Karunadu Studio

ಕರ್ನಾಟಕ

ಅತ್ತೆ ಜತೆ ಭಾವಿ ಅಳಿಯ ಪರಾರಿ….!


ಅಲಿಗಢ

    ಮಗಳ ಮದುವೆ ಇನ್ನೇನು 10 ದಿನಗಳು ಇವೆ ಎನ್ನುವಾಗ ಮಗಳನ್ನು ಮದುವೆಯಾಗಬೇಕಿದ್ದ ವರನ ಜತೆಗೇ ಅತ್ತೆ ಪರಾರಿಯಾಗಿರುವ ಘಟನೆ ಇತ್ತೀಚೆಗೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಈ ಸುದ್ದಿ ಎರಡೂ ಕುಟುಂಬಗಳಷ್ಟೇ ಅಲ್ಲದೆ ಎರಡೂ ಗ್ರಾಮಗಳಲ್ಲಿ ಆಕ್ರೋಶ ಹುಟ್ಟುಹಾಕಿತ್ತು. ಇದೀಗ ಯುವಕನ ತಂದೆ ಆತನಿಗೆ ಆಸ್ತಿಯಲ್ಲಿ ಕಿಂಚಿತ್ತೂ ಪಾಲು ಕೊಡುವುದಿಲ್ಲ ಎಂದು ಘೋಷಿಸಿದ್ದಾರೆ. ರಾಹುಲ್ ತಂದೆ ತನ್ನ ಮಗನೊಂದಿಗಿರುವ ಎಲ್ಲಾ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದಾರೆ.

    ರಾಹುಲ್ ಕುಟುಂಬಕ್ಕೆ ಕಳಂಕ ತಂದಿದ್ದಲ್ಲದೆ, ನಗದು, ಆಭರಣಗಳೊಂದಿಗೆ ಮನೆಯಿಂದ ಹೊರಟು ಹೋಗಿದ್ದಾನೆ. ಇನ್ನುಮುಂದೆ ಆತನಿಗೆ ನಮಗೂ ಯಾವುದೇ ಸಂಬಂಧವಿಲ್ಲ. ಅವನು ನಮ್ಮ ಮರ್ಯಾದೆ ತೆಗೆದಿದ್ದಾನೆ ಎಂದರು.

    ಇವರಿಬ್ಬರ ನಡುವಿನ ವಯಸ್ಸಿನ ವ್ಯತ್ಯಾಸವು ಸಾರ್ವಜನಿಕ ಕುತೂಹಲಕ್ಕೆ ಕಾರಣವಾಗಿದೆ. ರಾಹುಲ್‌ಗೆ ಈಗ 24 ವರ್ಷ ವಯಸ್ಸಾಗಿದ್ದು ಅಪ್ನಾ ದೇವಿಗೆ ಅವರಿಗೆ ಕೇವಲ 34 ವರ್ಷ ವಯಸ್ಸಾಗಿದೆ. ಎಲ್ಲವೂ ಸರಿ ಇದ್ದಿದ್ರೆ ಇಂದು ಶಿವಾನಿ ಹಾಗೂ ರಾಹುಲ್ ಮದುವೆ ನಡೆಯುತ್ತಿತ್ತು ಎಂದು ವಧುವಿನ ತಂದೆ ಕಣ್ಣೀರು ಹಾಕಿದ್ದಾರೆ. ಮದುವೆ 9 ದಿನಗಳು ಬಾಕಿ ಇರುವಾಗಲೇ ಭಾವಿ ಅಳಿಯ ತನ್ನ ಅತ್ತೆಯ ಜತೆ ಪರಾರಿಯಾಗಿದ್ದನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆ ಅಲಿಗಢದಲ್ಲಿ ನಡೆದಿತ್ತು, ಈ ಸಂದರ್ಭದಲ್ಲಿ ಮನೆಯಲ್ಲಿರುವ ಆಭರಣಗಳನ್ನೆತ್ತಿಕೊಂಡು ಅತ್ತೆ ಪರಾರಿಯಾಗಿದ್ದಳು. 

    ಅವರಿಬ್ಬರೂ ಓಡಿಹೋಗಿ 10 ದಿನಗಳು ಕಳೆದಿವೆ, ಆದರೆ ಪೊಲೀಸರಿಗೆ ಇನ್ನೂ ಅವರನ್ನು ಹಿಡಿಯಲು ಸಾಧ್ಯವಾಗಿಲ್ಲ. ನನ್ನ ಪಾಲಿಗೆ ಅವಳು ಸತ್ತಿದ್ದಾಳೆ ಎಂದು ಜಿತೇಂದ್ರ ಹೇಳಿದ್ದಾರೆ. ಏತನ್ಮಧ್ಯೆ, ಮದ್ರಾಕ್ ಪೊಲೀಸ್ ಠಾಣೆ ಪ್ರದೇಶದ ಮನೋಹರ್‌ಪುರ್ ಗ್ರಾಮದಲ್ಲಿರುವ ಜಿತೇಂದ್ರ ಕುಮಾರ್ ಅವರ ಮನೆಯಲ್ಲಿ ಶೋಕ ಮಡುಗಟ್ಟಿದೆ.

   ಇಂದು ಈ ಮನೆಯಲ್ಲಿ ಶೆಹನಾಯಿ ನುಡಿಸಬೇಕಿತ್ತು. ಆದರೆ ಅದಕ್ಕೂ ಮುನ್ನ ವಧುವಿನ ತಾಯಿ ತನ್ನ ಭಾವಿ ಅಳಿಯನೊಂದಿಗೆ ಓಡಿಹೋಗಿದ್ದಳು. ಅತ್ತೆ ಮತ್ತು ಅಳಿಯನ ಬಗ್ಗೆ ಹಳ್ಳಿಯ ಜನರಲ್ಲಿ ತುಂಬಾ ಕೋಪವಿದೆ. ತನ್ನ ಅಳಿಯನೊಂದಿಗೆ ಓಡಿಹೋದ ಮಹಿಳೆಯ ಹೆಸರು ಅಪ್ನಾ ದೇವಿ.

   ಆ ಮಹಿಳೆಯೇ ಮಗಳಿಗೆ ಆತನೊಂದಿಗೆ ನಿಶ್ಚಿತಾರ್ಥ ನೆರವೇರಿಸಿದ್ದಳು, ಹುಡುಗನನ್ನು ಆಕೆಯೇ ಹುಡುಕಿದ್ದಳು. ಮದುವೆಯ ಸಿದ್ಧತೆಗಳ ನೆಪದಲ್ಲಿ ವರನು ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದ. ಕುಟುಂಬಕ್ಕೆ ತಿಳಿಯದಂತೆ, ಅಳಿಯ ಮತ್ತು ಅತ್ತೆಯ ನಡುವೆ ಸಂಬಂಧ ಬೆಳೆಯುತ್ತಿತ್ತು. ವರ ತನ್ನ ಭಾವಿ ಅತ್ತೆಗೆ ಮೊಬೈಲ್ ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದ, ಅದನ್ನುಯಾರೂ ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »