ಬೆಂಗಳೂರು: ಕೊನೆಯ ಎಸೆತದವರೆಗೂ ಅಭಿಮಾನಿಗಳನ್ನು ಉಸಿರುಗಟ್ಟಿಸಿದ್ದ ಹೈಸ್ಕೋರಿಂಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಎರಡು ರನ್ ರೋಚಕ ಗೆಲುವು ಸಾಧಿಸಿತು. ಆ ಮೂಲಕ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ 8ನೇ ಗೆಲುವು ದಾಖಲಿಸಿದ ಆರ್‌ಸಿಬಿ, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೆ ಪುನಃ ಮರಳಿತು. ಆದರೆ, ಕೊನೆಯ ಓವರ್‌ವರೆಗೂ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಸಿಎಸ್‌ಕೆಗೆ, ವೇಗಿ ಯಶ್ ದಯಾಳ್ (Yash Dayal) ತಮ್ಮ ಬುದ್ದಿವಂತಿಕೆಯ ಬೌಲಿಂಗ್ ವಿಲನ್ ಆದರು. ಕೊನೆಯ ಓವರ್‌ನಲ್ಲಿ 12 ರನ್ ಕೊಟ್ಟು ಆರ್‌ಸಿಬಿಗೆ ಗೆಲುವು ಖಾತ್ರಿ ಪಡಿಸಿದರು.