ಬೆಂಗಳೂರು: ಕನ್ನಡದ ಬಿಗ್ಬಾಸ್ ಸೀಸನ್ 11ರ ಖ್ಯಾತಿಯ ರಂಜಿತ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೀತಿಸಿದ ಹುಡುಗಿ ಮಾನಸ ಜತೆಗೆ ರಂಜಿತ್ ಕುಮಾರ್ ಸಪ್ತಪದಿ ತುಳಿದಿದ್ದು, ದೊಡ್ಡಬಳ್ಳಾಪುರ ಸಿಂಗನಾಯಕನಹಳ್ಳಿನಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಶನಿವಾರ ಅದ್ಧೂರಿಯಾಗಿ ವಿವಾಹ ನಡೆಯಿತು. ರಂಜಿತ್ ಮದುವೆಗೆ ಬಿಗ್ಬಾಸ್ ಸಹಸ್ಪರ್ಧಿಗಳು ಹಾಗೂ ಕನ್ನಡ ಚಿತ್ರರಂಗದ ಹಲವು ಕಲಾವಿದರು ಆಗಮಿಸಿ ಶುಭ ಹಾರೈಸಿದರು.
ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ತುಕಾಲಿ ಸಂತೋಷ್ ಹಾಗೂ ಮಾನಸಾ ಸಂತೋಷ್ ದಂಪತಿ, ಲಾಯರ್ ಜಗದೀಶ್, ಗೋಲ್ಡ್ ಸುರೇಶ್, ಅನುಷಾ ರೈ, ಯಮುನಾ ಶ್ರೀನಿಧಿ, ನಟ ರಂಗಾಯಣ ರಘು ಹಾಗೂ ಶೋಭರಾಜ್ ಸೇರಿದಂತೆ ಹಲವರು ಆಗಮಿಸಿ ನವ ವಧು ವರರಿಗೆ ಶುಭ ಹಾರೈಸಿದರು. ಇನ್ನು ಶುಕ್ರವಾರ ರಂಜಿತ್ ಅವರು ಭಾವಿ ಪತ್ನಿ ಜತೆಗೆ ಮೆಹೆಂದಿ ಹಾಗೂ ಸಂಗೀತ ಶಾಸ್ತ್ರದಲ್ಲಿ ಸಖತ್ ಮಿಂಚಿದ್ದರು. ಭಾವಿ ಪತ್ನಿ ಮಾನಸಾ ಅವರ ಕೈಗೆ ಮೆಹೆಂದಿ ಹಾಕಿ ಖುಷಿಪಟ್ಟಿದ್ದರು. ಅಷ್ಟೇ ಭರ್ಜರಿಯಾಗಿ ಮಾನಸಾ ಜತೆ ಡ್ಯಾನ್ಸ್ ಕೂಡ ಮಾಡಿದ್ದರು. ಇಂದು ಅದ್ಧೂರಿಯಾಗಿ ವಿವಾಹ ನಡೆದಿದೆ.
ರಂಜಿತ್ ಮದುವೆಯಾದ ಹುಡುಗಿ ಯಾರು?
ರಂಜಿತ್ ಅವರು ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿಯ ಹೆಸರು ಮಾನಸ ಗೌಡ. ಇವರು ಫ್ಯಾಷನ್ ಡಿಸೈನರ್ ಆಗಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟವ್ ಆಗಿರುವ ಮಾನಸ ಗೌಡ, ಕಂಟೆಂಟ್ ಕ್ರಿಯೇಟರ್ ಕೂಡ ಆಗಿದ್ದಾರೆ.
ಅದ್ಧೂರಿಯಾಗಿ ನೆರವೇರಿದ ಮದುವೆ
ನಟ ರಂಜಿತ್ ಮತ್ತು ಮಾನಸ ಗೌಡ ಗುರು-ಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದೊಡ್ಡಬಳ್ಳಾಪುರದ ಮುಖ್ಯರಸ್ತೆಯ ಹೊನ್ನೇನಹಳ್ಳಿಯಲ್ಲಿ ರಂಜಿತ್ ಮತ್ತು ಮಾನಸ ಗೌಡ ಅವರ ಮದುವೆ ಅದ್ಧೂರಿಯಾಗಿ ನಡೆಯಿತು. ಕೊರಳಿಗೆ ತಾಳಿ ಬೀಳುತ್ತಿದ್ದಂತೆ ಮಾನಸ ಭಾವುಕರಾಗಿದ್ದು ಕಂಡುಬಂತು.
ರಂಜಿತ್ ಮತ್ತು ಮಾನಸ ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಕಳೆದ ಮೂರು ದಿನಗಳಿಂದಲೂ ಮೆಹಂದಿ ಶಾಸ್ತ್ರ ಹಾಗೂ ಸಂಗೀತ ಕಾರ್ಯಕ್ರಮ ನಡೆದಿತ್ತು. ಹೆಂಡತಿ ಮಾನಸ ಜೊತೆಗೆ ರಂಜಿತ್ ಕುಣಿದು ಕುಪ್ಪಳಿಸಿದ್ದರು. ಈ ಕುರಿತ ಫೋಟೋಗಳು ಮತ್ತು ವಿಡಿಯೋಗಳು ಸಖತ್ ವೈರಲ್ ಆಗಿದ್ದವು.