Karunadu Studio

ಕರ್ನಾಟಕ

Storm In America : ಭೀಕರ ಬಿರುಗಾಳಿಗೆ 27 ಮಂದಿ ಬಲಿ; ಜನಜೀವನ ಅಸ್ತವ್ಯಸ್ತ – Kannada News | Deadly storms hit US Midwest and South: 27 dead, Kentucky devastated with 18 fatalities


ವಾಷಿಂಗ್ಟನ್‌: ಅಮೆರಿಕದ ಮಧ್ಯಪಶ್ಚಿಮ (Storm In America) ಮತ್ತು ದಕ್ಷಿಣ ಭಾಗಗಳಲ್ಲಿ ಹವಾಮಾನ ವೈಪರೀತ್ಯ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬಿರುಗಾಳಿಗಳಿಂದ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕೆಂಟುಕಿ ಗವರ್ನರ್ ಆಂಡಿ ಬೆಶಿಯರ್ ಶನಿವಾರ ಸಾವುಗಳು ತಮ್ಮ ರಾಜ್ಯದಲ್ಲಿ ಸಂಭವಿಸಿವೆ ಮತ್ತು 10 ಜನರರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಸಾವನ್ನಪ್ಪಿದವರಲ್ಲಿ ಹದಿನೇಳು ಜನರು ಲಾರೆಲ್ ಕೌಂಟಿಯವರು, ಒಬ್ಬರು ಪುಲಾಸ್ಕಿ ಕೌಂಟಿಯವರು. ಮೃತರಲ್ಲಿ ಲಾರೆಲ್ ಕೌಂಟಿ ಅಗ್ನಿಶಾಮಕ ಇಲಾಖೆಯ 39 ವರ್ಷದ ಅನುಭವಿ ಅಗ್ನಿಶಾಮಕ ಸಿಬ್ಬಂದಿಯೂ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಕೆಂಟುಕಿಯಲ್ಲಿ ಸಂಭವಿಸಿದ ವಿನಾಶಕಾರಿ ಸುಂಟರಗಾಳಿಯು ಮನೆಗಳನ್ನು ಹಾನಿಗೊಳಿಸಿತು, ವಾಹನಗಳನ್ನು ಉರುಳಿಸಿತು ಮತ್ತು ಅನೇಕ ಜನರನ್ನು ನಿರಾಶ್ರಿತರನ್ನಾಗಿ ಮಾಡಿತು. ಚಂಡಮಾರುತದಿಂದ ಬದುಕುಳಿದವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ತಾನು ಹಾಗೂ ತನ್ನ ಪತ್ನಿ, ಐವರು ಮಕ್ಕಳು ಟಬ್‌ನಲ್ಲಿ ಸಿಲುಕಿಕೊಂಡಿದ್ದೆವು ಎಂದು ಅವರು ಹೇಳಿದ್ದಾರೆ. ಎಲ್ಲೆಡೆ ಗಾಳಿ ಜೋರಾಗಿ ಬೀಸುತ್ತಿತ್ತು. ಮನೆಯ ಗಾಜುಗಳು ಸಂಪೂರ್ಣವಾಗಿ ಒಡೆದು ಹೋಗಿದೆ ಎಂದು ಅವರು ಹೇಳಿದ್ದಾರೆ.

ಮಿಸೌರಿಯಲ್ಲಿ , ಚಂಡಮಾರುತವು ಏಳು ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸುಂಟರಗಾಳಿಯು ವಿಸ್ಕಾನ್ಸಿನ್‌ನಲ್ಲಿ ಅಪಾರ ಪ್ರಮಾಣದ ಹಾನಿಯನ್ನು ಮಾಡಿದೆ. ಮಿಸೌರಿಯ ಕ್ಲೇಟನ್‌ನಲ್ಲಿ, 1904 ರ ವಿಶ್ವ ಮೇಳ ಮತ್ತು ಒಲಿಂಪಿಕ್ ಕ್ರೀಡಾಕೂಟದ ಸ್ಥಳವಾದ ಸೇಂಟ್ ಲೂಯಿಸ್ ಮೃಗಾಲಯವಿರುವ ಫಾರೆಸ್ಟ್ ಪಾರ್ಕ್ ಪ್ರದೇಶದಲ್ಲಿ ಸುಂಟರಗಾಳಿ ಅಪ್ಪಳಿಸಿದೆ.

ಈ ಸುದ್ದಿಯನ್ನೂ ಓದಿ: Shehbaz Sharif: ವಾಯುನೆಲೆಗಳನ್ನು ಭಾರತ ಧ್ವಂಸ ಮಾಡಿದ್ದು ನಿಜ; ಬಹಿರಂಗವಾಗಿಯೇ ಒಪ್ಪಿಕೊಂಡ ಪಾಕ್‌ ಪ್ರಧಾನಿ

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಶನಿವಾರ ಮಧ್ಯಾಹ್ನ ಟೆಕ್ಸಾಸ್ ಮತ್ತು ಒಕ್ಲಹೋಮಾದ ಕೆಲವು ಭಾಗಗಳಲ್ಲಿ ಹೆಚ್ಚಿನ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ರಾಜ್ಯ ರಸ್ತೆಗಳ ಭಾಗಗಳನ್ನು ಮುಚ್ಚಲಾಗಿದೆ ಮತ್ತು ಕೆಲವು ಮತ್ತೆ ತೆರೆಯಲು ದಿನಗಳು ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »