Karunadu Studio

ಕರ್ನಾಟಕ

Mallikarjun Kharge: ಅಶೋಕ ವಿವಿ ಪ್ರಾಧ್ಯಾಪಕನ ಬಂಧನ; ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಮಲ್ಲಿಕಾರ್ಜುನ ಖರ್ಗೆ – Kannada News | Mallikarjun Kharge slams BJP on Ashoka University professor’s arrest: ‘How fearful is it…’


ನವದೆಹಲಿ: ಹರಿಯಾಣದ ಸೋನಿಪತ್‌ ಅಶೋಕ ವಿಶ್ವವಿದ್ಯಾನಿಲಯದ (Ashoka University) ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ (Ali Khan Mahmudabad) ಅವರ ಬಂಧನವನ್ನು ಕಾಂಗ್ರೆಸ್ (Congress) ತೀವ್ರವಾಗಿ ಖಂಡಿಸಿದ್ದು, ಇದು ಭಾರತೀಯ ಜನತಾ ಪಕ್ಷ (Bharatiya Janata Party) ತನ್ನಿಷ್ಟವಿಲ್ಲದ ಯಾವುದೇ ಅಭಿಪ್ರಾಯದ ಬಗ್ಗೆ ಎಷ್ಟು “ಭಯಭೀತವಾಗಿದೆ” ಎಂಬುದನ್ನು ತೋರಿಸುತ್ತದೆ ಎಂದು ಹೇಳಿದೆ. ಜತೆಗೆ ಕರ್ನಲ್ ಸೋಫಿಯಾ ಖುರೇಶಿ (Sofiya Qureshi) ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಮಧ್ಯ ಪ್ರದೇಶದ ಸಚಿವ ವಿಜಯ್ ಶಾ ವಿರುದ್ಧ ವಜಾಗೊಳಿಸದ ಬಿಜೆಪಿಯನ್ನು ಕಾಂಗ್ರೆಸ್ ಟೀಕಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್‌ನಲ್ಲಿ ಬರೆದ ಪೋಸ್ಟ್‌ನಲ್ಲಿ, “ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಬಂಧನವು ಬಿಜೆಪಿಯು ತನ್ನಿಷ್ಟವಿಲ್ಲದ ಯಾವುದೇ ಅಭಿಪ್ರಾಯದ ಬಗ್ಗೆ ಎಷ್ಟು ಭಯಭೀತವಾಗಿದೆ ಎಂಬುದನ್ನು ತೋರಿಸುತ್ತದೆ” ಎಂದು ಟೀಕಿಸಿದ್ದಾರೆ. “ಯಾವುದೇ ವ್ಯಕ್ತಿಯ ವಿರುದ್ಧ ಚಾರಿತ್ರ್ಯ ವಧೆ, ಕೆಟ್ಟದಾಗಿ ಚಿತ್ರಿಸುವುದು, ಟ್ರೋಲಿಂಗ್, ಹಿಂಸಾಚಾರ, ಕಾನೂನುಬಾಹಿರ ಬಂಧನ ಅಥವಾ ಯಾವುದೇ ವಾಣಿಜ್ಯ ಸಂಸ್ಥೆಯ ವಿರುದ್ಧ ವಿಧ್ವಂಸಕ ಕೃತ್ಯ, ಅದು ಉಗ್ರ ಗುಂಪುಗಳಿಂದಲೇ ಆಗಿರಲಿ ಅಥವಾ ಅಧಿಕೃತ ರಾಜ್ಯದ ಆಡಳಿತದ ಮೂಲಕವೇ ಆಗಿರಲಿ, ನಾನು ಖಂಡಿಸುತ್ತೇನೆ” ಎಂದು ಖರ್ಗೆ ಹೇಳಿದ್ದಾರೆ.

ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಪಾಕಿಸ್ತಾನದೊಂದಿಗಿನ ಪ್ರಸ್ತುತ ಸಂಘರ್ಷಕ್ಕೆ ಸಂಬಂಧಿಸಿದ ಇತರ ಟ್ರೋಲ್‌ಗಳನ್ನು ಖರ್ಗೆ ಉಲ್ಲೇಖಿಸಿದ್ದಾರೆ. ಇದರಲ್ಲಿ ದಾಳಿಯಲ್ಲಿ ಸಾವನ್ನಪ್ಪಿದ ನೌಕಾಪಡೆಯ ಅಧಿಕಾರಿಯ ಪತ್ನಿ ಹಿಮಾಂಶಿ ನರ್ವಾಲ್ ಕೂಡ ಸೇರಿದ್ದಾರೆ. “ನಮ್ಮ ಹುತಾತ್ಮ ನೌಕಾ ಅಧಿಕಾರಿಯ ದುಃಖಿತ ವಿಧವೆ, ನಮ್ಮ ವಿದೇಶಾಂಗ ಕಾರ್ಯದರ್ಶಿ ಮತ್ತು ಅವರ ಮಗಳನ್ನು ಗುರಿಯಾಗಿಸಿಕೊಂಡು ಹಲವಾರು ಟ್ರೋಲ್ ಮಾಡಲಾಗಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕರ್ನಲ್ ಬಗ್ಗೆ ಬಿಜೆಪಿ ಸಚಿವರು ಮಾಡಿದ ಶೋಚನೀಯ ಅವಹೇಳನಕಾರಿ ಹೇಳಿಕೆಗಳಿಂದ ಇದು ಪ್ರಾರಂಭವಾಯಿತು” ಎಂದು ಖರ್ಗೆ ತಿಳಿಸಿದ್ದಾರೆ.

“ನಮ್ಮ ವೀರ ಸಶಸ್ತ್ರ ಪಡೆಗಳ ವಿರುದ್ಧ ಅಸಹ್ಯಕರ ಹೇಳಿಕೆಗಳನ್ನು ನೀಡಿದ ತಮ್ಮದೇ ಆದ ಮಧ್ಯ ಪ್ರದೇಶದ ಉಪಮುಖ್ಯಮಂತ್ರಿ ಮತ್ತು ಸಚಿವರನ್ನು ವಜಾಗೊಳಿಸುವ ಬದಲು, ಬಹುತ್ವವನ್ನು ಪ್ರತಿನಿಧಿಸುವ, ಸರ್ಕಾರವನ್ನು ಪ್ರಶ್ನಿಸುವ ಅಥವಾ ರಾಷ್ಟ್ರದ ಸೇವೆಯಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುವ ಯಾರಾದರೂ ಅದರ ಅಸ್ತಿತ್ವಕ್ಕೆ ಬೆದರಿಕೆ ಎಂಬ ನಿರೂಪಣೆಯನ್ನು ಬಿತ್ತರಿಸಲು ಬಿಜೆಪಿ-ಆರ್‌ಎಸ್‌ಎಸ್ ಸಿದ್ಧವಾಗಿದೆ” ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: Police Firing: ಶಿವಮೊಗ್ಗದಲ್ಲಿ ಕೊಲೆ ಆರೋಪಿ ಕಾಲಿಗೆ ಗುಂಡಿಟ್ಟು ಬಂಧನ

ಸುಪ್ರೀಂ ಕೋರ್ಟ್‌ಗೆ ಮಹ್ಮದಾಬಾದ್ ಮನವಿ

ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್, ಆಪರೇಷನ್ ಸಿಂದೂರ್ ಮಾಹಿತಿಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದಾಗಿ ಬಂಧನವಾಗಿದ್ದು, ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ಈ ವಾರದಲ್ಲಿ ತುರ್ತಾಗಿ ಈ ಅರ್ಜಿಯ ವಿಚಾರಣೆ ನಡೆಸಲು ಒಪ್ಪಿಗೆ ನೀಡಿದೆ.

ಮಹ್ಮದಾಬಾದ್ ಅವರನ್ನು ಭಾನುವಾರ ಬಂಧಿಸಲಾಗಿತ್ತು. ಇದಕ್ಕೂ ಮುಂಚೆ, ಹರಿಯಾಣ ರಾಜ್ಯ ಮಹಿಳಾ ಆಯೋಗವು ಅವರ ಹೇಳಿಕೆಗಳ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿತ್ತು. ಆಪರೇಷನ್ ಸಿಂದೂರ್ ಆರಂಭಿಕ ಮಾಧ್ಯಮ ಮಾಹಿತಿಯನ್ನು ಕರ್ನಲ್ ಸೋಫಿಯಾ ಕುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಎಂಬ ಮಹಿಳಾ ಅಧಿಕಾರಿಗಳು ನೀಡಿದ್ದನ್ನು ಕೇವಲ ತೋರಿಕೆ ಮತ್ತು ಕಪಟತನ ಎಂದು ಮಹ್ಮದಾಬಾದ್ ಕರೆದಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »