Karunadu Studio

ಕರ್ನಾಟಕ

4 ಬೇಸ್‌ಕೇರ್‌ನ ಹೊಸ ಜೀನೋಮಿಕ್ಸ್ ಪ್ರಯೋಗಾಲಯ, ಜಾಗತಿಕ ಕ್ಯಾನ್ಸರ್ ವೈವಿಧ್ಯತಾ ಭೂಪಟ’ ಉದ್ಘಾಟಿಸಿದ ನಾರಾಯಣ ಮೂರ್ತಿ – Kannada News | 4 Narayana Murthy inaugurates Basecare’s new genomics lab, ‘Global Cancer Diversity Map’


ಬೆಂಗಳೂರು: ಜಾಗತಿಕ ಕ್ಯಾನ್ಸರ್ ಆರೈಕೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು ಎಂಬಂತೆ, ಪ್ರಿಸಿಷನ್ ಆಂಕೊಲಾಜಿಯಲ್ಲಿ ಮುಂಚೂಣಿಯಲ್ಲಿರುವ 4ಬೇಸ್‌ಕೇರ್‌ (4baseCare) ಸಂಸ್ಥೆಯು ಬೆಂಗಳೂರಿನ ಮಹದೇವಪುರದಲ್ಲಿ ಅತ್ಯಾಧುನಿಕ ಜೀನೋಮಿಕ್ಸ್ ಪ್ರಯೋಗಾಲಯ ಲೋಕಾರ್ಪಣೆ ಗೊಳಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಇನ್ಫೋಸಿಸ್‌ನ ಅಧ್ಯಕ್ಷ ಎನ್‌.ಆರ್. ನಾರಾಯಣ ಮೂರ್ತಿ ಅವರು ಪಾಲ್ಗೊಂಡು, ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸೆಯ ದಿಕ್ಕನ್ನು ಬದಲಿಸ ಬಲ್ಲ ‘ಜಾಗತಿಕ ಕ್ಯಾನ್ಸರ್ ವೈವಿಧ್ಯತಾ ಭೂಪಟ’ (Global Cancer Diversity Atlas – GCDA)ವನ್ನು ಲೋಕಾರ್ಪಣೆ ಮಾಡಿದರು.

ಈ ಐತಿಹಾಸಿಕ ಕಾರ್ಯಕ್ರಮವು ಆರೋಗ್ಯ ಮತ್ತು ತಂತ್ರಜ್ಞಾನ ಕ್ಷೇತ್ರದ ಅನೇಕ ಗಣ್ಯರನ್ನು ಸಮ್ಮುಖದಲ್ಲಿ ನಡೆಯಿತು. ಯಾಲಿ ಕ್ಯಾಪಿಟಲ್‌ನ ಸಂಸ್ಥಾಪಕ ವ್ಯವಸ್ಥಾಪಕ ಪಾಲುದಾರರಾದ ಗಣಪತಿ ಸುಬ್ರಮಣ್ಯಂ, ಪೀಕ್ XV ಪಾರ್ಟ್‌ನರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ರಾಜನ್ ಆನಂದನ್ ಹಾಗೂ 4baseCare ಸಂಸ್ಥಾಪಕರಾದ ಹಿತೇಶ್ ಗೋಸ್ವಾಮಿ ಮತ್ತು ಕ್ಷಿತಿಜ್ ರಿಷಿ ಅವರ ಉಪಸ್ಥಿತರಿದ್ದರು.

ಇದನ್ನೂ ಓದಿ: Bangalore To Mangalore Train: ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ

4ಬೇಸ್‌ಕೇರ್‌ನ (4baseCare) ಈ ನೂತನ ಪ್ರಯೋಗಾಲಯವು ಅತ್ಯಾಧುನಿಕ ಜೀನೋಮಿಕ್ ಪರೀಕ್ಷಾ ತಂತ್ರಜ್ಞಾನಗಳನ್ನು ಹೊಂದಿದೆ. ಇದರಲ್ಲಿ ಸಮಗ್ರ ಜೀನ್ ಪ್ಯಾನೆಲ್‌ಗಳು, ಸಂಪೂರ್ಣ ಎಕ್ಸೋಮ್ ಸೀಕ್ವೆನ್ಸಿಂಗ್ ಮತ್ತು ಟ್ರಾನ್ಸ್‌ಕ್ರಿಪ್ಟೋಮ್ ವಿಶ್ಲೇಷಣೆಯಂತಹ ಸೌಲಭ್ಯಗಳು ವೈದ್ಯರಿಗೆ ಲಭ್ಯವಾಗಲಿವೆ. ಈ ಸುಧಾರಿತ ವಿಧಾನಗಳು ವೈಯಕ್ತಿಕ ರೋಗಿಗಳಿಗನುಗುಣವಾಗಿ ಹೆಚ್ಚು ಪರಿಣಾಮಕಾರಿ ಕ್ಯಾನ್ಸರ್ ಚಿಕಿತ್ಸೆಗಳನ್ನು ನೀಡಲು ನೆರವಾಗುತ್ತವೆ. ವಿಶೇಷವಾಗಿ ಭಾರತ ಮತ್ತು ಗ್ಲೋಬಲ್ ಸೌತ್‌ನಂತಹ ಕಡಿಮೆ ಪ್ರಾತಿನಿಧ್ಯವಿರುವ ಜನಸಂಖ್ಯೆಯಲ್ಲಿನ ಕ್ಯಾನ್ಸರ್ ಆರೈಕೆಗೆ ಇದು ಹೊಸ ಆಯಾಮ ನೀಡಲಿದೆ.

ಇದಲ್ಲದೆ, 4ಬೇಸ್‌ಕೇರ್‌ (4baseCare) ಪ್ರಾರಂಭಿಸಿರುವ ಜಾಗತಿಕ ಕ್ಯಾನ್ಸರ್ ವೈವಿಧ್ಯತಾ ಭೂಪಟ (GCDA) ಉಪಕ್ರಮವು ಜಾಗತಿಕ ಕ್ಯಾನ್ಸರ್ ಸಂಶೋಧನೆಯಲ್ಲಿ ಒಂದು ಮಹತ್ತರವಾದ ಪರಿವರ್ತನೆ ತರಲಿದೆ. ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ, ಮಧ್ಯ ಯುರೋಪ್ ಮತ್ತು ಲ್ಯಾಟಿನ್ ಅಮೆರಿಕಾದಂತಹ ವೈವಿಧ್ಯಮಯ ಪ್ರದೇಶಗಳಿಂದ ಸಂಗ್ರಹಿಸಲಾದ ನೈಜ-ಪ್ರಪಂಚದ ದತ್ತಾಂಶ ಗಳನ್ನು ಇದು ಒಳಗೊಂಡಿದೆ. ಪ್ರಸ್ತುತ ಜಾಗತಿಕ ಕ್ಯಾನ್ಸರ್ ಜೀನೋಮಿಕ್ ದತ್ತಾಂಶಗಳಲ್ಲಿ ಪಾಶ್ಚಿ ಮಾತ್ಯ ಜನಸಂಖ್ಯೆಯ ಪ್ರಾಬಲ್ಯವಿರುವ ಕೊರತೆಯನ್ನು ಇದು ನೀಗಿಸುತ್ತದೆ. ಈ ಸಮಗ್ರ ದತ್ತಾಂಶ ವು ಕ್ಯಾನ್ಸರ್ ಸಂಶೋಧನೆಗೆ ಹೊಸ ಅವಕಾಶಗಳ ಬಾಗಿಲನ್ನು ತೆರೆಯುವುದಲ್ಲದೆ, ರೋಗನಿರ್ಣಯ ಮತ್ತು ಚಿಕಿತ್ಸಾ ವಿಧಾನಗಳನ್ನು ಕ್ರಾಂತಿಕಾರಕ ಮಾಡಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ 4ಬೇಸ್‌ಕೇರ್‌ (4baseCare) ನ ಸಿಇಒ ಮತ್ತು ಸಹ-ಸಂಸ್ಥಾಪಕ ರಾದ ಹಿತೇಶ್ ಗೋಸ್ವಾಮಿ ಅವರು, “ಭಾರತೀಯ ಮತ್ತು ಏಷ್ಯನ್ ಜನಸಮುದಾಯದ ಜೀನೋ ಮಿಕ್ ದತ್ತಾಂಶದ ಕೊರತೆಯು ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸಾ ತಂತ್ರಗಳಲ್ಲಿನ ಅಸಮಾ ನತೆಗೆ ಕಾರಣವಾಗಿದೆ. GCDAಯ ಮೂಲಕ ಈ ಅಂತರವನ್ನು ತುಂಬುವ ಮತ್ತು ಪ್ರತಿಯೊಬ್ಬ ರೋಗಿಯನ್ನು ಅವರ ಭೌಗೋಳಿಕ ಹಿನ್ನೆಲೆಯನ್ನು ಲೆಕ್ಕಿಸದೆ ಅರ್ಥಮಾಡಿಕೊಳ್ಳುವ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಹೇಳಿದರು.

4baseCare ನ ಈ ಕಾರ್ಯವು, ಕೇವಲ ಆರೋಗ್ಯ ಕ್ಷೇತ್ರದಲ್ಲಿ ಸಮಗ್ರತೆಯನ್ನು ಹೆಚ್ಚಿಸುವುದಲ್ಲದೆ, ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸೆಯ ವಿಧಾನವನ್ನೇ ಮರು ವ್ಯಾಖ್ಯಾನಿಸುವ ಸಾಮರ್ಥ್ಯ ವನ್ನು ಹೊಂದಿದೆ. ಈ ಹೊಸ ಜೀನೋಮಿಕ್ಸ್ ಲ್ಯಾಬ್ ಮತ್ತು GCDA ಯೊಂದಿಗೆ, 4ಬೇಸ್‌ಕೇರ್‌ ಜಾಗತಿಕ ಕ್ಯಾನ್ಸರ್ ಆರೈಕೆಗೆ ಒಂದು ಹೊಸ ದಿಕ್ಕನ್ನು ನೀಡಲು ಸಜ್ಜಾಗಿದೆ, ಇದು ಎಲ್ಲರಿಗೂ ಹೆಚ್ಚು ವೈಯಕ್ತಿಕಗೊಳಿಸಿದ, ಪರಿಣಾಮಕಾರಿ ಮತ್ತು ಸುಲಭವಾಗಿ ಲಭ್ಯವಿರುವ ಚಿಕಿತ್ಸಾ ಆಯ್ಕೆಗಳನ್ನು ಒದಗಿಸುವ ಭರವಸೆಯನ್ನು ನೀಡುತ್ತದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »