ಬೆಂಗಳೂರು :
ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ವ್ಯಾಪಾರಸ್ಥರು ಹೊಸ ಹೊಸ ಬ್ಯುಸಿನೆಸ್ ಐಡಿಯಾಗಳನ್ನು ಪ್ರಯೋಗಿಸುತ್ತಿರುತ್ತಾರೆ. ಹೀಗೆ ಯೂನಿಕ್ ಹಾಗೂ ವಿಚಿತ್ರ ಹೆಸರುಗಳನ್ನು ಇಡುವ ಮೂಲಕ ಅದೆಷ್ಟೋ ಸಣ್ಣ ಪುಟ್ಟ ಸ್ಟಾಲ್, ಅಂಗಡಿಗಳು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾವೆ.
ಈ ಹಿಂದೆ ಶೆಡ್ ಟೀ ಸ್ಟಾಲ್ ಎಂಬ ಹೆಸರಿನ ಟೀ ಅಂಗಡಿಯೊಂದು ತನ್ನ ವಿಶಿಷ್ಟ ಹೆಸರಿನ ಮೂಲಕವೇ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಇಲ್ಲೊಂದು ಟೀ ಸ್ಟಾಲ್ ಮನೆಯಲ್ಲಿ ಸಮಸ್ಯೆ, ಅಶಾಂತಿ, ಸಾಲಭಾದೆ ಇನ್ನು ಮುಂತಾದ ಹಲವಾರು ಸಮಸ್ಯೆಗಳಿಗೆ ಚಹಾ ಒಂದೇ ಪರಿಹಾರ ಎಂಬ ಬೋರ್ಡ್ ಅಳವಡಿಸುವ ಮೂಲಕ ಗಮನ ಸೆಳೆದಿದೆ. ಈ ಬೋರ್ಡ್ ನೋಡಿ ಇದೇನು ಟೀ ಅಂಗಡಿಯೋ ಅಥವಾ ಜ್ಯೋತಿಷ್ಯ ಕೇಂದ್ರವೋ ಒಂದು ಗೊತ್ತಾಗ್ತಿಲ್ಲ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.
ಜ್ಯೋತಿಷ್ಯ ಕೇಂದ್ರಗಳಲ್ಲಿ ಅಥವಾ ಜ್ಯೋತಿಷ್ಯ ಸಂಬಂಧಿ ಜಾಹಿರಾತುಗಳಲ್ಲಿ ನಿಮ್ಮ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ ಎಂದು ಬರೆದಿರುವುದನ್ನು ನೋಡಿರುತ್ತೀರಿ ಅಲ್ವಾ. ಅದೇ ರೀತಿ ಮೈಸೂರಿನ ಟೀ ಅಂಗಡಿ ಓನರ್ ತಮ್ಮ ಅಂಗಡಿ ಮುಂದೆ “ಮನೆಯಲ್ಲಿ ಸಮಸ್ಯೆ, ಅಶಾಂತಿ, ಸಾಲಭಾದೆ ಇನ್ನು ಮುಂತಾದ ಹಲವಾರು ಸಮಸ್ಯೆಗಳಿಗೆ ಚಹಾ ಒಂದೇ ಪರಿಹಾರ” ಎಂಬ ಬೋರ್ಡ್ ಅಳವಡಿಸಿದ್ದಾರೆ.