Karunadu Studio

ಕರ್ನಾಟಕ

Gold Price Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ಬೆಲೆ ಗಮನಿಸಿ – Kannada News | Gold Price Today on 27th April 2025; Check gold silver Price in Bengaluru, Chennai, Kolkata, Mumbai and Delhi in Kannada


ಬೆಂಗಳೂರು: ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನದ ದರ ಭಾನುವಾರ (ಏ. 27) ಯಥಾಸ್ಥಿತಿ ಕಾಯ್ದುಕೊಂಡಿದೆ (Gold Price Today). ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 9,002 ರೂ. ಇದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 9,821 ರೂ. ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 72,016 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 90,020 ರೂ. ಮತ್ತು 100 ಗ್ರಾಂಗೆ 9,00,200 ರೂ. ನೀಡಬೇಕಾಗುತ್ತದೆ. ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನ 78,568 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 98,210 ರೂ. ಮತ್ತು 100 ಗ್ರಾಂಗೆ 9,82,100 ರೂ. ಪಾವತಿಸಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ಬೆಳ್ಳಿ ದರ

ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಯಥಾಸ್ಥಿತಿ ಕಂಡು ಬಂದಿದೆ. ಬೆಳ್ಳಿ 1 ಗ್ರಾಂನ ಬೆಲೆ 101.90 ರೂ., 8 ಗ್ರಾಂಗೆ 815.20 ರೂ., 10 ಗ್ರಾಂ.ಗೆ 1,019 ರೂ. ಮತ್ತು 1 ಕೆಜಿಗೆ 1,01,900 ರೂ. ಇದೆ.

ಈ ಸುದ್ದಿಯನ್ನೂ ಓದಿ: Reliance: ರಿಲಯನ್ಸ್ ಇಂಡಸ್ಟ್ರೀಸ್ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಪ್ರಕಟ; 5.50 ರೂ. ಡಿವಿಡೆಂಡ್ ಘೋಷಣೆ

ಚಿನ್ನಾಭರಣ ಖರೀದಿಸುವ ಮುನ್ನ ಗಮನಿಸಬೇಕಾದ ಅಂಶ

ಶುದ್ಧತೆ: ಚಿನ್ನಾಭರಣ ಖರೀದಿಸುವ ಮುನ್ನ ಅದರ ಶುದ್ಧತೆಯನ್ನು ಪರಿಶೀಲಿಸುವುದು ಅಗತ್ಯ. ಚಿನ್ನದ ಮೇಲೆ ಶುದ್ಧತೆಯನ್ನು ಸೂಚಿಸುವ ಬಿಐಎಸ್‌ (BIS) ಹಾಲ್‌ಮಾರ್ಕ್‌ ಇದೆ ಎನ್ನುವುದನ್ನು ಖಚಿತಪಡಿಸಿ. ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂಬುದನ್ನು ಆ ಮೂಲಕ ಪ್ರಮಾಣೀಕರಿಸಬಹುದು.

ಬೆಲೆ: ಚಿನ್ನದ ಬೆಲೆ ಪ್ರತಿ ದಿನ ಬದಲಾಗುತ್ತಿರುತ್ತದೆ. ಖರೀದಿಸುವ ಮುನ್ನ ಬೆಲೆ ಎಷ್ಟಿದೆ ಎನ್ನುವುದನ್ನು ಗಮನಿಸಿ. ಇದಕ್ಕಾಗಿ ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಪರಿಶೀಲಿಸುವುದನ್ನು ಮರೆಯಬೇಡಿ.

ಹೋಲಿಕೆ ಮಾಡಿ: ಮತ್ತೊಂದು ಮುಖ್ಯ ವಿಚಾರ ಎಂದರೆ ಬೆಲೆಗಳ ಹೋಲಿಕೆ. ಬೇರೆ ಬೇರೆ ಜ್ಯುವೆಲ್ಲರಿಗಳಲ್ಲಿ ವ್ಯತ್ಯಸ್ತ ಬೆಲೆಗಳಿರುತ್ತವೆ. ನೀವು ಚಿನ್ನ ಖರೀದಿಸುವ ಮುನ್ನ ಬೆಲೆಗಳನ್ನು ಹೋಲಿಸಿ ನೋಡಿ. ಇದರಿಂದ ನಿಮಗೆ ಸಾಕಷ್ಟು ಹಣ ಉಳಿತಾಯು ಮಾಡಬಹುದಾಗಿದೆ.

ಮೇಕಿಂಗ್‌ ಚಾರ್ಜಸ್‌: ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ (Making Charges) ಮತ್ತು ವೇಸ್ಟೇಜ್ ಚಾರ್ಜ್ (Wastage Charges) ಎಂದಿರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲ ಆಭರಣಗಳಿಗೆ ಮೇಕಿಂಗ್, ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಮಾನ್ಯವಾಗಿ ಯಂತ್ರದಿಂದ ತಯಾರಿಸಿದ ಆಭರಣಗಳು ಅಥವಾ ಕಡಿಮೆ ವಿನ್ಯಾಸವನ್ನು ಹೊಂದಿರುವ ಆಭರಣಗಳಿಗೆ ಕಡಿಮೆ ಮೇಕಿಂಗ್ ಚಾರ್ಜ್ ಇರುತ್ತದೆ. ಪ್ರಸ್ತುತ ಭಾರತದಲ್ಲಿ ಮೇಕಿಂಗ್ ಚಾರ್ಜಸ್ ಶೇ. 6ರಿಂದ ಶೇ. 20ರ ವರೆಗೆ ಇದೆ.

ವಿನ್ಯಾಸ: ಮೊದಲೇ ಹೇಳಿದಂತೆ ಆಭರಣಗಳ ವಿನ್ಯಾಸವೂ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಸೂಕ್ಷ್ಮ ಕೆತ್ತನೆಯ, ಕೈಯಿಂದ ತಯಾರಿಸುವ ಆಭರಣ ಸ್ವಲ್ಪ ದುಬಾರಿಯಾಗಿತ್ತವೆ. ಆದ್ದರಿಂದ ಈ ಬಗ್ಗೆಯೂ ಗಮನ ಹರಿಸಿ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »