ಲಂಡನ್: ಶಾಂತ ಮತ್ತು ಸಂಯಮದಿಂದ ವರ್ತಿಸುವ ಟಾಲಿವುಡ್ ಸೂಪರ್‌ಸ್ಟಾರ್ ಜೂನಿಯರ್ ಎನ್‌ಟಿಆರ್ (Jr NTR), ಲಂಡನ್‌ನ (London) ಐತಿಹಾಸಿಕ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ (Royal Albert Hall ) ನಡೆದ RRR ಲೈವ್ ಕಾನ್ಸರ್ಟ್‌ನಲ್ಲಿ ಕೋಪಗೊಂಡ ಘಟನೆ ಎಲ್ಲರ ಗಮನ ಸೆಳೆದಿದೆ. ತಮ್ಮ ನೆಚ್ಚಿನ ಸ್ಟಾರ್‌ನ ನೋಡಲು ಮತ್ತು ಸೆಲ್ಫಿ ಕ್ಲಿಕ್ಕಿಸಲು ಜಮಾಯಿಸಿದ್ದ ಅಭಿಮಾನಿಗಳ ಗುಂಪು ಗೊಂದಲ ಸೃಷ್ಟಿಸಿದಾಗ, ಕಿರಿಕಿರಿಗೊಂಡ ಎನ್‌ಟಿಆರ್ ಅವರು ಗದರಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಸೆಲ್ಫಿಗಾಗಿ ಸುತ್ತುವರಿದ ಅಭಿಮಾನಿಗಳ ಗುಂಪಿನಿಂದ ಕಿರಿಕಿರಿಗೊಂಡ ಎನ್‌ಟಿಆರ್, ಜೋರಾಗಿ ಎಚ್ಚರಿಕೆ ನೀಡುವುದು ಕಂಡುಬಂದಿದೆ. ಕಾರಿಡಾರ್‌ನಲ್ಲಿ ಹೋಗುತ್ತಿರುವಾಗ ತಳ್ಳಾಟದಿಂದ ಗೊಂದಲ ಉಂಟಾದಾಗ, “ನಾನು ನಿಮಗೆ ಸೆಲ್ಫಿ ಕೊಡುತ್ತೇನೆ, ಆದರೆ ಕಾಯಬೇಕು. ಇಂತಹ ವರ್ತನೆ ಮಾಡಿದರೆ ಭದ್ರತಾ ಸಿಬ್ಬಂದಿ ನಿಮ್ಮನ್ನು ಹೊರಗೆ ಕಳಿಸುತ್ತಾರೆ” ಎಂದು ಅವರು ಎಚ್ಚರಿಸಿದ್ದಾರೆ. ಗುಂಪು ಸುಮ್ಮನಾಗದೆ ಇದ್ದಾಗೆ, ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಜೂನಿಯರ್ ಎನ್‌ಟಿಆರ್ ಅವರನ್ನು ಸುರಕ್ಷಿತವಾಗಿ ಕರೆದೊಯ್ದರು.
RRR ಕಾರ್ಯಕ್ರಮ ಅದ್ಧೂರಿಯಾಗಿತ್ತು. ಜೂನಿಯರ್ ಎನ್‌ಟಿಆರ್, ನಿರ್ದೇಶಕ ಎಸ್‌ಎಸ್ ರಾಜಮೌಳಿ ಮತ್ತು ಸಹನಟ ರಾಮ್ ಚರಣ್ ಜೊತೆಗೆ ಚಿತ್ರದ ವಿಶೇಷ ಪ್ರದರ್ಶನ ಮತ್ತು ಲೈವ್ ಪ್ರದರ್ಶನದಲ್ಲಿ ಭಾಗವಹಿಸಿದರು. ಆಸ್ಕರ್ ವಿಜೇತ ‘ನಾಟು ನಾಟು’ ಹಾಡು ಹಾಲ್‌ನಲ್ಲಿ ಪ್ಲೇ ಮಾಡಿದ್ದಾಗ ಜನರಿದ್ದ ಉತ್ತಮಪ್ರತಿಕ್ರಿಯೆ ಸಿಕ್ಕಿತು. ಕಾರ್ಯಕ್ರಮದಲ್ಲಿ ಎನ್‌ಟಿಆರ್, ತಮ್ಮ ಚಿಕ್ಕಪ್ಪ ಬಾಲಕೃಷ್ಣ ಮತ್ತು ರಾಮ್ ಚರಣ್‌ರ ತಂದೆ ಚಿರಂಜೀವಿ ಅವರಿಗೆ ಗೌರವ ಸೂಚಿಸಿದರು. “ಈ ಹಾಡು ಚಿರಂಜೀವಿ ಅವರು ಮತ್ತು ಬಾಲಕೃಷ್ಣ ಅವರಂತ ಮಹಾನ್ ಡ್ಯಾನ್ಸರ್‌ಗಳಿಗೆ ಗೌರವಾನ್ವಿತ ನಮನವಾಗಿದೆ” ಎಂದು ಹೇಳಿದರು.
RRR ಚಿತ್ರವು ಜೂನಿಯರ್ ಎನ್‌ಟಿಆರ್‌ರ ವೃತ್ತಿಜೀವನದಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲಿಯೇ ಒಂದು ಮೈಲಿಗಲ್ಲಾಗಿದೆ. ರಾಮ್ ಚರಣ್ ಜೊತೆಗಿನ ಅವರ ಅಭಿನಯ ‘ನಾಟು ನಾಟು’ಗೆ ಆಸ್ಕರ್ ಗೆಲ್ಲಿಸಿ, ಚಿತ್ರವನ್ನು ವಿಶ್ವಾದ್ಯಂತ ಖ್ಯಾತಿ ಗಳಿಸಿದೆ. ಕಾರ್ಯಕ್ರಮದಲ್ಲಿ ರಾಯಲ್ ಫಿಲ್‌ಹಾರ್ಮೋನಿಕ್ ಆರ್ಕೆಸ್ಟ್ರಾದ ಲೈವ್ ಪ್ರದರ್ಶನವು ಮತ್ತಷ್ಟು ಮೋಡಿ ಮಾಡಿತು. ಎನ್‌ಟಿಆರ್ ಅವರ ಮುಂಬರುವ ಸಿನಿಮಾಗಳ ಬಗ್ಗೆ ಮಾತನಾಡುವುದಾದರೆ, ಅವರು ಪ್ರಶಾಂತ್ ನೀಲ್ ನಿರ್ದೇಶನದ ಬಹುನೀರಿಕ್ಷಿತ ‘NTRNeel’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಚಿತ್ರವು ಅದ್ಧೂರಿಯಾಗಿರಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ. ಜೊತೆಗೆ, ಅವರ ಬಳಿ ‘ವಾರ್ 2’ ಚಿತ್ರವೂ ಇದೆ.