ಬೆಳಗಾವಿ
ಮೂರು ದಿನಗಳ ಕಿತ್ತೂರು ವಿಜಯೋತ್ಸವ ಉದ್ಘಾಟನಾ ಸಮಾರಂಭ ಸಂಭ್ರಮ ಸಡಗರದಿಂದ ಬೆಳಗಾವಿ ಜಿಲ್ಲೆ ಕಿತ್ತೂರು ಕೋಟೆಯಲ್ಲಿ ನಡೆಯಿತು.
200 ನೇ ಕಿತ್ತೂರು ವಿಜಯೋತ್ಸವ ಸಂಭ್ರಮ ಹಿನ್ನೆಲೆ, ಕೇಂದ್ರ ಸರ್ಕಾರದಿಂದ ರಾಣಿ ಚೆನ್ನಮ್ಮಳ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು. ಅಂಚೆ ಚೀಟಿ ಬಿಡುಗಡೆಗೆ ಕೇಂದ್ರ ಸರ್ಕಾರ, ಪ್ರಧಾನಿ ಮೋದಿಯನ್ನ ಕೊಂಡಾಡಿದ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಬಿಜೆಪಿ ನಾಯಕರ ನಿಯೋಗದ ಫಲವಾಗಿ ಅಂಚೆ ಚೀಟಿ ಬಿಡುಗಡೆಯಾಗಿದೆ.
ಕೇವಲ 10 ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಅಂಚೆ ಚೀಟಿ ಬಿಡುಗಡೆ ಮಾಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದರು.
ಕಾಗೇರಿಗೆ ಮಾತಿನಲ್ಲೇ ತಿವಿದ ಬೇಲೂರು ನಿಶ್ಕಲಮಂಟದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, 200ನೇ ಕಿತ್ತೂರು ವಿಜಯೋತ್ಸವವನ್ನ ಬಹಳ ಚನ್ನಾಗಿ ಗಮನಿಸಬೇಕಾದವರು ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರೋರು.
ಮಾನ್ಯ ಲೋಕಸಭಾ ಸದಸ್ಯರಲ್ಲಿ ನಾನು ಗಮನಕ್ಕೆ ತರುತ್ತೇನೆ. ಅಂಚೆ ಚೀಟಿ ಬಿಡುಗಡೆ ಆಯ್ತು ಇಲ್ಲಿ, ರಾಷ್ಟ್ರದಲ್ಲಿ ಇದು ಎರಡನೇ ಸಲ ಅಂಚೆ ಚೀಟಿ ಬಿಡುಗಡೆ ಆಗ್ತಿದೆ.
ಮೊದಲ ಸಲ 1977 ರಲ್ಲಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಹಸ್ತದಿಂದ ಚೆನ್ನಮ್ಮ ಅಂಚೆ ಚೀಟಿ ಬಿಡುಗಡೆ ಆಗಿದೆ. ಎರಡನೇ ಸಲ 200ನೇ ಕಿತ್ತೂರು ಚೆನ್ನಮ್ಮ ವಿಜಯೋತ್ಸವ ಸಂದರ್ಭದಲ್ಲಿ ಆಗ್ತಿದೆ. ಕೇವಲ ಅಂಚೆ ಚೀಟಿ ಬಿಡುಗಡೆ ಕೊಡುಗೆ ಒಂದುಕಡೆಯಿದೆ. ಇಷ್ಟಕ್ಕೆ ನಾವು ಸಂತೋಷ ಪಟ್ಟುಕೊಳ್ಳವ ವ್ಯವಸ್ಥೆಯಲ್ಲಿ ನಾವು ಇರಬಾರದು.
ರಾಷ್ಟ್ರಕ್ಕೆ ಸ್ವಾತಂತ್ರ್ಯ ಕಿಚ್ಚು ಹೊತ್ತಿಸಿದ ಮೊದಲ ಮಹಿಳಾ ರಾಣಿ ಚೆನ್ನಮ್ಮ. ಚೆನ್ನಮ್ಮಳ ಇತಿಹಾಸವನ್ನ ರಾಷ್ಟ್ರದ ಆಯಾ ಭಾಷೆಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಆಗಬೇಕು ಎಂದರು.