Karunadu Studio

ಕರ್ನಾಟಕ

Viral Video: ಮೇಜಿನ ಮೇಲೆ ಕುಳಿತವರಿಗೆ ಪ್ರಸಾದ ಬಡಿಸಿದ ಪುರಿ ದೇವಾಲಯದ ಅರ್ಚಕ; ವಿಡಿಯೊ ವೈರಲ್ – Kannada News | Viral Video: Puri temple priest serves prasadam to those sitting at the table.. Video goes viral


ಭುವನೇಶ್ವರ: ಅರ್ಚಕರೊಬ್ಬರು ದೇವರ ಪ್ರಸಾದವನ್ನು ಒಡಿಶಾದ ಪುರಿ ಬೀಚ್ ರೆಸಾರ್ಟ್‌ನಲ್ಲಿ (Puri beach resort) ಊಟದ ಟೇಬಲ್ ಮೇಲೆ ಕುಳಿತವರಿಗೆ ಬಡಿಸುತ್ತಿರುವ ವಿಡಿಯೊವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ಸಾಕಷ್ಟು ಆಕ್ಷೇಪವು ವ್ಯಕ್ತವಾಗಿದೆ. ಅರ್ಚಕರು ಮಹಾಪ್ರಸಾದವನ್ನು ಬಡಿಸುತ್ತಿರುತ್ತಿದ್ದಂತೆಯೇ ಅಲ್ಲಿಗೆ ಆಗಮಿಸಿದ ವ್ಯಕ್ತಿಯೊಬ್ಬರು ತರಾಟೆಗೆ ತೆಗೆದುಕೊಂಡರು. ಇದು ವೈರಲ್ ಆಗಿರುವ ವಿಡಿಯೊದಲ್ಲಿ ಸೆರೆಯಾಗಿದೆ. ದೇವರ ಪ್ರಸಾದವನ್ನು (Puri Jagannath Mahaprasad ) ನೆಲದ ಮೇಲೆ ಕುಳಿತು ಸೇವಿಸಬೇಕು. ಅದು ಬಿಟ್ಟು ಟೇಬಲ್ ಮೇಲೆ ಕುಳಿತು ತಿನ್ನುವುದಕ್ಕೂ ಹಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಊಟದ ಮೇಜಿನ ಮೇಲೆ ಕುಳಿತಿದ್ದವರಿಗೆ ಪುರಿ ದೇವಾಲಯದ ಅರ್ಚಕರು ಮಹಾಪ್ರಸಾದವನ್ನು ಬಡಿಸುತ್ತಿರುವ ವೈರಲ್ ವಿಡಿಯೊ ವಿವಾದಕ್ಕೆ ಕಾರಣವಾಗಿದೆ. ಪುರಿಯ ಬೀಚ್ ರೆಸಾರ್ಟ್‌ನಲ್ಲಿ ಒಂದೇ ಕುಟುಂಬದ ಸುಮಾರು 10 ಸದಸ್ಯರು ಊಟದ ಮೇಜಿನ ಬಳಿ ಕುಳಿತಿದ್ದಾಗ ಅರ್ಚಕರೊಬ್ಬರು ಅವರಿಗೆ ಮಹಾಪ್ರಸಾದ ಬಡಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಸುಮಾರು 12ನೇ ಶತಮಾನದ ಪುರಿ ದೇವಾಲಯದ ದೇವರು ಜಗನ್ನಾಥನಿಗೆ ಅರ್ಪಿಸುವ ಪವಿತ್ರ ಆಹಾರ ಮಹಾಪ್ರಸಾದವಾಗಿದ್ದು, ಇದನ್ನು ಸಾಂಪ್ರದಾಯಿಕವಾಗಿ ನೆಲದ ಮೇಲೆ ಕುಳಿತು ಬಡಿಸಿ ತಿನ್ನಲಾಗುತ್ತದೆ. ಆದರೆ ಇದೀಗ ಪುರಿಯ ಬೀಚ್ ರೆಸಾರ್ಟ್‌ನಲ್ಲಿ ಊಟದ ಮೇಜಿನ ಮೇಲೆ ಕುಳಿತಿದ್ದವರಿಗೆ ಅರ್ಚಕರು ಮಹಾಪ್ರಸಾದ ಬಡಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಟೇಬಲ್‌ನಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 10 ಕುಟುಂಬ ಸದಸ್ಯರು ಕುಳಿತಿದ್ದರು.

ಇದನ್ನು ಒಬ್ಬ ವ್ಯಕ್ತಿ ಪ್ರಶ್ನಿಸಿದ್ದು, ಮಹಿಳೆಯೊಬ್ಬರು ತಾವು ಊಟ ಮಾಡುವ ಮುನ್ನವೇ ಅನುಮತಿ ಕೇಳಿರುವುದಾಗಿ ಹೇಳಿದರು. ಅದಕೆ ಆ ವ್ಯಕ್ತಿ ಅರ್ಚಕರತ್ತ ತಿರುಗಿ ನೀವು ಇದಕ್ಕೆ ಹೇಗೆ ಅನುಮತಿ ನೀಡಿದ್ದೀರಿ ಎಂದು ಕೇಳಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.



ಅನೇಕ ಜಗನ್ನಾಥ ಭಕ್ತರು ಕಳವಳ ವ್ಯಕ್ತಪಡಿಸುತ್ತಿದ್ದಂತೆ ದೇವಾಲಯದ ಅಧಿಕಾರಿಗಳು ಪ್ರತಿಕ್ರಿಯಿಸಿ ಮೇಜಿನ ಮೇಲೆ ಮಹಾಪ್ರಸಾದ ಸೇವಿಸುವುದು ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಶ್ರೀ ಜಗನ್ನಾಥ ದೇವಾಲಯ ಆಡಳಿತ ಮಂಡಳಿ (SJTA)ಯು ಪ್ರತಿಕ್ರಿಯಿಸಿ ಮಹಾಪ್ರಸಾದವನ್ನು ಮೇಜಿನ ಮೇಲೆ ತಿನ್ನುತ್ತಿರುವುದು ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದೆ. ಮಹಾಪ್ರಸಾದವು ದೈವಿಕವಾಗಿದೆ. ಅದನ್ನು ನೆಲದ ಮೇಲೆ ಕುಳಿತು ತಿನ್ನಬೇಕು. ದೇವಾಲಯದ ಶತಮಾನಗಳಷ್ಟು ಹಳೆಯ ಸಂಪ್ರದಾಯಗಳನ್ನು ಕಾಪಾಡಿಕೊಳ್ಳಲು ದೇವಾಲಯ ಆಡಳಿತ ಮಂಡಳಿ ಭಕ್ತರಲ್ಲಿ ವಿನಂತಿಯನ್ನೂ ಮಾಡಿದೆ.

ಇದನ್ನೂ ಓದಿ: Abhishek-Aishwarya Rai: ಕಜ್ರಾ ರೇ ಹಾಡಿಗೆ ಹೆಜ್ಜೆ ಹಾಕಿದ ಅಭಿಷೇಕ್, ಐಶ್ವರ್ಯಾ ಜೋಡಿ- ಈ ಕ್ಯೂಟ್‌ ವಿಡಿಯೊ ನೋಡಿ

ದೇವರ ದೈವಿಕ ಮಹಾಪ್ರಸಾದವನ್ನು ಅನ್ನಬ್ರಹ್ಮ ರೂಪದಲ್ಲಿ ಪೂಜಿಸಲಾಗುತ್ತದೆ. ನೆಲದ ಮೇಲೆ ಕುಳಿತು ಮಹಾಪ್ರಸಾದವನ್ನು ತಿನ್ನುವ ಧಾರ್ಮಿಕ ಸಂಪ್ರದಾಯವು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಆದ್ದರಿಂದ ಎಲ್ಲ ಭಕ್ತರು ಊಟದ ಮೇಜಿನ ಮೇಲೆ ಮಹಾಪ್ರಸಾದವನ್ನು ತಿನ್ನುವಂತಹ ಸಂಪ್ರದಾಯವನ್ನು ವಿರೋಧ ಮಾಡದಿರಿ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಅಲ್ಲದೇ ಸ್ಥಳೀಯ ಭಾವನೆಗಳು ಮತ್ತು ಧಾರ್ಮಿಕ ನಂಬಿಕೆಗಳನ್ನು ಗಮನದಲ್ಲಿಟ್ಟುಕೊಂಡು ಪುರಿಯಲ್ಲಿರುವ ಹೊಟೇಲ್ ಗಳು ತಮ್ಮ ಅತಿಥಿಗಳಿಗೆ ಇಂತಹ ಕ್ರಮದ ಬಗ್ಗೆ ಎಚ್ಚರಿಕೆ ನೀಡುವಂತೆ ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »