Karunadu Studio

ಕರ್ನಾಟಕ

Akshaya Tritiya: ಚಿನ್ನದ ಮಳಿಗೆಗಳಿಗೆ ಹಬ್ಬ! ಅಕ್ಷಯ ತೃತೀಯ ದಿನ 3000 ಕೋಟಿ ರೂ. ವಹಿವಾಟು – Kannada News | 3000 crore rupees business in karnataka on Akshaya Tritiya day


ಬೆಂಗಳೂರು: ನಿನ್ನೆ (ಏಪ್ರಿಲ್‌ 30) ಅಕ್ಷಯ ತೃತೀಯದ (Akshaya tritiya) ಪರ್ವದಿನದ ಹಿನ್ನೆಲೆಯಲ್ಲಿ ಚಿನ್ನಾಭರಣ ಮಳಿಗೆಗಳು (gold business) ನಿಜಕ್ಕೂ ಹಬ್ಬ ಆಚರಿಸಿದವು. ಈ ವರ್ಷ ಇದೊಂದೇ ದಿನ ಕರ್ನಾಟಕದಲ್ಲಿ 3,000 ಕೋಟಿ ರೂಪಾಯಿಗೂ ಹೆಚ್ಚಿನ ವಹಿವಾಟು ನಡೆದಿದೆ. ಇದಕ್ಕೆ ತಕ್ಕಂತೆ ಚಿನ್ನದ ಧಾರಣೆಯಲ್ಲಿಯೂ (gold rate) ಕೊಂಚ ಕುಸಿತ ಆದದ್ದು ಚಿನ್ನ ಕೊಳ್ಳುವವರ ಉತ್ಸಾಹವನ್ನು ಇಮ್ಮಡಿಸಿತು.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬುಧವಾರ ಚಿನ್ನಾಭರಣ ಖರೀದಿ ಸಂಭ್ರಮ ಜೋರಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇಕಡಾ 15ರಷ್ಟು ಜಾಸ್ತಿ ವಹಿವಾಟು ನಡೆದಿದೆ. ಕಳೆದ ವರ್ಷ ಅಕ್ಷಯ ತೃತೀಯದಂದು ರಾಜ್ಯಾದ್ಯಂತ 2,050 ಕೆ.ಜಿ.ಗೂ ಅಧಿಕ ಚಿನ್ನ ಹಾಗೂ 1,900 ಕೆ.ಜಿ.ಗೂ ಹೆಚ್ಚು ಬೆಳ್ಳಿ ಆಭರಣಗಳು ಮಾರಾಟವಾಗಿದ್ದವು. ಈ ಸಲ ಕಳೆದ ವರ್ಷಕ್ಕಿಂತ ಶೇಕಡಾ 15ರಷ್ಟು ಹೆಚ್ಚು ವಹಿವಾಟು ನಡೆದಿದೆ ಎಂದು ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ ತಿಳಿಸಿದೆ.

ಆಭರಣ ಮಳಿಗೆಗಳ ಮುಂದೆ ಬುಧವಾರ ಜನಸಾಗರವೇ ನೆರೆದಿತ್ತು. ದೊಡ್ಡ ಮಳಿಗೆಗಳಲ್ಲಿ ಮಾತ್ರವಲ್ಲ, ಸಣ್ಣಪುಟ್ಟ ಮಳಿಗೆಗಳಲ್ಲೂ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿಯೇ ಖರೀದಿ ಪ್ರಕ್ರಿಯೆ ನಡೆಯಿತು. ವಿನ್ಯಾಸವಿಲ್ಲದ ಸಾದಾ ಆಭರಣಗಳು, ಬೆಳ್ಳಿ – ವಜ್ರದ ಆಭರಣಗಳನ್ನು ಕೂಡ ಖರೀದಿಸಿದರು. ಹಲವೆಡೆ ಚಿನ್ನದ ಕಾಯಿನ್‌ ಕೂಡ ಖರೀದಿಸಲಾಯಿತು.

ಬೆಳಗ್ಗೆ 8 ಗಂಟೆಗೆ ಆಭರಣ ಮಳಿಗೆಗಳನ್ನು ತೆರೆಯಲಾಗಿತ್ತು. ಕೆಲ ಮಳಿಗೆಗಳು ರಾತ್ರಿ 11ರವರೆಗೆ ತೆರೆದಿದ್ದವು. ಗ್ರಾಹಕರ ಆತಿಥ್ಯಕ್ಕಾಗಿ ಕೆಲವೆಡೆ ಮಳಿಗೆ ಹೊರಗಡೆಯೇ ಪೆಂಡಾಲ್‌, ಚೇರ್‌ಗಳನ್ನು ಹಾಕಲಾಗಿತ್ತು. ಜ್ಯೂಸ್‌, ಮಜ್ಜಿಗೆ ಕೊಟ್ಟು ಒಳಗಡೆ ಬರಮಾಡಿಕೊಳ್ಳಲಾಗುತ್ತಿತ್ತು. ಪ್ರತಿಷ್ಠಿತ ಮಳಿಗೆಗಳಲ್ಲಿ ಗ್ರಾಹಕರನ್ನು ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಕೂಡ ಹಾಕಲಾಗಿತ್ತು. ಓಲೆ, ಬಳೆ, ನೆಕ್ಲೆಸ್‌, ಬ್ರೇಸ್‌ಲೆಟ್‌, ಆಂಟಿಕ್‌ ಜ್ಯುವೆಲ್ಲರಿಗಳಿಗೆ ಬೇರೆ ಬೇರೆ ಕೌಂಟರ್‌ ತೆರೆಯಲಾಗಿತ್ತು.

ಹೂಡಿಕೆಯ ಉದ್ದೇಶ ಹೊಂದಿದ್ದವರು ಚಿನ್ನದ ನಾಣ್ಯಗಳನ್ನು ಖರೀದಿಸಿದರು. ಉಳಿದಂತೆ ಹಲವರು ತಮ್ಮ ಇಷ್ಟದ ಓಲೆ, ಉಂಗುರ, ಬಳೆ, ನೆಕ್ಲೆಸ್‌, ಪೆಂಡೆಂಟ್‌, ನಾಣ್ಯಗಳನ್ನು ಖರೀದಿ ಮಾಡಿದರು. ಬೆಲೆ ಹೆಚ್ಚಾದರೂ ಗ್ರಾಹಕರಲ್ಲಿ ಉತ್ಸಾಹ ಕುಂದಿರಲಿಲ್ಲ. ಅಕ್ಷಯ ತೃತೀಯ ದಿನ ಮುಹೂರ್ತ ನೋಡುವ ಅಗತ್ಯವಿಲ್ಲದ ಕಾರಣ ಮದುವೆ, ಮುಂಜಿ, ಗೃಹಪ್ರವೇಶಗಳಂತಹ ಸಮಾರಂಭಗಳೂ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದ್ದು, ಇವುಗಳಿಂದಲೂ ನೂರಾರು ಕೋಟಿ ರೂ. ವಹಿವಾಟು ನಡೆದಿದೆ.

ಚಿನ್ನದ ದರ ಹೊಸದಿಲ್ಲಿಯ ಚಿನಿವಾರ ಪೇಟೆಯಲ್ಲಿ ಹತ್ತು ಗ್ರಾಂ ಶುದ್ಧ ಬಂಗಾರ ಹಾಗೂ ಆಭರಣ ಚಿನ್ನ ತಲಾ 900 ರೂ. ಕುಸಿದರೆ, ಬೆಳ್ಳಿ ಕೆ.ಜಿಗೆ 4,000 ರೂ. ಕಡಿಮೆಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಶುದ್ಧ ಚಿನ್ನ 60 ರೂ., ಆಭರಣ ಚಿನ್ನ 50 ರೂ. ಇಳಿಕೆ ದಾಖಲಾಗಿದೆ.

ಇದನ್ನೂ ಓದಿ: Akshaya Trutiya Special: ಅಕ್ಷಯ ತೃತೀಯ ಸೀಸನ್‌ನಲ್ಲಿ ಬ್ರೈಡಲ್‌ ಆಭರಣಗಳಿಗೆ ಹೆಚ್ಚಿದ ಬೇಡಿಕೆ



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »