Karunadu Studio

ಕರ್ನಾಟಕ

ಎಲ್ 2 ಎಂಪುರಾನ್’ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ


ಬೆಂಗಳೂರು: 

   ಮಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ‘ಎಲ್ 2 ಎಂಪುರಾನ್’  ವಿಶ್ವಾದ್ಯಂತ ತೆರೆಗೆ ಬಂದಿದೆ. ಈಗಾಗಲೇ ನಾನಾ ರಾಜ್ಯದಲ್ಲಿ ಅದ್ಧೂರಿಯಾಗಿ ಪ್ರಚಾರ ಮಾಡಿರುವ ಚಿತ್ರತಂಡ ಬೆಂಗಳೂರಿನಲ್ಲಿಯೂ ಪ್ರಮೋಷನ್‌ ನಡೆಸಿದೆ. ನಗರದ ಓರಿಯಾನ್ ಮಾಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್‌ಲಾಲ್‌ , ಚಿತ್ರದ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ , ನಟಿ ಮಂಜು ವಾರಿಯರ್ , ನಟ ಟೊವಿನೋ ಥಾಮಸ್  ಭಾಗಿಯಾಗಿದ್ದರು. ಈ ವೇಳೆ ಸಿನಿಮಾದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡರು.

  ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿ ನಟಿಸಿರುವ ‘ಎಲ್-2:ಎಂಪುರಾನ್’ ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. 2019ರಲ್ಲಿ ತೆರೆಕಂಡ ʼಲೂಸಿಫರ್ʼ ಚಿತ್ರದ ಸೀಕ್ವೆಲ್ ಆಗಿರುವುದರಿಂದ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ಪೃಥ್ವಿರಾಜ್ ಸುಕುಮಾರನ್ ಈ ಚಿತ್ರಕ್ಕೆ ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸಾಥ್ ನೀಡಿದೆ. ಕರ್ನಾಟಕದಾದ್ಯಂತ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ವಿಜಯ್ ಕಿರಗಂದೂರ್ ‘ಎಲ್-2: ಎಂಪುರಾನ್’ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

  ಎಲ್‌-2: ಎಂಪುರಾನ್’ ಚಿತ್ರಕ್ಕೆ ಮುರಳಿ ಗೋಪಿ ಕಥೆ ಬರೆದಿದ್ದಾರೆ. ದೀಪಕ್ ದೇವ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಸುಜಿತ್ ವಾಸುದೇವ್ ಅವರ ಛಾಯಾಗ್ರಹಣವಿದೆ. ಸುರೇಶ್ ಬಾಲಾಜೆ ಮತ್ತು ಜಾರ್ಜ್ ಪಯಸ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಮೋಹನ್‌ದಾಸ್‌ ಕಲಾ ನಿರ್ದೇಶಕರಾಗಿ ದುಡಿದ್ದಾರೆ. 2019ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದ ‘ಲೂಸಿಫರ್’ ಚಿತ್ರವನ್ನೂ ಪೃಥ್ವಿರಾಜ್ ಸುಕುಮಾರ್ ನಿರ್ದೇಶಿಸಿದ್ದರು. ʼಲೂಸಿಫರ್ ಪಾರ್ಟ್ 2ʼ ಸಿನಿಮಾವನ್ನು ಸುಭಾಷ್ಕರ್ ಹಾಗೂ ಆಂಟೋನಿ ಪೆರುಂಬವೂರ್ ನಿರ್ಮಾಣ ಮಾಡಿದ್ದಾರೆ.

   ಈ ಚಿತ್ರದಲ್ಲಿ ಸ್ಟೀಫನ್ ನೆಡುಂಪಲ್ಲಿ ಪಾತ್ರದಲ್ಲಿ ಮೋಹನ್ ಲಾಲ್ ನಟಿಸಿದ್ದು, ನಿರ್ದೇಶನದ ಜತೆಗೆ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಂದ್ರಜಿತ್ ಸುಕುಮಾರನ್, ಟೊವಿನೋ ಥಾಮಸ್, ಮಂಜು ವಾರಿಯರ್, ಸಾನಿಯಾ ಅಯ್ಯಪ್ಪನ್, ಸಾಯಿ ಕುಮಾರ್ ಮತ್ತು ಬೈಜು ಸಂತೋಷ್ ತಾರಾಬಳಗದಲ್ಲಿದ್ದಾರೆ. 

  ಪಾಲಿಟಿಕಲ್‌ ಆಕ್ಷನ್‌ ಥ್ರಿಲ್ಲರ್‌ ‘ಎಲ್-2: ಎಂಪುರಾನ್’ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೋಹನ್‌ಲಾನ್‌ ನಟನೆ, ಪೃಥ್ವಿರಾಜ್‌ ನಿರ್ದೇಶನಕ್ಕೆ ಪ್ರೇಕ್ಷಕರು ಪೂರ್ಣಾಂಕ ನೀಡಿದ್ದಾರೆ. ಇದರ ಜತೆಗೆ ‘ಎಲ್-3’ ಸೀಕ್ವೆಲ್‌ ಬರುವ ಸೂಚನೆಯೂ ಸಿಕ್ಕಿದೆ. ರಿಲೀಸ್‌ಗೆ ಮೊದಲೇ 50 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿದ್ದ ʼಎಂಪುರಾನ್‌ʼ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆಯುವ ಸಾಧ್ಯತೆ ಇದೆ. ಯುಗಾದಿ, ರಮ್ಜಾನ್‌ ಹೀಗೆ ಸಾಲು ಸಾಲು ರಜೆ ಇರುವುದು ಕೂಡ ಚಿತ್ರತಂಡಕ್ಕೆ ಪ್ಲಸ್‌ ಪಾಯಿಂಟ್‌ ಆಗುವ ಸಾಧ್ಯತೆ ಇದೆ. ಇದರ ಜತೆಗೆ ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ಸಲ್ಮಾನ್‌ ಖಾನ್‌-ರಶ್ಮಿಕಾ ಮಂದಣ್ಣ ನಟನೆಯ ʼಸಿಕಂದರ್‌ʼ ಮಾ. 30ರಂದು ತೆರೆಗೆ ಬರಲಿದ್ದು, ಪ್ರಬಲ ಪೈಪೋಟಿ ನಡೆಯಲಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »