Karunadu Studio

ಕರ್ನಾಟಕ

ಬೃಂದಾವನಕ್ಕೆ ಭೇಟಿಕೊಟ್ಟ ವಿರುಷ್ಕಾ ದಂಪತಿ, ಕೊಹ್ಲಿಗೆ ಪ್ರೇಮಾನಂದ ಮಹಾರಾಜ್ ನೀಡಿದ ಉಪದೇಶ ಇಲ್ಲಿದೆ! – Kannada News | A day after retiring from Test cricket Virat Kohli visited Vrindavan with his wife Anushka Sharma


ನವದೆಹಲಿ: ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ಒಂದು ದಿನದ ಬೆನ್ನಲ್ಲೆ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್ ಕೊಹ್ಲಿ(Virat Kohli) ಮೇ 13 ರಂದು ಮಂಗಳವಾರ ಬೃಂದಾವನಕ್ಕೆ ಭೇಟಿ ನೀಡಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರೊಂದಿಗೆ ಬೃಂದಾವನದಲ್ಲಿ ಪ್ರೇಮಾನಂದ ಜಿ ಮಹಾರಾಜ್ ಅವರನ್ನು ಭೇಟಿಯಾದರು. ಈ ವೇಳೆ ಮಹಾರಾಜರೊಂದಿಗೆ ಕೊಹ್ಲಿ ಆಧ್ಯಾತ್ಮಿಕ ಸಂಭಾಷಣೆ ನಡೆಸಿ ಅವರ ಆಶೀರ್ವಾದ ಪಡೆದರು. ಪ್ರಸಕ್ತ ವರ್ಷ ವಿರಾಟ್ ಕೊಹ್ಲಿ ಎರಡನೇ ಬಾರಿ ಪ್ರೇಮಾನಂದ ಜಿ ಮಹಾರಾಜ್ ಅವರನ್ನು ಭೇಟಿ ಮಾಡಿದಂತಾಗಿದೆ. ಈ ವರ್ಷದ ಆರಂಭದಲ್ಲಿ ಜನವರಿ ತಿಂಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮಕ್ಕಳೊಂದಿಗೆ ಇಲ್ಲಿಗೆ ಬಂದಿದ್ದರು.

ಆಶ್ರಮವನ್ನು ತಲುಪಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರೇಮಾನಂದ ಜಿ ಮಹಾರಾಜ್ ಅವರಿಗೆ ನಮನ ಸಲ್ಲಿಸಿದರು. ಈ ವೇಳೆ ಮಹಾರಾಜರು, ʻನೀವು ಸಂತೋಷವಾಗಿದ್ದೀರಾ?ʼ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ, ‘ಹೌದು, ಈಗ ಎಲ್ಲವೂ ಚೆನ್ನಾಗಿದೆʼ ಎಂದು ಹೇಳಿದರು. ಮಹಾರಾಜ್ ಜೀ ಕೂಡ ಎಲ್ಲವೂ ಸರಿಯಾಗಬೇಕೆಂದು ಹೇಳಿದರು. ಈ ಸಮಯದಲ್ಲಿ, ಪ್ರೇಮಾನಂದ ಜಿ ಮಹಾರಾಜ್ ಅವರು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಿಗೆ ಧರ್ಮೋಪದೇಶ ನೀಡಿದರು. ಮಹಾರಾಜ್ ಜಿ ಅವರ ಮಾತುಗಳನ್ನು ಕೇಳಿದ ನಂತರ ಅನುಷ್ಕಾ ಶರ್ಮಾ ಕೂಡ ಭಾವುಕರಾದರು.

IND vs ENG: ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಸ್ಥಾನ ತುಂಬಬಲ್ಲ ಟಾಪ್‌ 5 ಆಟಗಾರರು!

ಮಹಾರಾಜ್ ಅವರ ಮಾತುಗಳಲ್ಲಿ ಮಳುಗಿದ ಕೊಹ್ಲಿ

ಪ್ರೇಮಾನಂದ ಜಿ ಮಹಾರಾಜ್ ಅವರನ್ನು ಭೇಟಿಯಾದಾಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮಾತುಗಳನ್ನು ಕೇಳುವುದರಲ್ಲಿ ಮಗ್ನರಾಗಿದ್ದರು. ಮಹಾರಾಜರು ವಿರಾಟ್ ಮತ್ತು ಅನುಷ್ಕಾಗೆ, “ನಾವು ಪಡೆದಿರುವ ಈ ಸಂಪತ್ತು ಕೇವಲ ದೇವರ ಕೃಪೆಯಿಂದಲ್ಲ. ಇದು ನಿಮ್ಮ ಒಳ್ಳೆಯ ಕಾರ್ಯಗಳ ಫಲಿತಾಂಶ. ನಿಜವಾದ ವಿಷಯವೆಂದರೆ ನಿಮ್ಮ ಆಂತರಿಕ ಆಲೋಚನೆಗಳು ಬದಲಾಗಬೇಕು. ನೀವು ಈಗಿರುವ ರೀತಿಯಲ್ಲೇ ಬದುಕಬೇಕು, ಆದರೆ ನಿಮ್ಮ ಹೃದಯದಲ್ಲಿ ದೇವರ ಮೇಲೆ ಪ್ರೀತಿ ಇರಬೇಕು. ನೀವು ಅನೇಕ ಜನ್ಮಗಳನ್ನು ತೆಗೆದುಕೊಂಡಿದ್ದೀರಿ ಎಂದು ನೀವು ಭಾವಿಸಬೇಕು. ಈಗ ನಿಮಗೆ ದೇವರು ಮಾತ್ರ ಬೇಕು,” ಎಂದು ಹೇಳಿದರು. ಮಹಾರಾಜ್ ಅವರ ಈ ಮಾತುಗಳನ್ನು ಕೇಳಿದ ನಂತರ, ಅನುಷ್ಕಾ ಶರ್ಮಾ ಸ್ವಲ್ಪ ಸಮಯದವರೆಗೆ ಭಾವುಕರಾದರು.



ವಿರಾಟ್‌ ಕೊಹ್ಲಿಯ ಟೆಸ್ಟ್‌ ಅಂಕಿಅಂಶ

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ವಿರಾಟ್ ಕೊಹ್ಲಿ ತಮ್ಮ 14 ವರ್ಷಗಳ ವೃತ್ತಿಜೀವನದಲ್ಲಿ ಟೀಮ್ ಇಂಡಿಯಾ ಪರ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಅವರು 30 ಶತಕಗಳು ಮತ್ತು 31 ಅರ್ಧಶತಕಗಳು ಸೇರಿದಂತೆ 9230 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ಮಾದರಿಯಲ್ಲಿ ಅತ್ಯಂತ ಯಶಸ್ವಿ ಭಾರತೀಯ ನಾಯಕರಾಗಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ ತಂಡ ಆಡಿದ 68 ಟೆಸ್ಟ್‌ ಪಂದ್ಯಗಳಲ್ಲಿ 40 ರಲ್ಲಿ ಗೆಲುವು ಪಡೆದಿದೆ.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »