Karunadu Studio

ಕರ್ನಾಟಕ

Pak delegations: ಭಾರತದ ಬೆನ್ನಲ್ಲೇ ವಿವಿಧ ದೇಶಗಳಿಗೆ ಸಂಸದರ ನಿಯೋಗ ಕಳಿಸಲು ಮುಂದಾದ ಪಾಕ್‌ – Kannada News | After India, Pakistan too may send MPs to other nations


ಇಸ್ಲಮಾಬಾದ್‌: ಗಡಿಯಾಚೆಗಿನ ಪಾಕ್‌ ಪ್ರೇರಿತ ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಎತ್ತಿ ತೋರಿಸಲು ವಿಶ್ವದಾದ್ಯಂತ ಏಳು ಸರ್ವಪಕ್ಷ ನಿಯೋಗಗಳನ್ನು ಕಳುಹಿಸಲು ಭಾರತ ಮುಂದಾಗಿದೆ. ಈ ಘೋಷಣೆ ಬೆನ್ನಲ್ಲೇ ಕುತಂತ್ರಿ ಪಾಕ್‌ ಕೂಡ ತನ್ನ ನಿಯೋಗವನ್ನು(Pak delegations) ವಿದೇಶಗಳಿಗೆ ಕಳಿಸಲು ಮುಂದಾಗಿದೆ. ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ನೇತೃತ್ವದ ತಂಡವನ್ನು ಪ್ರಮುಖ ದೇಶಗಳ ರಾಜಧಾನಿಗಳಿಗೆ ಕಳುಹಿಸುವ ಯೋಜನೆಯನ್ನು ಪಾಕಿಸ್ತಾನ ಬಹಿರಂಗಪಡಿಸಿದೆ.

ಸಂಸದರು, ರಾಜಕೀಯ ನಾಯಕರು ಮತ್ತು ಮಾಜಿ ರಾಜತಾಂತ್ರಿಕರನ್ನು ಒಳಗೊಂಡ ಏಳು ಭಾರತೀಯ ನಿಯೋಗಗಳನ್ನು ರಚಿಸಿರುವ ಭಾರತ ವಿದೇಶಗಳಿಗೆ ಕಳಿಸಲು ಮುಂದಾಗಿದೆ. ಕಾಂಗ್ರೆಸ್ ನಾಯಕ ಶಶಿ ತರೂರ್, ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ಮತ್ತು AIMIM ನಾಯಕ ಅಸಾದುದ್ದೀನ್ ಓವೈಸಿ ಸೇರಿದಂತೆ, ಉತ್ತರ ಅಮೆರಿಕಾ, ಯುರೋಪ್ ಮತ್ತು ಪಶ್ಚಿಮ ಏಷ್ಯಾದ ಪ್ರಮುಖ ರಾಜಧಾನಿಗಳಿಗೆ ಪ್ರಯಾಣಿಸಲು ಸಜ್ಜಾಗಿದ್ದಾರೆ.

ಇದರ ಬೆನ್ನಲ್ಲೇ ಪಾಕಿಸ್ತಾನದ ಇದೇ ರೀತಿಯ ಅಭಿಯಾನವನ್ನು ನಡೆಸುವ ಯೋಜನೆ ರೂಪಿಸಿದೆ. ಈ ಬಗ್ಗೆ ಮೊದಲ ಸೂಚನೆ ಶನಿವಾರ ಸಂಜೆ ಭುಟ್ಟೋ-ಜರ್ದಾರಿ ಅವರಿಂದ ಬಂದಿತ್ತು. ಅವರು ನಿಯೋಗವನ್ನು ಮುನ್ನಡೆಸಲು ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇಂದು ಮುಂಜಾನೆ ಪ್ರಧಾನಿ @CMShehbaz ಅವರು ನನ್ನನ್ನು ಸಂಪರ್ಕಿಸಿದ್ದರು, ಅವರು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಶಾಂತಿಗಾಗಿ ಪಾಕಿಸ್ತಾನದ ವಾದವನ್ನು ಮಂಡಿಸಲು ನಿಯೋಗದ ನೇತೃತ್ವ ವಹಿಸಬೇಕೆಂದು ವಿನಂತಿಸಿದ್ದರು. ಈ ಜವಾಬ್ದಾರಿಯನ್ನು ಸ್ವೀಕರಿಸಲು ಮತ್ತು ಈ ಸವಾಲಿನ ಸಮಯದಲ್ಲಿ ಪಾಕಿಸ್ತಾನಕ್ಕೆ ಸೇವೆ ಸಲ್ಲಿಸಲು ಬದ್ಧರಾಗಿರಲು ನನಗೆ ಗೌರವವಿದೆ” ಎಂದು ಭುಟ್ಟೋ-ಜರ್ದಾರಿ ಪೋಸ್ಟ್‌ನಲ್ಲಿ ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ: India And Pakistan Conflict: ಹಿಂದಿನ ಭಾರತ-ಪಾಕ್ 4 ಯುದ್ಧಗಳು ಎಷ್ಟು ದಿನಗಳ ಕಾಲ ನಡೆದಿದ್ದವು? ಇಲ್ಲಿದೆ ನಿಮಗೆ ಗೊತ್ತಿಲ್ಲದ ಮಾಹಿತಿ

ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಪಾಕಿಸ್ತಾನದ ಮಾಧ್ಯಮಗಳಲ್ಲಿನ ವರದಿಗಳ ಪ್ರಕಾರ, ನಿಯೋಗದಲ್ಲಿ ಮಾಜಿ ಉಪ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್, ಮಾಜಿ ರಕ್ಷಣಾ ಸಚಿವ ಖುರ್ರಂ ದಸ್ತಗೀರ್ ಖಾನ್ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ಜಲೀಲ್ ಅಬ್ಬಾಸ್ ಜಿಲಾನಿ ಸೇರುವ ನಿರೀಕ್ಷೆಯಿದೆ. ಪಾಕಿಸ್ತಾನ ಸರ್ಕಾರವು ಅಮೆರಿಕಕ್ಕೆ ಮಾಜಿ ರಾಯಭಾರಿ ತಾರಿಕ್ ಫತೇಮಿಯನ್ನು ರಷ್ಯಾಕ್ಕೆ ಕಳುಹಿಸಲು ಯೋಜಿಸಿದೆ ಎಂಬ ವರದಿಗಳೂ ಇದ್ದವು. ಭುಟ್ಟೋ-ಜರ್ದಾರಿ ನೇತೃತ್ವದ ನಿಯೋಗವು ಭಾರತದೊಂದಿಗೆ ಪಾಕಿಸ್ತಾನದ ಇತ್ತೀಚಿನ ಘರ್ಷಣೆಗಳ ಕುರಿತು ಪ್ರಮುಖ ದೇಶಗಳಿಗೆ ವಿವರಿಸಲು ಯುರೋಪ್‌ಗೆ ಭೇಟಿ ನೀಡಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ವಿದೇಶಾಂಗ ಸಚಿವರೂ ಆಗಿರುವ ಉಪಪ್ರಧಾನಿ ಇಶಾಕ್ ದಾರ್, ಪ್ರಮುಖ ದೇಶಗಳಿಗೆ ನಿಯೋಗವನ್ನು ಕಳುಹಿಸುವ ಯೋಜನೆಯನ್ನು ದೃಢಪಡಿಸಿದರು. ಅಮೆರಿಕ, ಯುಕೆ, ಬೆಲ್ಜಿಯಂ, ಫ್ರಾನ್ಸ್ ಮತ್ತು ರಷ್ಯಾಗಳಿಗೂ ಈ ನಿಯೋಗ ತೆರಳಲಿದೆ ಎನ್ನಲಾಗಿದೆ. ಆದರೆ ಪಾಕ್‌ ಸರ್ಕಾರದಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »