Karunadu Studio

ಕರ್ನಾಟಕ

Gold Rate today: ಚಿನ್ನದ ದರದಲ್ಲಿ ಇಂದು ಕೂಡ ಯಥಾಸ್ಥಿತಿ; ಇಂದಿನ ರೇಟ್‌ ಎಷ್ಟಿದೆ? – Kannada News | Gold Price Today on 18th May 2025; Check Gold silver Price in Bengaluru, Chennai, Kolkata, Mumbai and Delhi in Kannada


ಬೆಂಗಳೂರು: ಚಿನ್ನ ದರದಲ್ಲಿ(Gold Rate today) ಇಂದು ಮತ್ತೆ ಯಥಾಸ್ಥಿತಿ ಕಂಡು ಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 8,720 ರೂ.ಗೆ ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 9,513 ರೂ.ಗೆ ಬಂದು ಮುಟ್ಟಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 69,760 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 87,200 ರೂ. ಮತ್ತು 100 ಗ್ರಾಂಗೆ 8,72,000 ರೂ. ನೀಡಬೇಕಾಗುತ್ತದೆ. ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನ 76,104 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 95,130 ರೂ. ಮತ್ತು 100 ಗ್ರಾಂಗೆ 9,51,300 ರೂ. ಪಾವತಿಸಬೇಕಾಗುತ್ತದೆ.

ವಿವಿಧ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ?

ಬೆಳ್ಳಿ ದರ

ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಬೆಳ್ಳಿ 1 ಗ್ರಾಂನ ಬೆಲೆ 97 ರೂ., 8 ಗ್ರಾಂಗೆ 776 ರೂ., 10 ಗ್ರಾಂ.ಗೆ 970 ರೂ. ಮತ್ತು 1 ಕೆಜಿಗೆ 97,000 ರೂ. ಇದೆ.

ಈ ಸುದ್ದಿಯನ್ನೂ ಓದಿ: LIC ‘One Man Office’: ಎಲ್‌ಐಸಿ ಸಂಸ್ಥೆಗೆ ‘ ಡಿಜಿಟಲ್‌ ಟಚ್‌’- ಮೊಬೈಲ್‌ನಲ್ಲಿ ಪಡೆಯಬಹುದು ವಿಮೆ!

ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುವ ಅಂಶಗಳು

ಶತಮಾನಗಳಿಂದ ಚಿನ್ನವು ಭಾರತೀಯ ಸಂಸ್ಕೃತಿ ಮತ್ತು ಅರ್ಥಶಾಸ್ತ್ರದ ಪ್ರಮುಖ ಭಾಗವಾಗಿ ಗುರುತಿಸಿಕೊಂಡಿದೆ. ದೇಶದಲ್ಲಿ ಆಭರಣವಾಗಿ ಮಾತ್ರವಲ್ಲ ಹೂಡಿಕೆಗೂ ಚಿನ್ನ ಬಳಕೆಯಾಗುತ್ತಿದೆ. ಭಾರತದಲ್ಲಿ ಪ್ರತಿ ದಿನ ಚಿನ್ನದ ದರದಲ್ಲಿ ಏರಿಳಿತ ಕಂಡು ಬರುತ್ತದೆ. ಅದಕ್ಕೆ ಕಾರಣವೇನು? ಚಿನ್ನದ ದರದ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು? ಎನ್ನುವ ವಿವರ ಇಲ್ಲಿದೆ.

ಜಾಗತಿಕ ಮಾರುಕಟ್ಟೆಯ ಪ್ರಭಾವ: ಜಾಗತಿಕ ಚಿನ್ನದ ಮಾರುಕಟ್ಟೆಯ ಏರಿಳಿತ ಭಾರತದಲ್ಲಿ ಚಿನ್ನದ ದರವನ್ನು ನಿರ್ಧರಿಸುವಲ್ಲಿ ಪ್ರದಾನ ಪಾತ್ರವಹಿಸುತ್ತದೆ. ಭೌಗೋಳಿಕ ರಾಜಕೀಯ ಘಟನೆಗಳು, ಆರ್ಥಿಕ ಪರಿಸ್ಥಿತಿಗಳು ಮತ್ತು ಕರೆನ್ಸಿ ಏರಿಳಿತಗಳಂತಹ ಅಂಶಗಳು ಚಿನ್ನದ ದರದ ಮೇಲೆ ನೇರ ಪರಿಣಾಮ ಬೀರುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳು ಅನಿಶ್ಚಿತತೆಗೆ ಒಳಗಾದಾಗ ಹೂಡಿಕೆದಾರರು ಹೆಚ್ಚಾಗಿ ಚಿನ್ನದತ್ತ ಮುಖ ಮಾಡುತ್ತಾರೆ. ಇದು ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಬೇಡಿಕೆ ಮತ್ತು ಪೂರೈಕೆ: ಭಾರತದಲ್ಲಿ ಚಿನ್ನವು ಅಮೂಲ್ಯ ಲೋಹ ಮಾತ್ರವಲ್ಲ ಸಂಸ್ಕೃತಿಯ ಸಂಕೇತವೂ ಹೌದು. ಹೀಗಾಗಿ ಹಬ್ಬಗಳು ಮತ್ತು ಮದುವೆ ಋತುವಿನಲ್ಲಿ ಚಿನ್ನಾಭರಣಗಳಿಗೆ ಬೇಡಿಕೆ ಹೆಚ್ಚಾಗಿ ದರದ ಏರಿಳಿತಗಳಿಗೆ ಕಾರಣವಾಗುತ್ತದೆ. ಜತೆಗೆ ಪೂರೈಕೆಯಲ್ಲಿನ ಅಡೆತಡೆಗಳು ಮತ್ತು ಆಮದು ಸುಂಕದಲ್ಲಿನ ಬದಲಾವಣೆಗಳು ಸ್ಥಳೀಯ ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ.

ಸರ್ಕಾರದ ನೀತಿ: ಸರ್ಕಾರದ ನೀತಿಗಳು ಭಾರತದ ಚಿನ್ನದ ದರದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಆಮದು ಸುಂಕಗಳು, ತೆರಿಗೆಗಳು ಮತ್ತು ಚಿನ್ನದ ಆಮದಿನ ಮೇಲಿನ ನಿರ್ಬಂಧಗಳಲ್ಲಿನ ಬದಲಾವಣೆಗಳು ಏರಿಳಿತಗಳಿಗೆ ಕಾರಣವಾಗುತ್ತದೆ. ಹಣದುಬ್ಬರಕ್ಕೆ ಸಂಬಂಧಿಸಿದ ಸರ್ಕಾರದ ನೀತಿಗಳು ಚಿನ್ನದ ದರದ ಮೇಲೆ ಪ್ರಭಾವ ಬೀರುತ್ತದೆ.

ವಿನಿಮಯ ದರಗಳು: ಜಾಗತಿಕವಾಗಿ ಚಿನ್ನದ ಬೆಲೆ ಯುಎಸ್ ಡಾಲರ್‌ಗಳಲ್ಲಿರುವುದರಿಂದ ಭಾರತೀಯ ರೂಪಾಯಿ-ಯುಎಸ್ ಡಾಲರ್ ವಿನಿಮಯ ದರದಲ್ಲಿನ ಏರಿಳಿತಗಳು ಭಾರತದಲ್ಲಿ ಚಿನ್ನದ ದರದ ಮೇಲೆ ಪರಿಣಾಮ ಬೀರುವ ಮತ್ತೊಂದು ಪ್ರಮುಖ ಅಂಶ. ಡಾಲರ್ ವಿರುದ್ಧ ರೂಪಾಯಿ ಮೌಲ್ಯದ ಕುಸಿತ ಭಾರತದಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ.

ಹೂಡಿಕೆದಾರರ ಮನಸ್ಥಿತಿ: ಚಿನ್ನದ ಮೇಲಿನ ಹೂಡಿಕೆಯೂ ಬೆಲೆಯನ್ನು ಪ್ರಭಾವಿಸುವ ಇನ್ನೊಂದು ಅಂಶ. ವ್ಯಾಪಾರ ಪ್ರಮಾಣಗಳು ಮತ್ತು ಇತರ ಹಣಕಾಸು ಮಾರುಕಟ್ಟೆಗಳಲ್ಲಿನ ಪ್ರವೃತ್ತಿಗಳು ಚಿನ್ನದ ಬೆಲೆಗಳ ಮೇಲೆ ಪ್ರಭಾವ ಬೀರುತ್ತವೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »