Karunadu Studio

ಕರ್ನಾಟಕ

World Asthma Day 2025: ವಿಶ್ವ ಅಸ್ತಮಾ ದಿನ: ಚಿಕಿತ್ಸೆಯೇ ರೋಗತಡೆಗೆ ಮೂಲ – Kannada News | World Asthma Day – 6th May, 2025, Theme, Importance & Prevention


ನವದೆಹಲಿ: ಒಬ್ಬರಿಂದೊಬ್ಬರಿಗೆ ಹರಡದೆಯೆ, ತೀವ್ರವಾಗಿ ಬಾಧಿಸುವ ರೋಗಗಳಲ್ಲಿ ಅಸ್ತಮಾ ಸಹ ಒಂದು. ವಿಶ್ವದಲ್ಲಿ 260 ದಶಲಕ್ಷ ಮಂದಿ ಈ ತೊಂದರೆಯಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ 4.5 ಲಕ್ಷ ಮಂದಿ ಈ ಸಮಸ್ಯೆಯಿಂದ ಸಾವಿ ಗೀಡಾ ಗುತ್ತಿದ್ದಾರೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಸಾವನ್ನು ತಡೆಯುವ ಸಾಧ್ಯತೆ ಇರುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ, ಸರಿಯಾದ ಪ್ರಮಾಣದಲ್ಲಿ ಸ್ಟೆರಾಯ್ಡ್‌ ಇನ್‌ಹೇಲರ್‌ಗಳ ಬಳಕೆ, ಶ್ವಾಸ ಕೋಶಗಳ ಆರೋಗ್ಯದ ದೇಖರೇಖಿ- ಇಂಥ ಹಲವು ವಿಷಯಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಕಾಳಜಿ ವಹಿಸ ದಿರುವುದು ಇದಕ್ಕೆ ಕಾರಣವಾಗುತ್ತದೆ. ಈ ರೋಗದ ಬಗ್ಗೆ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಮೇ ತಿಂಗಳ ಮೊದಲ ಮಂಗಳವಾರವನ್ನು (ಈ ಬಾರಿ ಮೇ 6ರಂದು) ವಿಶ್ವ ಅಸ್ತಮಾ ಜಾಗೃತಿ (World Asthma Day 2025) ದಿನವನ್ನಾಗಿ ಆಚರಿಸಲಾಗುತ್ತದೆ.

ಯಾವುದೇ ವಯಸ್ಸಿನವರನ್ನು ಕಾಡಬಹುದಾದ ದೀರ್ಘಕಾಲೀನ ರೋಗವಿದು. ಶ್ವಾಸಕೋಶದಲ್ಲಿನ ಗಾಳಿ ಕೊಳವೆಗಳು ಮತ್ತದರ ಕೋಶಗಳು ಊದಿಕೊಂಡು ಉಸಿರಾಟಕ್ಕೆ ತೊಂದರೆಯಾಗುವ ಅವಸ್ಥೆಯಿದು. ಇದರಿಂದಾಗಿ ಉಬ್ಬಸ, ಉಸಿ ರಾಟದ ತೊಂದರೆ, ಎದೆ ಬಿಗಿಯುವುದು, ನೆಗಡಿ, ಕೆಮ್ಮು, ವಿಪರೀತ ಕಫ, ಅಲರ್ಜಿ ಇತ್ಯಾದಿ ಸಮಸ್ಯೆಗಳು ಕಾಡಿಸುತ್ತವೆ. ಹಗಲಿನಲ್ಲಿ ಕಡಿಮೆ ಇದ್ದು ರಾತ್ರಿ ಸಮಯದಲ್ಲಿ ಈ ಸಮಸ್ಯೆಯ ತೀವ್ರತೆ ಹೆಚ್ಚಬಹುದು. ಜಾಗತಿಕವಾಗಿ ವಾಯು ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿಶ್ವದೆಲ್ಲೆಡೆ ಅಸ್ತಮಾ ಚಿಕಿತ್ಸೆಯನ್ನು ಉತ್ತಮಗೊಳಿಸುವುದು ಈ ಜಾಗೃತಿ ದಿನದ ಉದ್ದೇಶಗಳಲ್ಲಿ ಒಂದು. ಈ ವರ್ಷ ಮೇ ೬ರಂದು ಆಚರಿಸಲಾಗುವ ಈ ದಿನದಂದು, ಶ್ವಾಸನಾಳಗಳಿಗೆ ತೀವ್ರ ತೊಂದರೆ ನೀಡುವ ಈ ರೋಗದಿಂದ ನರಳುತ್ತಿರುವವರಿಗೆ ಕಾಳಜಿ, ಚಿಕಿತ್ಸೆ ಮತ್ತು ನೆರವು ನೀಡುವ ಬಗ್ಗೆ ಎಲ್ಲೆಡೆ ಅರಿವು ಮೂಡಿಸುವುದು ಮಹ ತ್ವದ್ದೆನಿಸಿದೆ. ಈ ವರ್ಷದ ಘೋಷವಾಕ್ಯ- “ಇನ್‌ಹೇಲರ್‌ ಚಿಕಿತ್ಸೆ ಎಲ್ಲರಿಗೂ ದೊರೆಯುವಂತಾಗಲಿ”

ಮೊದಲ ಬಾರಿಗೆ 1993ರಲ್ಲಿ ವಿಶ್ವ ಅಸ್ತಮಾ ದಿನವನ್ನು ಘೋಷಿಸುವ ಸಂದರ್ಭದಲ್ಲಿ 35 ದೇಶಗಳು ಭಾಗ ವಹಿಸಿದ್ದವು. ಸಾಮಾನ್ಯವಾಗಿ ಅಸ್ತಮಾ ಕಾಡುವುದು ಚಳಿಗಾಲದಲ್ಲಿ ಹೆಚ್ಚು. ಹಾಗೆಂದು ವರ್ಷದ ಉಳಿದ ದಿನಗಳಲ್ಲಿ ತೊಂದರೆ ಕೊಡ ಬಾರದೆಂದೇನೂ ಇಲ್ಲ. ಮಳೆಗಾಲದಲ್ಲಿ ಮೋಡ ಕವಿದ ಸ್ಥಿತಿ ಇದ್ದಾಗ ಉಸಿರಾಡುವುದು ಕಷ್ಟ ವಾಗಬಹುದು. ಬೇಸಿಗೆಯಲ್ಲಿ ಶುಷ್ಕತೆ ಹೆಚ್ಚಾದಾಗ ವಾತಾರವಣದಲ್ಲಿ ಧೂಳಿನ ಕಣಗಳು ತೀವ್ರವಾಗಿ, ಅಸ್ತಮಾ ತೊಂದರೆ ಕೊಡುವ ಸಾಧ್ಯತೆಯಿದೆ.

ರಾತ್ರಿ ಹೆಚ್ಚಬಹುದು: ಕೆಲವರಿಗೆ ಹಗಲಿಗೆ ಈ ತೊಂದರೆ ಕಡಿಮೆ ಇದ್ದು, ರಾತ್ರಿಗೆ ತೀವ್ರಗೊಳ್ಳಬಹುದು. ಹೀಗಾಗುವುದಕ್ಕೂ ಹಲವಾರು ಕಾರಣಗಳಿವೆ. ಒಂದು ಕಾರಣವೆಂದರೆ, ದೇಹದ ಸರ್ಕೇಡಿಯನ್‌ ಲಯ. ಅಂದರೆ ಹಗಲು ಕಳೆದು ರಾತ್ರಿ ಆವರಿ ಸುತ್ತಿದ್ದಂತೆ ದೇಹದ ನೈಸರ್ಗಿಕ ಗಡಿಯಾರವೂ ಬದಲಾಗುತ್ತದೆ. ಹೀಗೆ ಬದಲಾಗುವ ಸರ್ಕೇಡಿಯನ್‌ ಲಯದಿಂದಾಗಿ ಶ್ವಾಸನಾಳಗಳಲ್ಲಿ ಉರಿಯೂತ ಹೆಚ್ಚಬಹುದು. ಇನ್ನೊಂದು ಕಾರಣವೆಂದರೆ, ಮಲಗುವ ಭಂಗಿ. ನೆಲಕ್ಕೆ ಸಮಾಂನಾಂತ ರವಾಗಿ ಮಲಗಿದಾಗ ಶ್ವಾನನಾಳಗಳಲ್ಲಿ ಕಫ ಕಟ್ಟುವುದು ಹೆಚ್ಚುತ್ತದೆ. ಹಾಗಾಗಿ ಪೂರ್ಣ ಮಲಗುವ ಬದಲು ಹಿಂದೆ ಮಲಗಿದಂಥ ಭಂಗಿಯಲ್ಲಿ ಉಸಿರಾಟ ಕೊಂಚ ಸರಾಗವಾಗುತ್ತದೆ.

ಇನ್ನಷ್ಟು ಕಾರಣಗಳು: ಹುಳಿತೇಗಿನ ಸಮಸ್ಯೆಯಿದ್ದರೆ ಉಸಿರಾಟದ ತೊಂದರೆಯೂ ಕಾಣಬಹುದು. ಅದರಲ್ಲೂ ಜಿಇಆರ್‌ಡಿ (GERD) ನಂಥ ಕಿರಿಕಿರಿಗಳಿದ್ದರೆ ರಾತ್ರಿಯಲ್ಲಿ ಅಸ್ತಮಾ ತೊಂದರೆ ಕೊಡುವುದು ಸ್ವಲ್ಪ ಹೆಚ್ಚೆ. ಜೊತೆಗೆ, ಮನೆಯ ಒಳ-ಹೊರಗಿನ ವಾತಾವರಣ ಆದಷ್ಟು ಶುಚಿಯಾಗಿ ಇರುವಂತೆ ನೋಡಿಕೊಳ್ಳಿ. ಇದರಿಂದ ಅಲರ್ಜಿಯ ಪ್ರಮಾಣವನ್ನು ಗಣ ನೀಯವಾಗಿ ತಗ್ಗಿಸಬಹುದು. ಹೊಗೆ, ಧೂಳು, ಫಂಗಸ್, ಪರಾಗಗಳು ಇತ್ಯಾದಿಗಳು ಆದಷ್ಟು ದೂರವೇ ಇದ್ದಾರೆ ಕ್ಷೇಮ. ಹಾಸಿಗೆ ಬಟ್ಟೆಗಳನ್ನು ಆಗಾಗ ಬದಲಿಸಿ.

ಇದನ್ನು ಓದಿ: Health Tips: ಮಾವಿನ ಹಣ್ಣು ಅಸಲಿಯೋ ನಕಲಿಯೋ ಪತ್ತೆ ಹಚ್ಚಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

ಅಲರ್ಜಿ ತರುವಂಥ ಆಹಾರಗಳನ್ನು ಮುಟ್ಟದಿರುವುದು ಕ್ಷೇಮ. ಸೋಂಕುಗಳಿಂದ ದೂರ ಇರುವುದಕ್ಕೆ ಶಕ್ತಿಯುತ ಆಹಾರ ಸೇವನೆ ಅಗತ್ಯ. ಇಡೀ ದೇಹದ ಆರೋಗ್ಯ, ಅದರಲ್ಲೂ ಶ್ವಾಸಕೋಶಗಳು ಚೆನ್ನಾಗಿರಬೇಕೆಂದರೆ, ನಿಯಮಿತವಾದ ವ್ಯಾಯಾಮ ಬೇಕು. ಯಾವುದೇ ಕಾಲದಲ್ಲೂ ಅಸ್ತಮಾ ಕಾಣಿಸಿಕೊಳ್ಳಬಹುದು. ಹಾಗಾಗಿ ಅಗತ್ಯ ಔಷಧಗಳನ್ನು ತಪ್ಪದೆ ಇರಿಸಿಕೊಳ್ಳಬೇಕು. ಇನ್ಹೇಲರ್ ಮುಂತಾದವುಗಳನ್ನು ತಂಪಾದ ಸ್ಥಳದಲ್ಲಿ ಇರಿಸುವುದು ಅಗತ್ಯ. ಕಾಲಕಾಲಕ್ಕೆ ಪೀಕ್ ಪ್ಲೊ ಮೀಟರ್ ನಿಂದ ಶ್ವಾಸಕೋಶದ ಸ್ಥಿತಿಗತಿಯ ಬಗ್ಗೆ ತಪಾಸಣೆ ಮಾಡಿಕೊಳ್ಳಿ. ಈ ರೋಗದ ನಿಯಂತ್ರಣಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ಮತ್ತು ಉರಿಯೂತದ ಕಾರಣ ಅರ್ಥ ಮಾಡಿಕೊಳ್ಳುವುದು ಮಹತ್ವದ್ದು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »