Karunadu Studio

ಕರ್ನಾಟಕ

Ayyana Mane Web Series: 50 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್‌ ಮೂಲಕ ಒಟಿಟಿಯಲ್ಲಿ ದಾಖಲೆ ಬರೆದ ʼಅಯ್ಯನ ಮನೆʼ ವೆಬ್‌ ಸಿರೀಸ್‌ – Kannada News | Ayyana Mane Kannada Web series creates new record


ಬೆಂಗಳೂರು: ಕನ್ನಡದಲ್ಲೇ ಒಂದೊಳ್ಳೆ ವೆಬ್‌ ಸೀರಿಸ್‌ ನೋಡಬೇಕು ಎಂದು ಕಾಯುತ್ತಿದ್ದವರಿಗೆ ಕನಸು ಕೊನೆಗೂ ನನಸಾಗಿದೆ. ಝೀ5 (ZEE5) ಒಟಿಟಿ ಫ್ಲ್ಯಾಟ್‌ಫಾರ್ಮ್‌ನಲ್ಲಿ ಸದ್ಯ ‘ಅಯ್ಯನ ಮನೆ’ ಎನ್ನುವ ಥ್ರಿಲ್ಲರ್‌ ವೆಬ್‌ ಸೀರಿಸ್‌ ಸ್ಟ್ರೀಮಿಂಗ್‌ ಆಗುತ್ತಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೇ ಮೊದಲ ಬಾರಿಗೆ ಝೀ5 ಕನ್ನಡದಲ್ಲೊಂದು ಹೊಸ ಪ್ರಯೋಗ ಮಾಡಿದ್ದು, ಅದಕ್ಕೆ ಭರಪೂರ ರೆಸ್ಪಾನ್ಸ್‌ ಸಿಗುತ್ತಿದೆ. ಕನ್ನಡದಲ್ಲಿ ಮೊದಲ ಮಿನಿ ವೆಬ್‌ ಸೀರಿಸ್‌ ಅಯ್ಯನ ಮನೆ ಸೀರಿಸ್‌ ಭಾಷೆ ಅಡೆತಡೆಗಳನ್ನು ಮೀರಿ ದಾಖಲೆಯ ವೀಕ್ಷಣೆಯನ್ನು ಕಂಡಿದೆ.

ಏ. 25ರಂದು ‘ಅಯ್ಯನ ಮನೆ’ ವೆಬ್‌ ಸರಣಿ ಸ್ಟ್ರೀಮಿಂಗ್‌ ಆರಂಭವಾಗಿದ್ದು, ಅಲ್ಲಿಂದ ಇಲ್ಲಿವರೆಗೆ 50 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್‌ ಕಾಣುವ ಮೂಲಕ ಹೊಸ ರೆಕಾರ್ಡ್‌ ಕ್ರಿಯೇಟ್‌ ಮಾಡಿದೆ. ಪ್ರಾದೇಶಿಕ ಭಾಷೆಯ ವೆಬ್‌ ಸರಣಿ ಈ ಮಟ್ಟದ ವೀಕ್ಷಣೆ ಕಂಡಿರುವುದು ಇಡೀ ತಂಡಕ್ಕೂ ಖುಷಿ ಕೊಟ್ಟಿದೆ.

ಝೀ ಕನ್ನಡ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡ ಪೋಸ್ಟ್‌:

ಈ ಸುದ್ದಿಯನ್ನೂ ಓದಿ: HIT- The Third Case: ಹಿಟ್‌ ಅಬ್ಬರಕ್ಕೆ ಪ್ರೇಕ್ಷಕ ಫುಲ್‌ ಖುಷ್‌; ನಾನಿ ಅಭಿನಯಕ್ಕೆ ಬಹುಪರಾಕ್‌

ಜಾಜಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ದಿಯಾ ಖ್ಯಾತಿಯ ನಟಿ ಖುಷಿ ರವಿ ಮಾತನಾಡಿ, “ಅಯ್ಯನ ಮನೆʼಯ ಭಾಗವಾಗಿರುವುದು ನಿಜಕ್ಕೂ ಅವಿಸ್ಮರಣೀಯ ಅನುಭವ. ನನ್ನ ಪಾತ್ರವನ್ನು ಚಿತ್ರಿಸುವುದು ಸವಾಲಿನದ್ದಾಗಿದ್ದರೂ ಈಗ ಪ್ರತಿಫಲ ಕಂಡು ಬಂದಿದೆ. ಇಷ್ಟು ಕಡಿಮೆ ಅವಧಿಯಲ್ಲಿ ವೆಬ್‌ ಸರಣಿ ಮೈಲಿಗಲ್ಲು ದಾಟಿದೆ. ನನ್ನ ಪಾತ್ರವೂ ನೋಡುಗರಿಗೆ ಇಷ್ಟವಾಗಿದೆ. ಅವಕಾಶ ನೀಡಿದ್ದಕ್ಕಾಗಿ ಝೀ5 ಮತ್ತು ಶ್ರುತಿ ನಾಯ್ಡು ಪ್ರೊಡಕ್ಷನ್ಸ್‌ಗೆ ಧನ್ಯವಾದಗಳು” ಎಂದು ಹೇಳಿದ್ದಾರೆ.

ನಿರ್ದೇಶಕ ರಮೇಶ್ ಇಂದಿರಾ ಮಾತನಾಡಿ, “ಅಯ್ಯನ ಮನೆʼ ಭಯ, ನಂಬಿಕೆ ಮತ್ತು ಕುಟುಂಬವನ್ನು ಪ್ರತಿಬಿಂಬಿಸುವ ಕಥೆ. ಇದು ಈ ರೀತಿಯ ಮೈಲಿಗಲ್ಲು ಸೃಷ್ಟಿಸಿರುವುದು ಖುಷಿಯ ವಿಷಯ. ನಾನು ಪ್ರತಿ ಫ್ರೇಮ್‌ನಲ್ಲೂ ಇಷ್ಟಪಟ್ಟು ಕೆಲಸ ಮಾಡಿದ್ದೇನೆ. ನನ್ನ ಅದ್ಭುತ ಪಾತ್ರವರ್ಗಕ್ಕೆ ನಾನು ಕೃತಜ್ಞನಾಗಿದ್ದೇನೆ. ಖುಷಿ, ಅಕ್ಷಯ, ಮಾನಸಿ ಮತ್ತು ಅದ್ಭುತ ತಂಡ ನನಗೆ ಸಿಕ್ಕಿದೆ. ಝೀ5 ಈ ರೀತಿಯ ಕಥೆಗಳಿಗೆ ಜೀವ ತುಂಬಲು ಸಹಾಯ ಮಾಡಿದೆ. ʼಅಯ್ಯನ ಮನೆʼ ಕೇವಲ ಆರಂಭ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ʼಅಯ್ಯನ ಮನೆʼಯನ್ನು ಚಿತ್ರೀಕರಿಸಲಾಗಿದೆ. ಜಾಜಿ ಮದುವೆಯಾಗಿ ತನ್ನ ಗಂಡನ ಮನೆಗೆ ಬರುತ್ತಾಳೆ. ಸೊಸೆ ಕಾಲಿಟ್ಟ ಕ್ಷಣವೇ ಮಾವ ಕೊನೆಯುಸಿರೆಳೆಯುತ್ತಾರೆ. ಅದು ಜಾಜಿಯ ಕಾಲ್ಗುಣದಿಂದ ನಡೆದಿದ್ದಾ ಅಥವಾ ಕಾಕತಾಳಿಯನಾ ? ಎನ್ನುವ ಪ್ರಶ್ನೆಯ ನಡುವೆ ಸರಣಿ ಸಾವುಗಳ ನಿಗೂಢತೆ ಜಾಜಿಯ ಆತಂಕವನ್ನು ಹೆಚ್ಚಿಸುತ್ತದೆ. ಪೂಜಾರಿ ಹೇಳಿದ ಮಾತು ಜಾಜಿಯ ನೆಮ್ಮದಿಯನ್ನೇ ಕಿತ್ತುಕೊಳ್ಳುತ್ತದೆ. ಪೂಜಾರಿ ಹೇಳಿದ ಆ ಮಾತೇನು? ಮನೆಯಲ್ಲಿ ನಡೆಯುವ ಸರಣಿ ಸಾವುಗಳಿಗೆ ಕಾರಣವೇನು? ಜಾಜಿಯ ಅತ್ತೆ ನಾಗಲಂಬಿಕೆ ಯಾವುದಾದರೂ ರಹಸ್ಯವನ್ನು ಮುಚ್ಚಿಡುತ್ತಿದ್ದಾರಾ? ದುಷ್ಯಂತನ ಸಹೋದರರ ಉದ್ದೇಶವೇನು? ಈ ಪ್ರಶ್ನೆಗಳಿಗೆ ಸೀರಿಸ್‌ನಲ್ಲಿದೆ ಉತ್ತರ.

ರಮೇಶ್ ಇಂದಿರಾ ನಿರ್ದೇಶನದಲ್ಲಿ ಮೂಡಿ ಬಂದಿರುವ ʼಅಯ್ಯನ ಮನೆʼ ವೆಬ್ ಸೀರಿಸ್‌ ಅನ್ನು ಶ್ರುತಿ ನಾಯ್ಡು ಪ್ರೊಡಕ್ಷನ್ ನಿರ್ಮಾಣ ಮಾಡಿದೆ. 7 ಎಪಿಸೋಡ್ ಹೊಂದಿರುವ ನಿಗೂಢತೆ, ಸಸ್ಪೆನ್ಸ್‌, ಥ್ರಿಲ್ಲರ್‌ ಜಾನರ್‌ನ ಈ ವೆಬ್ ಸೀರಿಸ್‌ನಲ್ಲಿ ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್ ಮತ್ತಿತರರು ಮುಖು ಅಭಿನಯಿಸಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »