸ್ಥಳದ ಸವಾಲುಗಳನ್ನು ಎದುರಿಸಲು ಮತ್ತು ವೃತ್ತಿಯ ಪ್ರಗತಿಗೆ ಪ್ರಾಯೋಗಿಕ ಕಾರ್ಯತಂತ್ರಗಳನ್ನು ಒದಗಿಸಿತು.

  ಮಾರ್ಗದರ್ಶನ ಕಾರ್ಯಕ್ರಮವು ಬರೀ ಸಲಹೆಗಿಂತ ಹೆಚ್ಚಿನದಾಗಿತ್ತು- ಅದು ನನಗೆ ನನ್ನ ವೃತ್ತಿಪರ ಗುರಿಗಳನ್ನು ಮರು ಮೌಲ್ಯಮಾಪನ ಮಾಡಿಕೊಳ್ಳಲು, ಸ್ಪಷ್ಟ ಉದ್ದೇಶಗಳನ್ನು ನಿಗದಿಪಡಿಸಿಕೊಳ್ಳಲು ಮತ್ತು ಹೆಚ್ಚಿನ ವಿಶ್ವಾಸದಿಂದ ನನ್ನ ವೃತ್ತಿಯನ್ನು ನಿರ್ವಹಿಸಲು ಉತ್ತೇಜಿಸಿತು. ಈ ಉಪಕ್ರಮದ ಭಾಗವಾಗುವ ಅವಕಾಶ ದೊರೆತಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ” ಎಂದರು.

  ಎಲಿವೇಟ್ ಹರ್ 2025 ಅಮೆಜಾನ್ ಇಂಡಿಯಾದ ಎಲ್ಲರನ್ನೂ ಒಳಗೊಳ್ಳುವ ಉದ್ಯೋಗದ ಸ್ಥಳವಾಗಿಸಲು ಮತ್ತು ಮಹಿಳೆಯರನ್ನು ಎಲ್ಲ ಹಂತಗಳಲ್ಲಿ ಸಬಲೀಕರಿಸಲು ಪ್ರಸ್ತುತದ ಬದ್ಧತೆಯ ಒಂದು ಮುಖವಾಗಿದೆ. ಕಂಪನಿಯು ಮಹಿಳೆಯರ ಪ್ರಗತಿ, ನಾಯಕತ್ವ ಸಾಮರ್ಥ್ಯಗಳು ಮತ್ತು ವೃತ್ತಿ ಸುಧಾರಣೆಗೆ ಬೆಂಬಲಿಸಲು ಅಗತ್ಯವಾದ ಸಮಗ್ರ ಮಾರ್ಗದರ್ಶನ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಈ ಉಪಕ್ರಮಗಳನ್ನು ಭವಿಷ್ಯದ ಮಹಿಳಾ ನಾಯಕರಿಗೆ ಸದೃಢ ಮಾರ್ಗ ಸೃಷ್ಟಿಸಲು ವಿನ್ಯಾಸಗೊಳಿಸಲಾಗಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »