Karunadu Studio

ಕರ್ನಾಟಕ

MLA Pradeep Eshwar : ನೂತನ ಹವಾ ನಿಯಂತ್ರಿತ 5 ಉಚಿತ ಆಂಬ್ಯುಲೆನ್ಸ್ ಗಳ ಕೊಡುಗೆ ನೀಡಿದ ಶಾಸಕ ಪ್ರದೀಪ್ ಈಶ್ವರ್ – Kannada News | MLA donates 5 new air-conditioned ambulances for free


ಚಿಕ್ಕಬಳ್ಳಾಪುರ: ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಿರುವ ಶಾಸಕ ಪ್ರದೀಪ್ ಈಶ್ವರ್ ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ತಮ್ಮ ತಾಯಿ ನೆನಪಿನಲ್ಲಿ ಉಚಿತವಾಗಿ 10 ಅಮ್ಮ ಆಂಬುಲೆನ್ಸ್ ಸೇವೆಯನ್ನು ಒದಗಿಸಿರುವುದು ಗೊತ್ತಿರುವ ಸಂಗತಿ. ಇದಕ್ಕೆ ಹೊಸ  ಸೇರ್ಪಡೆಯಾಗಿ ಪೂರ್ಣ ಹವಾನಿಯಂತ್ರಿತ ವೆಂಟಿಲೇಟರ್ ಸೌಕರ್ಯವುಳ್ಳ 5 ನೂತನ ಆಂಬುಲೆನ್ಸ್ ಗಳನ್ನು  ಒದಗಿಸಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಹೌದು. ಶಾಸಕ ಪ್ರದೀಪ್ ಈಶ್ವರ್ ಪದೇಪದೇ ಹೇಳುವಂತೆ ನಾನು ಪೂಜಿಸುವ ಎರಡು ಮಂದಿರಗಳೆಂದರೆ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳು ಎನ್ನುತ್ತಾರೆ .

ಈ ಬಗ್ಗೆ ಮಾತನಾಡಿರುವ ಶಾಸಕ ಪ್ರದೀಪ್ ಈಶ್ವರ್ ವಿಧಾನಸಭಾ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಿದ ತಕ್ಷಣ ಸಂಕಲ್ಪ ಮಾಡಿದಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ  ಸರ್ಕಾರಿ ಶಾಲೆಗಳ  ಶೈಕ್ಷಣಿಕ ಪರಿಸರದ ಸುಧಾರಣೆ, ನಾಗರೀಕರ ಆರೋಗ್ಯ ಮತ್ತು ಮೂಲಭೂತ ಸೌಕರ್ಯ ಸುಧಾರಣೆಗೆ ಒತ್ತು ನೀಡಲಾಗಿದೆ. ನಾನು ನನ್ನ ಸ್ವಂತ ಪರಿಶ್ರಮದಿಂದ ಗಳಿಸಿದ ಹಣದಲ್ಲಿ ಕ್ಷೇತ್ರಕ್ಕೆ 5 ಉಚಿತ ಅಂಬುಲೆನ್ಸ್ ಗಳ ಸೇವೆಯನ್ನು 2023 ಸೆಪ್ಟಂಬರ್ 12 ರಂದು ನಂದಿಯ ಭೋಗ ನಂದೀಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ  ಲೋಕಾರ್ಪಣೆ ಮಾಡಿದೆ. 

ಇದನ್ನೂ ಓದಿ: MLA Pradeep Eshwar: ಬಿಗಿ ಪೊಲೀಸ್ ಪಹರೆಯಲ್ಲಿ ಜನತೆಯ ಅಹವಾಲು ಆಲಿಸಿದ ಶಾಸಕ ಪ್ರದೀಪ್ ಈಶ್ವರ್

 ತದ ನಂತರದಲ್ಲಿ ಜನತೆಯ ಅವಶ್ಯಕತೆ  ಅವಲಂಭಿಸಿ ಮತ್ತೆ ಐದು ಆಂಬ್ಯುಲೆನ್ಸ್ ಸೇವೆ ಒದಗಿಸಲಾಗಿದೆ. ಇದನ್ನು ಹಣ ಹೆಚ್ಚಾಗಿದೆ ಎಂದು ಮಾಡುತ್ತಿಲ್ಲ.ಕಷ್ಟದಲ್ಲಿರುವವರ ಕಣ್ಣೀರು ಒರೆಸಲು ತಾಯಂದಿರಿಗೆ ಮನೆ ಮಗನಾಗಿ, ಅಣ್ಣ ತಮ್ಮ ,ಅಕ್ಕ  ತಂಗಿಯರಿಗೆ ಸಹೋದರನಾಗಿ ಮಾಡುತ್ತಿದ್ದೇನೆ.

 ನನ್ನ ಅವಧಿಯ 5 ವರ್ಷಗಳ ಕಾಲ ನಿರಂತರವಾಗಿ ಕ್ಷೇತ್ರದ ಬಡವರ ಸೇವೆಗೆ ಮೊದಲು ಆದ್ಯತೆ ನೀಡಲು ಕಟಿಬದ್ಧನಾಗಿದ್ದೇನೆ.ಅದರಲ್ಲಿ ಒಂದು ಭಾಗ ಈ ಆಂಬಯಲೆನ್ಸ್  ಸೇವೆಯಾಗಿದೆ ಎಂದರು 

 ಸಕಾಲದಲ್ಲಿ ವೈದ್ಯಕೀಯ ಸೇವೆ ದೊರೆಯದೆ ನನ್ನ ಕಣ್ಣ ಮುಂದೆ ನನ್ನ ತಂದೆ ಈಶ್ವರಯ್ಯ ಮತ್ತು ತಾಯಿ ಮಂಜುಳಾ  ಒಟ್ಟಿಗೆ ಮರಣ ಹೊಂದಿದ್ದು ನನ್ನನ್ನು ತೀವ್ರವಾಗಿ ಬಾಧಿಸುತ್ತಿದೆ.  ನನ್ನಂತೆ ಯಾರೂ ಕೂಡ ಅನಾಥರಾಗಬಾರದು. ಅನಾಥ ಮಕ್ಕಳಿಗೆ ಮಾತ್ರ ಅನಾಥರ ಕಷ್ಟ ಅರ್ಥವಾಗಲು ಸಾಧ್ಯ . ಬಡವರು ಹೆಚ್ಚಿರುವ ಪ್ರದೇಶದಲ್ಲಿಯೇ ಅವರಿಗೆ ಅನುಕೂಲ ವಾಗಲಿ ಎಂದು ಆಂಬ್ಯುಲೆನ್ಸ್‌ ಸೇವೆ ಒದಗಿಸುತ್ತಿದ್ದೇನೆ ಎಂದರು.

ಇದುವರೆಗೂ ಕ್ಷೇತ್ರದಲ್ಲಿ ಅಪಘಾತ ಮತ್ತು ತುರ್ತು ಪರಿಸ್ಥಿತಿಯಲ್ಲಿದ್ದ ಐದು ಸಾವಿರಕ್ಕೂ ಹೆಚ್ಚು ರೋಗಿಗಳನ್ನು  ಸಕಾಲದಲ್ಲಿ ಆಸ್ಪತ್ರೆಗಳಿಗೆ ಸಾಗಿಸಿ ಜೀವ ಉಳಿಸಿದ ಸಾರ್ಥಕತೆ ಅಮ್ಮ ಆಂಬುಲೆನ್ಸ್ ಸೇವೆಗಿದೆ.

ಸಾರ್ವಜನಿಕ ಸೇವೆಯಲ್ಲಿದ್ದ ಎಲ್ಲಾ 10 ಆಂಬುಲೆನ್ಸ್ ಗಳನ್ನು ಹೈಟೆಕ್ ಆಗಿಸಿದ್ದು, ಈ ಪೈಕಿ ಐದು ಹಳೆಯದಾಗಿದ್ದರಿಂದ ಆ ಐದನ್ನು ಬದಲಾಯಿಸಿ ಹೊಸ ಆಂಬ್ಯುಲೆನ್ಸ್ ಗಳನ್ನು   ಒದಗಿಸಲಾಗಿದೆ.

48 ಲಕ್ಷ ವೆಚ್ಚದ ಒಂದು ಆಂಬ್ಯುಲೆನ್ಸ್ ಅತ್ಯಾಧುನಿಕ ಜೀವ ಉಳಿಸುವ ಸೌಲಭ್ಯ ಹೊಂದಿದೆ. ಉಳಿದ ಒಂಭತ್ತು ಆಂಬ್ಯುಲೆನ್ಸ್ ಗಳು ಹವಾ ನಿಯಂತ್ರಿತ ಹಾಗು ಡಬಲ್ ವೆಂಟಿಲೇಟರ್ ವ್ಯವಸ್ಥೆ ಮಾಡಿದೆ ಎಂದರು.

ನೂತನ ಆಂಬುಲೆನ್ಸ್ ವಾಹನಗಳ ಸೇವೆಯನ್ನು ಕ್ಷೇತ್ರದ ಜನರಿಗೆ ಒದಗಿಸಿದ್ದೇನೆ. ನೂತನವಾಗಿ ಕ್ಷೇತ್ರಕ್ಕೆ ನೀಡಿರುವ ವಾಹನಗಳಲ್ಲಿ ಅಪಘಾತಗೊಂಡ ಸ್ಥಳದಿಂದ ಹತ್ತಿರದ ಆಸ್ಪತ್ರೆಗೆ ಸಾಗಿಸುವರೆಗೂ ತುರ್ತು ಚಿಕಿತ್ಸೆಗೆ ಎನೆಲ್ಲಾ ಸೌಲಭ್ಯ ಬೇಕೋ ಆ ಎಲ್ಲಾ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದು, ನಾವು ಬೆಂಗಳೂರು ಸಿಟಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ನನ್ನ ಕ್ಷೇತ್ರದ ಜನರೂ ಈ ಹೈಟೆಕ್ ಸೌಲಭ್ಯ ಗಳೊಂದಿಗೆ ಆಸ್ಪತ್ರೆಗೆ ಸೇರಬೇಕು ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಎಸ್ಎಸ್ಎಲ್ ಸಿ ಮಕ್ಕಳಿಗೆ ವಿಶೇಷ ಪರೀಕ್ಷೆಗಳನ್ನು ನಡೆಸಿ ಅವರಲ್ಲಿನ ಕಲಿಕಾಸಕ್ತಿ ಹೆಚ್ಚಿಸಲು ನನ್ನ ಕೈಲಾದ ಮಟ್ಟಿಗೆ ಕಾರ್ಯಾರಂಭಿಸಿದ್ದೇನೆ. ಅದೇ ರೀತಿ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಡಾಕ್ಟರ್ ಮತ್ತು ಇಂಜನಿಯರುಗಳಾಗಬೇಕು ಎಂದು ಕನಸು ಕಂಡಿದ್ದ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್ ಮತ್ತು ಸಿಇಟಿ ತರಗತಿಗಳನ್ನು ನಡೆಸುತ್ತಿದ್ದೇನೆ.ಇದೇ ತರಬೇತಿ ಹೊರಗೆ ಪಡೆಯಲು ಲಕ್ಷಾಂತರ ರೂಪಾಯಿ ಕೊಡಬೇಕು.ಆದರೆ ನಾನು ಉಚಿತವಾಗಿ ತರಬೇತಿ ನೀಡಿದ್ದೇನೆ.

ಇದರಿಂದಾಗಿ ಬಡವರ ಮಕ್ಕಳು ಡಾಕ್ಟರ್ ಮತ್ತು ಇಂಜನಿಯರುಗಳಾಗಿ ದೇಶ ಸೇವೆ ಮಾಡಬೇಕು. ಆಮೂಲಕ ಪೋಷಕರಿಗೆ ಮತ್ತು ಚಿಕ್ಕಬಳ್ಳಾಪುರಕ್ಕೆ ಗೌರವ ಸಿಗುವಂತಾಗಬೇಕು ಎಂದು ತಿಳಿಸಿದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »