Karunadu Studio

ಕರ್ನಾಟಕ

Mutual Fund SIP: 10,000 ರೂ. ಹೂಡಿಕೆಯಿಂದ ಕೋಟ್ಯಧಿಪತಿಯಾಗಿ! – Kannada News | If you have 10,000 rupees, you can become a billionaire!


ಕೇಶವ ಪ್ರಸಾದ ಬಿ.

ಬೆಂಗಳೂರು: ನ್ಯಾಯಬದ್ಧವಾದ ದಾರಿಯಲ್ಲಿ ಯಾರಿಗೂ ರಾತ್ರೋರಾತ್ರಿ ಒಂದು ಕೋಟಿ ರೂ.ಯನ್ನು ಗಳಿಸಲು ಖಂಡಿತವಾಗಿಯೂ ಸಾಧ್ಯವಾಗುವುದಿಲ್ಲ. ಆದರೆ ಪ್ರಾಮಾಣಿಕವಾಗಿ ದುಡಿಯುವ ಮಧ್ಯಮ ಆದಾಯದ ಜನರಿಗೆ, ಪ್ರತಿ ತಿಂಗಳೂ ಕನಿಷ್ಠ 10,000 ರೂ.ಯನ್ನು ನಿರಂತರವಾಗಿ ಮತ್ತು ಶಿಸ್ತುಬದ್ಧವಾಗಿ ಹೂಡಿಕೆ ಮಾಡಿ, ಒಂದು ಕೋಟಿ ರೂ.ಯನ್ನು ಗಳಿಸುವುದು ಹೇಗೆ ಮತ್ತು ಅದಕ್ಕೆ ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಇದೆಲ್ಲವೂ ಪಕ್ಕಾ ಪ್ರಾಕ್ಟಿಕಲ್‌ ಮಾಹಿತಿಗಳಾಗಿವೆ (Mutual Fund SIP). ನೀವು ವರ್ಷಕ್ಕೆ 12% ರಿಟರ್ನ್‌ ಕೊಡುವ ಮ್ಯೂಚುವಲ್‌ ಫಂಡ್‌ನಲ್ಲಿ ಪ್ರತಿ ತಿಂಗಳೂ 10,000 ರೂ. ಹೂಡಿಕೆ ಮಾಡುವ ಮೂಲಕ 20 ವರ್ಷದಲ್ಲಿ 1 ಕೋಟಿ ರೂ.ಗೆ ಒಡೆಯರಾಗಬಹುದು.

20 ವರ್ಷ ಕಾಯುವ ತಾಳ್ಮೆ ಇಲ್ಲ ಎಂದಿದ್ದರೆ, ಕೇವಲ 10 ವರ್ಷದಲ್ಲೂ 1 ಕೋಟಿ ರೂ. ಗಳಿಸಬಹುದು. ಅದು ಹೀಗೆ ನೋಡಿ:

ಹೀಗೆ 1 ಕೋಟಿ ರೂ.ಗೆ ಸಂಪತ್ತಿಗೆ ಒಡೆಯರಾಗಿ!

10 ವರ್ಷಕ್ಕೆ: ಪ್ರತಿ ತಿಂಗಳು 44,640 ರೂ.

15 ವರ್ಷಕ್ಕೆ: ಪ್ರತಿ ತಿಂಗಳು 21,020 ರೂ.

20 ವರ್ಷಕ್ಕೆ: ಪ್ರತಿ ತಿಂಗಳು 10,880 ರೂ.

25 ವರ್ಷಕ್ಕೆ: ಪ್ರತಿ ತಿಂಗಳು 5,880 ರೂ.

ಹೂಡಿಕೆ: ಮ್ಯೂಚುವಲ್‌ ಫಂಡ್‌ SIP, ವಾರ್ಷಿಕ ರಿಟರ್ನ್:‌ 12%

1 ಕೋಟಿ ರೂ. ಗಳಿಸಲು ಬೇರೆ ಬೇರೆ ಅವಧಿಯಲ್ಲಿ ಪ್ರತಿ ತಿಂಗಳು ಎಷ್ಟು ಹಣ ಹೂಡಿಕೆ ಮಾಡಬೇಕು ಎಂಬುದು ಈಗ ಸ್ಪಷ್ಟವಾಯಿತು. ಹಾಗಾದರೆ ನೀವು 1 ಕೋಟಿ ರೂ. ಗಳಿಕೆಗೆ ಎಷ್ಟು ಹಣ ಹೂಡಿಕೆ ಮಾಡಬೇಕಾಗುತ್ತದೆ? ಅದನ್ನು ಈಗ ನೋಡೋಣ.

10 ವರ್ಷಕ್ಕೆ ತಿಂಗಳಿಗೆ 44,640 ರೂ. ಒಟ್ಟು ಹೂಡಿಕೆ: 53,56,800 ರೂ. ಅಂದಾಜು ರಿಟರ್ನ್ಸ್‌ : 46,44,162 ರೂ. ಒಟ್ಟು ಮೌಲ್ಯ: 1,00,00,962 ರೂ.

15 ವರ್ಷಕ್ಕೆ ಹೂಡಿಕೆ: ತಿಂಗಳಿಗೆ 21,020 ರೂ., ಒಟ್ಟು ಹೂಡಿಕೆ: 37,83,600 ರೂ., ಅಂದಾಜು ರಿಟರ್ನ್ಸ್‌: 62,20,478 ರೂ., ಒಟ್ಟು ಮೌಲ್ಯ: 1,00,04,078 ರೂ.

20 ವರ್ಷಕ್ಕೆ ಹೂಡಿಕೆ: ತಿಂಗಳಿಗೆ 10,880 ರೂ., ಒಟ್ಟು ಹೂಡಿಕೆ: 26,11,200 ರೂ., ಅಂದಾಜು ರಿಟರ್ನ್ಸ್‌: 73,96,848 ರೂ., ಒಟ್ಟು ಮೌಲ್ಯ: 1,00,08,048 ರೂ.

25 ವರ್ಷಕ್ಕೆ ಹೂಡಿಕೆ: ತಿಂಗಳಿಗೆ 5,880 ರೂ., ಒಟ್ಟು ಹೂಡಿಕೆ: 17,64,000 ರೂ., ಅಂದಾಜು ರಿಟರ್ನ್ಸ್‌: 82,44,975 ರೂ., ಒಟ್ಟು ಮೌಲ್ಯ: 1,00,08,975 ರೂ.

ಇಲ್ಲಿ ನೀವು ಒಂದು ಅಂಶವನ್ನು ಗಮನಿಸಬಹುದು. ದೀರ್ಘಕಾಲ ಹೂಡಿಕೆ ಮಾಡಿದರೆ ನೀವು ಪ್ರತಿ ತಿಂಗಳೂ ಕಟ್ಟಬೇಕಾಗುವ ಮತ್ತು ಒಟ್ಟು ಮಾಡುವ ಹೂಡಿಕೆ ಎರಡೂ ಕಡಿಮೆಯಾಗುತ್ತದೆ. ಆದರೆ ನಿಮಗೆ ಸಿಗುವ ರಿಟರ್ನ್ಸ್‌ ಮತ್ತು ಸಿಗುವ ಒಟ್ಟು ಮೌಲ್ಯ ಅತಿ ಹೆಚ್ಚು ಆಗಿರುತ್ತದೆ. ಇದಕ್ಕೆ ಕಾರಣ ಏನೆಂದರೆ ದೀರ್ಘಾವಧಿಗೆ ಸಿಗುವ ಚಕ್ರ ಬಡ್ಡಿಯ ಪ್ರಯೋಜನ. ಇದನ್ನು ಕಂಪೌಂಡಿಂಗ್‌ ಎಫೆಕ್ಟ್‌ ಎನ್ನುತ್ತಾರೆ.

ನೀವು ಭಾರತದ ಖ್ಯಾತ ಹೂಡಿಕೆದಾರ ವಿಜಯ್‌ ಕೇಡಿಯಾ ಅವರ ಬಗ್ಗೆ ಕೇಳಿರಬಹುದು. ಇತ್ತೀಚೆಗೆ ಅವರು ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಹೇಗೆ ಸುಲಭವಾಗಿ 1 ಕೋಟಿ ರೂ. ಗಳಿಸಬಹುದು ಎಂದು ತಿಳಿಸಿದ್ದಾರೆ.

ವಿಜಯ್‌ ಕೇಡಿಯಾ ಅವರು ಆಗಾಗ್ಗೆ ಹಿಂದಿ ಸಿನಿಮಾ ಗೀತೆಗಳ ಧಾಟಿಯಲ್ಲಿ ಹಣಕಾಸು ಹೂಡಿಕೆಯ ಸರಳ ಸೂತ್ರಗಳನ್ನು ಹಾಡಿನ ರೂಪದಲ್ಲಿ ಪ್ರಸ್ತುತಪಡಿಸುತ್ತಾರೆ. ಅದೇ ರೀತಿ 1971ರಲ್ಲಿ ಬಿಡುಗಡೆಯಾದ ʼಅಂದಾಜ್‌ʼ ಸಿನಿಮಾದಲ್ಲಿನ ಕಿಶೋರ್‌ ಕುಮಾರ್‌ ಅವರ ʼಜಿಂದಗಿ ಏಕ್ ಸಫರ್‌ ಹೈ ಸುಹಾನಾʼ ಎಂಬ ಸಾಲಿನಿಂದ ಪ್ರೇರಣೆಗೊಂಡು ʼಜಿಂದಗಿ ಕೊ ಸಮೃದ್ಧಿ ಹೈ ಬನಾನಾʼ ಎಂಬ ಹಾಡು ರಚಿಸಿ ಹಾಡಿದ್ದಾರೆ. ‌

ವಿಜಯ್‌ ಕೇಡಿಯಾ ಅವರು ಜನರಿಗೆ ಕೋಟ್ಯಧಿಪತಿಯಾಗಲು ಸರಳ ಮತ್ತು ಶಿಸ್ತುಬದ್ಧ ಹೂಡಿಕೆ ಬಯಸುವ ಐಡಿಯಾವೊಂದನ್ನು ತಿಳಿಸಿದ್ದಾರೆ. ಜೀವನದಲ್ಲಿ ಸಿರಿ ಸಂಪತ್ತನ್ನು ಗಳಿಸಲು ಬಯಸುವವರು ಇದನ್ನು ಅನುಸರಿಸಿ ಕೋಟ್ಯಧಿಪತಿ ಆಗಬಹುದು.

ತಮ್ಮ ಹಾಡಿನಲ್ಲಿ ವಿಜಯ್‌ ಕೇಡಿಯಾ ಅವರು ಮ್ಯೂಚುವಲ್‌ ಫಂಡ್‌ಗಳಲ್ಲಿ ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ ಅಥವಾ ಸಿಪ್‌ ಹೂಡಿಕೆಯ ಮಹತ್ವವನ್ನು ಬಣ್ಣಿಸಿದ್ದಾರೆ.

ವಿಜಯ್‌ ಕೇಡಿಯಾ ʼʼನೀವು ಪ್ರತಿ ತಿಂಗಳೂ 10,000 ರೂ. ಮ್ಯೂಚುವಲ್‌ ಫಂಡ್‌ ಸಿಪ್‌ನಲ್ಲಿ 20 ವರ್ಷ ಹೂಡಿಕೆ ಮಾಡುತ್ತಾ ಬಂದರೆ ಹಾಗೂ ವಾರ್ಷಿಕ 12% ರಿಟರ್ನ್‌ ಗಳಿಸಿದರೆ, 20 ವರ್ಷಗಳ ಬಳಿಕ 1 ಕೋಟಿ ರೂ.ಗೆ ನೀವು ಒಡೆಯರಾಗಬಹುದುʼʼ ಎಂದು ಹೇಳುತ್ತಾರೆ.

ವಿಜಯ್‌ ಕೇಡಿಯಾ ಅವರು ರಚಿಸಿರುವ ಹಾಡು ಹೀಗಿದೆ:

ಬಚತ್‌ ಸೇ ಅಪ್ನಿ ಇನ್ವೆಸ್ಟ್‌ ಕರೋ,

ಸಿಪ್‌ ಕೊ ಶುರೂ ಕರ್‌, ರೆಸ್ಟ್‌ ಕರೊ.

ದಸ್ ಹಜಾರ್‌ ಮಹೀನೆ, ಬೀಸ್ ಸಾಲ್‌ ಲಗಾನಾ.

ಬಾರಹ್ ಪರ್ಸೆಂಟ್‌ ಸೇ ಕ್ರೋರ್‌, ಹೈ ಹೊ ಜಾನಾ.

ಜಿಂದಗೀ ಕೊ ಸಮೃದ್ಧಿ ಹೈ ಬನಾನಾ.

ಖರ್ಚ್‌ ಕರ್ನೆ ಸೆ ಪೆಹಲೇ ಬಚಾನಾ…

ಈ ಹಾಡಿನ ಮೂಲಕ ವಿಜಯ್‌ ಕೇಡಿಯಾ ಹಣದ ಮೌಲ್ಯ, ಉಳಿತಾಯ ಮತ್ತು ಹೂಡಿಕೆಯ ಅಗತ್ಯವನ್ನು ವಿವರಿಸಿದ್ದಾರೆ. ಹಾಸಿಗೆ ಇದ್ದಷ್ಟೇ ಕಾಲು ಚಾಚದಿದ್ದರೆ ಭವಿಷ್ಯದಲ್ಲಿ ಹಣಕಾಸು ಕಷ್ಟಗಳು ಎದುರಾಗುವುದು ನಿಶ್ಚಿತ ಎಂದು ಹೇಳಿದ್ದಾರೆ. ಈ ರೀತಿ ಕನ್ನಡದಲ್ಲೂ ಹಾಡುಗಳು ಬರಬೇಕಾಗಿದೆ.

ನಿಮಗೆ ಲಕ್ಷಗಟ್ಟಲೆ ಸಂಬಳ ಇರಬಹುದು. ಆದರೆ ನೀವು ಎಷ್ಟು ಹಣವನ್ನು ಉಳಿತಾಯ ಮಾಡುತ್ತೀರಿ, ಅದು ನಿಮ್ಮನ್ನು ಕೋಟ್ಯುಧಿಪತಿಯನ್ನಾಗಿಸುತ್ತದೆ. ಅಮೆರಿಕ-ಯುರೋಪ್‌ ಮೊದಲಾದ ಪಾಶ್ಚಿಮಾತ್ಯ ದೇಶಗಳಲ್ಲಿ ಉಳಿತಾಯದ ಬದಲು ಖರ್ಚು ಮಾಡಲು ಹೆಚ್ಚು ಪ್ರೋತ್ಸಾಹ ಸಿಗುತ್ತದೆ. ಅದು ಕನ್‌ ಸ್ಯೂಮರಿಸಂ ಸಂಸ್ಕೃತಿ. ಇವತ್ತು ಬೇಕಾದಂತೆ ಖರ್ಚು ಮಾಡಿ, ನಾಳೆ ನೋಡೋಣ ಎಂಬ ಮನಸ್ಥಿತಿ ಇದು. ಅದೊಂದು ಮಿಥ್ಯೆ. ಅಮೆರಿಕದಲ್ಲಿ ವಾಸ್ತವವಾಗಿ ಆಂತರಿಕವಾಗಿ ಬಡವರಾಗಿರುತ್ತಾರೆ. ಶೇ. 40ರಷ್ಟು ಅಮೆರಿಕನ್ನರಲ್ಲಿ ತುರ್ತು ಸಂದರ್ಭಗಳನ್ನು ಎದುರಿಸಲು 1000 ಡಾಲರ್‌ ಕೂಡ ಇರುವುದಿಲ್ಲ. ಅಲ್ಲಿ ಸಾಮಾಜಿಕ ಭದ್ರತೆ ಇದೆ. ಆದರೆ ಭಾರತದಲ್ಲಿ ಅಂಥ ಸಾಮಾಜಿಕ ಭದ್ರತೆ ಇಲ್ಲ. ಆದ್ದರಿಂದ ಇಲ್ಲಿ ಉಳಿತಾಯ ಮಾಡೋದು ಮುಖ್ಯ.

ಹಾಗಾದರೆ ಯಾವ ಮ್ಯೂಚುವಲ್‌ ಫಂಡ್‌ಗಳು ಇದಕ್ಕೆ ಉಪಯುಕ್ತ ಎಂಬ ಮಾಹಿತಿಯನ್ನೂ ತಿಳಿಯೋಣ.

ಅಸೋಸಿಯೇಶನ್‌ ಆಫ್‌ ಮ್ಯೂಚುವಲ್‌ ಫಂಡ್ಸ್‌ ಇನ್‌ ಇಂಡಿಯಾ (AMFI) ಮೂಲವನ್ನು ಅಧರಿಸಿ ಮಿಂಟ್‌ ಪ್ರಕಟಿಸಿರುವ, 2025ರ ಫೆಬ್ರವರಿ 7ಕ್ಕೆ ಅನ್ವಯವಾಗುವಂತೆ, ಕಳೆದ 10 ವರ್ಷಗಳಲ್ಲಿ ಸರಾಸರಿ 12% ವಾರ್ಷಿಕ ರಿಟರ್ನ್ಸ್‌ ನೀಡಿರುವ ಮ್ಯೂಚುವಲ್‌ ಫಂಡ್‌ಗಳ ಪಟ್ಟಿಯನ್ನು ನೋಡೋಣ. ಇದು ನಿಮಗೆ ನಿರ್ಧಾರ ಕೈಗೊಳ್ಳಲು ಉಪಯುಕ್ತ ಮಾಹಿತಿ ಆಗಬಹುದು.

ಇವುಗಳು ವಾಲ್ಯೂ ಮ್ಯೂಚುವಲ್‌ ಫಂಡ್‌ಗಳಾಗಿವೆ. ಈ ಮ್ಯೂಚುವಲ್‌ ಫಂಡ್‌ಗಳಲ್ಲಿ ನಿಮ್ಮ ಹೂಡಿಕೆಯ 65 ಪರ್ಸೆಂಟ್‌ ಹಣವನ್ನು ಸ್ಟಾಕ್ಸ್‌ಗಳಲ್ಲಿ ಇನ್ವೆಸ್ಟ್‌ ಮಾಡುತ್ತಾರೆ. ಸಾಮನ್ಯವಾಗಿ ಪ್ರಸ್ತುತ ಅಂಡರ್‌ ವಾಲ್ಯೂಡ್‌ ಆಗಿರುವ, ಆದರೆ ಭವಿಷ್ಯದಲ್ಲಿ ಉತ್ತಮ ಮೌಲ್ಯ ನೀಡಬಲ್ಲ ಷೇರುಗಳಲ್ಲಿ ಹೂಡಿಕೆ ಮಾಡುತ್ತಾರೆ. ಈಗ 10 ವರ್ಷದಲ್ಲಿ 12%ಗೂ ಹೆಚ್ಚು ರಿಟರ್ನ್ಸ್‌ ಕೊಟ್ಟಿರುವ ವಾಲ್ಯೂ ಮ್ಯೂಚುವಲ್‌ ಫಂಡ್‌ ಗಳ ಬಗ್ಗೆ ನೋಡೋಣ.

ಈ ಸುದ್ದಿಯನ್ನೂ ಓದಿ: Canara Bank: ಕೆನರಾ ಬ್ಯಾಂಕ್‌ ಷೇರಿನ ದರ ಏರುತ್ತಿರುವುದೇಕೆ?

Mutual Fund SIP 2

ವಾಲ್ಯೂ ಮ್ಯೂಚುವಲ್‌ ಫಂಡ್/ 10 ವರ್ಷಗಳ ರಿಟರ್ನ್ಸ್:‌

ಕೆನರಾ ರೊಬೆಕೊ ಬ್ಲೂಚಿಪ್‌ ಈಕ್ವಿಟಿ ಫಂಡ್:‌ 12.87%

Canara Robeco Bluechip Equity Fund

ಎಚ್‌ಡಿಎಫ್‌ಸಿ ಲಾರ್ಜ್‌ ಕ್ಯಾಪ್‌ ಫಂಡ್‌ : 12.00%

HDFC Large Cap Fund

ಐಸಿಐಸಿಐ ಪ್ರುಡೆನ್ಷಿಯಲ್‌ ಬ್ಲೂಚಿಪ್‌ ಫಂಡ್‌ : 13.21%

ICICI Prudential Bluechip Fund

ಮಿರಾಯ್‌ ಅಸೆಟ್‌ ಲಾರ್ಜ್‌ ಕ್ಯಾಪ್‌ ಫಂಡ್‌ : 12.58%

Mirae Asset Large Cap Fund

ನಿಪ್ಪೋನ್‌ ಇಂಡಿಯಾ ಲಾರ್ಜ್‌ ಕ್ಯಾಪ್‌ ಫಂಡ್:‌ 13.28%

Nippon India Large Cap Fund

ಎಸ್‌ಬಿಐ ಬ್ಲೂಚಿಪ್‌ ಫಂಡ್‌ : 13.23%

SBI Bluechip Fund

ಈ ಪಟ್ಟಿಯಲ್ಲಿ ನಿಪ್ಪೋನ್‌ ಇಂಡಿಯಾ ಲಾರ್ಜ್‌ ಕ್ಯಾಪ್‌ ಫಂಡ್‌ ಗರಿಷ್ಠ, ಅಂದರೆ 13.23% ರಿಟರ್ನ್ ನೀಡಿರುವುದನ್ನು ಗಮನಿಸಬಹುದು. ಎರಡನೇ ಸ್ಥಾನದಲ್ಲಿ ICICI Prudential Bluechip Fund 13.21% ರಿಟರ್ನ್ ಕೊಟ್ಟಿದೆ.‌ Canara Robeco Bluechip Equity Fund, SBI Bluechip Fund and HDFC Large Cap Fund 12% ಮತ್ತು ಹೆಚ್ಚಿನ ರಿಟರ್ನ್‌ ನೀಡಿದೆ.

ಜೀವನದಲ್ಲಿ ಮೊದಲ ಒಂದು ಕೋಟಿ ರೂ. ಗಳಿಸುವುದು ಕಷ್ಟ, ಬಳಿಕ ಎರಡನೆಯ ಕೋಟಿ ರೂ. ಗಳಿಸುವುದು ಕಷ್ಟವಲ್ಲ ಎಂಬ ಮಾತಿದೆ. ಅದು ನಿಜವೂ ಹೌದು. ಆದ್ದರಿಂದ ಕೋಟಿ ರೂ. ಸಂಪತ್ತು ಗಳಿಸಿ ಬದುಕನ್ನು ಹಸನುಗೊಳಿಸಲು ಉಳಿತಾಯ ಮಾಡಲು ಗಮನ ಕೊಡಬೇಕು. ಆಗ ಕೋಟಿ ರೂ. ಗಳಿಕೆ ಕಷ್ಟದ ಹಾದಿಯಾಗುವುದಿಲ್ಲ, ಇಷ್ಟದ ಹಾದಿಯಾಗುತ್ತದೆ.

ಹಾಗಾದರೆ ಪ್ರತಿ ತಿಂಗಳು 10,000 ರೂ. ಉಳಿತಾಯ ಮಾಡೋದು ಹೇಗೆ? ಇದು ಸಾಧ್ಯವೇ ಎಂದು ನೀವು ಕೇಳಬಹುದು. ಖಂಡಿತವಾಗಿಯೂ ಸಾಧ್ಯವಿದೆ. ಒಂದು ಕುಟುಂಬದಲ್ಲಿ ಒಬ್ಬರಿಗೇ ಸಾಧ್ಯವಿರದಿದ್ದರೆ, ಗಂಡ-ಹೆಂಡತಿ ತಲಾ 5,000 ರೂ. ಸೇರಿಸಬಹುದು. ಇಲ್ಲದಿದ್ದರೆ ಗಂಡ-ಹೆಂಡತಿ, ತಂದೆ-ತಾಯಿ ತಲಾ 2,500 ರೂ. ಸೇರಿಸಬಹುದು. ದುಡಿಯುವ ಇಬ್ಬರು ಮಕ್ಕಳಿದ್ದರೆ ಅವರೂ ಸಿಪ್‌ ಕಟ್ಟಬಹುದು. ಅನವಶ್ಯಕ ಖರ್ಚುಗಳನ್ನು ನಿಯಂತ್ರಿಸಿ ಉಳಿತಾಯ ಮಾಡಬಹುದು. ಹೊಸ ಆದಾಯದ ಮೂಲ ಕಂಡುಕೊಂಡು ಗಳಿಸಬಹುದು. ಈ ರೀತಿ ಯತ್ನಿಸಬಹುದು. ನಿಮ್ಮ ಆದಾಯ, ವೆಚ್ಚವನ್ನು ಬಜೆಟ್‌ ಮಾಡಿ. ಆದಾಯವನ್ನು ಹೆಚ್ಚಿಸುವ ಮೂಲಕ ಮಾಸಿಕ 10,000 ರೂ. ಸಿಪ್‌ ಹೂಡಿಕೆ ಮಾಡಬಹುದು. ಆದರೆ ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು ಮತ್ತು ಕಾರ್ಯ ಪ್ರವೃತ್ತರಾಗುವುದು ಮುಖ್ಯ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »