ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಭಾಷಣಗಾರ್ತಿ ಚೈತ್ರಾ ಕುಂದಾಪುರ (Chaithra Kundapura) ಬಿಗ್ ಬಾಸ್ನಿಂದ ಹೊರ ಬಂದ ಮೇಲೆ ದೊಡ್ಡ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ದಿನದಿಂದ ದಿನಕ್ಕೆ ಚೈತ್ರಾ ಅವರ ವರ್ಚಸ್ಸನ್ನು ಹೆಚ್ಚುತ್ತಿದೆ. ಈಗಂತು ಚೈತ್ರಾ ಕುಂದಾಪುರ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಌಕ್ಟೀವ್ ಆಗಿದ್ದಾರೆ. ಯೂಟ್ಯೂಬ್ ಚಾನೆಲ್ ಕೂಡ ಶುರುಮಾಡಿಕೊಂಡಿದ್ದಾರೆ. ದೊಡ್ಮನೆಯಲ್ಲಿದ್ದಾಗ ಚೈತ್ರಾ ಅವರು ಸಿಂಪಲ್ ಆಗಿ ಇರುತ್ತಿದ್ದರು. ಆದರೆ, ಬಿಗ್ ಬಾಸ್ನಿಂದ ಆಚೆ ಬರುತ್ತಿದ್ದಂತೆ ಎಲ್ಲವೂ ಬದಲಾಗಿ ಬಿಟ್ಟಿದೆ. ಈಗಲೂ ಸಂದರ್ಶನ ನೀಡುತ್ತಿದ್ದಾರೆ.
ಇತ್ತೀಚೆಷ್ಟೆ ಚೈತ್ರಾ ಕುಂದಾಪುರ ಅವರು ನೀಡಿದ ಸಂದರ್ಶನವೊಂದರಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಹನುಮಂತಹ ಬಗ್ಗೆ ಕೆಲ ಕುತೂಹಲಕಾರಿ ವಿಚಾರ ಹಂಚಿಕೊಂಡಿದ್ದಾರೆ. ಕರ್ನಾಟಕದಲ್ಲಿರುವ ಎಲ್ಲರಿಗೂ ಇರುವ ಪ್ರಶ್ನೆ ಎಂದರೆ ಹನುಮಂತ ನಿಜಕ್ಕೂ ಅಷ್ಟೊಂದು ಮುಗ್ಧನ ಎಂದು. ಇದಕ್ಕೆ ಚೈತ್ರಾ ಅವರು ಉತ್ತರಿಸಿದ್ದು, ವೆಸ್ಟರ್ನ್ ಟಾಯ್ಲೆಟ್ ಬಳಸೋಕೆ ಬಾರದಷ್ಟು ಹನುಮಂತ ಮುಗ್ದನಲ್ಲ ಎಂದು ಹೇಳಿಕೊಂಡಿದ್ದರು.
‘‘ಹನುಮಂತ ತುಂಬಾ ಸೇಫ್ ಗೇಮ್ ಆಡುತ್ತಿದ್ದರು. ಕಳಪೆ ಕೊಡಬೇಕು ಅಂತಂದರು ಚೈತ್ರಾ ಹೆಸರು ತೆಗೆದುಕೊಳ್ಳುತ್ತಿದ್ದರು. ಅವರು ಒಂದು ತಿಂಗಳ ನಂತರ ಬಂದಿದ್ದರಿಂದ, ನಾನು ಈಸಿ ಟಾರ್ಗೆಟ್ ಅಂತ ಅನಿಸಿತ್ತು. ಅವರು ಮಲೇಷಿಯಾಗೆ ಹೋಗಿ ಶೋ ಕೊಟ್ಟು ಬಂದಿದ್ದಾರೆ. ಅಲ್ಲೆಲ್ಲಾ ಹೋಗಿ ಬಂದವನಿಗೆ ವೆಸ್ಟರ್ನ್ ಟಾಯ್ಲೆಟ್ ಯೂಸ್ ಮಾಡೋಕೆ ಬರಲ್ಲ ಅಂದರೆ ನಾನು ನಂಬಲ್ಲ’’ ಎಂದು ಚೈತ್ರಾ ಹೇಳಿದ್ದಾರೆ.
Seetha Rama Serial: ಆತ್ಮದಿಂದ ಹೊರಬಂದ ಸಿಹಿ: ಸೀತಾ ರಾಮ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್
‘‘ಯಾವುದೋ ಒಂದು ಟಾಸ್ಕ್‌ನಲ್ಲಿ ಸುಮ್ಮನೆ ಬೀಳುತ್ತಾನೆ, ಯಾಕೆ ಬೀಳುತ್ತೀಯಾ? ಅಂತ ಕೇಳಿದರೆ ಇದು ಪ್ರೋಮೋ ಕಂಟೆಂಟ್ ಆಗುತ್ತದೆ ಬಿಡಕ್ಕ ಅಂತಾನೆ. ಅದನ್ನೆಲ್ಲಾ ನೋಡಿದಾಗ, ಹನುಮಂತ ರಿಯಾಲಿಟಿ ಶೋಗಳಲ್ಲಿ ಪಂಟರ್ ಆಗಿದ್ದಾನೆ ಹಾಗಾಗಿ ಗೆದ್ದು ಬಂದಿದ್ದಾನೆ. ಇದೇ ಕಾರಣಕ್ಕೆ ಬೇಕು ಅಂತಲೇ ಮುಗ್ದನಂತೆ ಆಕ್ಟ್ ಮಾಡುತ್ತಿದ್ದಾನೆ ಅನ್ನೋದು ನನಗೆ ಗೊತ್ತಿತ್ತು. ನಮ್ಮೂರಿಗೆ ಬಂದಾಗ ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದಾರೆ. ಫಾರಿನ್‌ಗೆಲ್ಲಾ ಹೋದಾಗ ಅಲ್ಲಿಯೂ ಕೂಡ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಆದ್ರೆ ನಾನು ಯಾವತ್ತೂ ಹೋಟೆಲ್‌ನಲ್ಲಿ ಉಳಿದುಕೊಂಡಿಲ್ಲ ಅಂತ ಹೇಳಿದ್ದರು. ಹಾಗಾಗಿ ಹನುಮಂತ ಸುಳ್ಳು ಹೇಳುತ್ತಿದ್ದಾರೆ ಅಂತ ನಂಗೆ ಅನಿಸಿತ್ತು’’ ಎಂಬುದು ಚೈತ್ರಾ ಮಾತು.