Karunadu Studio

ಕರ್ನಾಟಕ

Bengaluru News: ಸಮಾಜದಲ್ಲಿ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಎಂ.ಎಸ್.ಜಗನ್ನಾಥ್ – Kannada News | Change in society is possible only through education. M.S. Jagannath


ಹಾರೋಹಳ್ಳಿ: ಸಮಾಜದಲ್ಲಿ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಜೊತೆಗೆ ಸರ್ಕಾರಿ ಸೌಲಭ್ಯ ವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ದಲಿತ ಸೇನೆ ರಾಜ್ಯಾಧ್ಯಕ್ಷ ಎಂ.ಎಸ್. ಜಗನ್ನಾಥ್ ಹೇಳಿದರು. ಹಾರೋಹಳ್ಳಿಯ ಬಸ್ ನಿಲ್ದಾಣದ ವೃತ್ತದಲ್ಲಿ ದಲಿತ ಸೇನೆ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತ ನಾಡಿದರು. ಶತ ಶತಮಾನಗಳಿಂದ ದೇಶದಲ್ಲಿದ್ದ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ ಎಂದರು. ಸಮಾಜದಲ್ಲಿ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಜೊತೆಗೆ ಸರ್ಕಾರಿ ಸೌಲಭ್ಯವನ್ನು ಎಲ್ಲರೂ ಸದುಪಯೋಗ-ಪಡಿಸಿಕೊಳ್ಳಿ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದಿದೆ ಆದರೆ ಈವೆರೆಗೂ ಎಸ್‌ಸಿ, ಎಸ್‌ಟಿ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ನಮ್ಮ ಹಕ್ಕು ನಮಗೆ ದೊರೆಯಬೇಕಾದರೆ ಕೂಡಲೇ ಆಯೋಗದ ಅಧ್ಯಕ್ಷರನ್ನು ನೇಮಿಸುವ ಕೆಲಸವನ್ನು ಸರ್ಕಾರ ಮಾಡಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ: Bangalore News: ಎಪಿಎಸ್ ಎಜುಕೇಷನಲ್ ಟ್ರಸ್ಟ್ ನಿಂದ ಮೇ 3 ರಂದು ರಾಷ್ಟ್ರಮಟ್ಟದ ಶಿಕ್ಷಣ ಪ್ರದರ್ಶನ ಮತ್ತು ಉದ್ಯೋಗ ಮೇಳ

ರಾಜ್ಯದಲ್ಲಿ ಜಾತಿಗಣತಿ ನಡೆಯುತ್ತಿದೆ, ಆಯಾ ಜಾತಿಯನ್ನು ಸಮರ್ಪಕವಾಗಿ ನಮೂದಿಸಿ. ಆಗ ಮಾತ್ರ ಜನಸಂಖ್ಯೆ ಆಧಾರವಾಗಿ ಮೀಸಲಾತಿ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಬಡ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.

ಈ ಸಮಾರಂಭದಲ್ಲಿ ದಲಿತ ಸೇನೆ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್, ರಾಜ್ಯ ಮಹಿಳಾ ಅಧ್ಯಕ್ಷರಾದ ಮದುವಲೆಯರ್, ನಗರ ಜಿಲ್ಲಾ ಅಧ್ಯಕ್ಷರಾದ ಭಾಗ್ಯ ಅಶೋಕ್, ಐಬಿಸಿ ವಲ್ಡ್ ನ್ಯೂಸ್ ನಿರ್ದೇಶಕ ರಾದ ನಾಗರಾಜ್, ಸಮಾಜ ಸೇವಕರಾದ ಕೃಷ್ಣ ರೆಡ್ಡಿ, ಹಾರೋಹಳ್ಳಿ ಚಂದ್ರು, ರವಿ ಗಿರೇನಹಳ್ಳಿ, ದೇವರಾಜು, ಚಂದ್ರಹಾಸ್, ಯೋಗಾನಂದ್, ಮೋಹನ್, ಅಭಿಲಾಷ್, ಮಾದೇಶ, ರವಿ, ಭೈರಾಜು, ಸೇರಿದಂತೆ ಇತರರು ಹಾಜರಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »