ಇಸ್ಲಮಾಬಾದ್: ಭಾರತದ ಆಪರೇಷನ್ ಸಿಂದೂರ್ ದಾಳಿಗೆ ತತ್ತರಿಸಿ, ಬೆಳಲಿ ಬೆಂಡಾಗಿರುವ ಪಾಕಿಸ್ತಾನಕ್ಕೆ ಅತ್ತ ಬಲೂಚ್ ಪ್ರತ್ಯೇಕತಾವಾದಿಗಳು ಮರ್ಮಾಘಾತ ನೀಡಿದ್ದಾರೆ. ಪಾಕ್‌ನಿಂದ ಪ್ರತ್ಯೇಕಗೊಳ್ಳಲು ದಶಕಗಳಿಂದ ಹೋರಾಟ ನಡೆಸುತ್ತಿರುವ ಬಲೂಚಿಗರು, ಇದೀಗ ಪಾಕ್‌ನಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿದ್ದಾರೆ ಬಲೂಚ್ ಪ್ರತಿನಿಧಿ ಮೀರ್ ಯಾರ್ ಬಲೂಚ್ ಬುಧವಾರ ಪಾಕಿಸ್ತಾನದಿಂದ ಸ್ವಾತಂತ್ರ್ಯ ಘೋಷಿಸಿದ್ದು, ಇನ್ಮುಂದೆ ಬಲೂಚಿಸ್ತಾನ ಪಾಕ್‌ನ ಭಾಗ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಅವರು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಬಲೂಚಿಸ್ತಾನದ ಜನರು ತಮ್ಮ “ರಾಷ್ಟ್ರೀಯ ತೀರ್ಪು” ನೀಡಿದ್ದಾರೆ ಮತ್ತು ಜಗತ್ತು ಇನ್ನು ಮುಂದೆ ಮೌನವಾಗಿರಬಾರದು ಎಂದು ಅವರು ಹೇಳಿದರು.