ಗದಗ:
ಕಳ್ಳತನ ಮಾಡುವವರಿಗೆ ಪೊಲೀಸರನ್ನು ಕಂಡರೆ ಭಯ ಇದ್ದೇ ಇರುತ್ತದೆ. ಆದರೆ, ಇಲ್ಲೊಬ್ಬ ಆಸಾಮಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ಎದುರಲ್ಲೇ ಮೊಬೈಲ್ ಕದ್ದಿರುವುದು ಕಂಡುಬಂದಿದೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ (Gadag Police Station) ಈ ಘಟನೆ ನಡೆದಿದೆ. ಹೌದು, ಮುಲ್ಲಾ ಎನ್ನುವ ವ್ಯಕ್ತಿ ಪೊಲೀಸ್ ಠಾಣೆಯಲ್ಲೇ ಮೊಬೈಲ್ ಕಳ್ಳತನ ಮಾಡಿದ್ದಾನೆ. ಮಹಿಳಾ ಸಿಬ್ಬಂದಿಯೊಬ್ಬರ ಜತೆ ಮಾತನಾಡುತ್ತಿದ್ದ ವೇಳೆ ಅವರ ಮೊಬೈಲ್ ಕದ್ದಿದ್ದಾನೆ. ಖದೀಮನ ಕೈಚಳಕ (Mobile phone theft) ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೋಟೆಲ್ ಒಂದರಲ್ಲಿ ನಡೆದಿದ್ದ ಗಲಾಟೆ ವಿಷಯಕ್ಕೆ ಸಂಬಂಧಿಸಿದಂತೆ ದೂರು ನೀಡಲು ಈ ಮುಲ್ಲಾ ಪೊಲೀಸ್ ಸ್ಟೇಷನ್‌ಗೆ ಹೋಗಿದ್ದ. ಬಿಲ್ ಕೊಡದ ಗಲಾಟೆ ಮಾಡಿದ್ದ ವ್ಯಕ್ತಿಯ ಪರವಾಗಿ ಸ್ಟೇಷನ್‌ಗೆ ಬಂದಿದ್ದ ಎಂದು ಹೇಳಲಾಗಿದೆ. ಒಳಗೆ ವಿಚಾರಣೆ ನಡೆಯುತ್ತಿದ್ದಾಗ ಆಚೆ ನಿಂತು ಮೊಬೈಲ್ ಕದ್ದಿದ್ದಾನೆ. ಇದೀಗ ಪೊಲೀಸರು ಈ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.