Karunadu Studio

ಕರ್ನಾಟಕ

Militants Arrested: ಮಣಿಪುರ ಪೊಲೀಸರಿಂದ ಭರ್ಜರಿ ಬೇಟೆ; ಐವರು ಬಂಡುಕೋರರ ಬಂಧನ – Kannada News | Five militants arrested in Manipur


ಇಂಫಾಲ್: ಪಶ್ಚಿಮ ಜಿಲ್ಲೆಯಲ್ಲಿ ನಿಷೇಧಿತ ಉಗ್ರ ಸಂಘಟನೆಗಳ (active cadre of the banned People’s Liberation Army) ಐದು ಸದಸ್ಯರನ್ನು ಮಣಿಪುರ (Militants Arrested) ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಅವರು ಸುಲಿಗೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಬಂಧಿತರ ಪೈಕಿ ಒಬ್ಬನು ನಿಷೇಧಿತ ಪೀಪಲ್ಸ್ ಲಿಬರೇಶನ್ ಆರ್ಮಿ (PLA)ಯ ಸಕ್ರಿಯ ಸದಸ್ಯನಾಗಿದ್ದು, ಜಿರಿಬಂ ಜಿಲ್ಲೆಗೆ ಸೇರಿದ್ದಾನೆ. ಅವನನ್ನು ಮೈಟೆಯಿಸ್ ಲಾಂಖೈ ಚಾಜಿಂಗ್ ಪ್ರದೇಶದಿಂದ ಬಂಧಿಸಲಾಗಿದೆ.

ಇನ್ನೊಬ್ಬ ಮಹಿಳೆ ನಿಷೇಧಿತ ಕಾಂಗ್ಲೆ ಪಾಕ್‌ ಕಮ್ಯೂನಿಸ್ಟ್ ಪಾರ್ಟಿ (ಪಿಡಬ್ಲ್ಯೂಜಿ)ಗೆ ಸೇರಿದ ಸದಸ್ಯೆಯಾಗಿದ್ದು, ವಹೆಂಗ್ಖುಮನ್ ಮಾನಿಂಗ್ ಲೇಕೈ ಎಂಬಲ್ಲಿ ಹಣ ವಸೂಲಿಗೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಬಂಧಿಸಲಾಗಿದೆ ಎನ್ನಲಾಗಿದೆ. ಮತ್ತು ಮೂವರು ನಿಷೇಧಿತ ಕೆಸಿಪಿ ಸದಸ್ಯರನ್ನು ಸಗೋಲ್ಬಂಡ್ ತಿಂಗೋಮ್ ಲೇಕೈ ಪ್ರದೇಶದ ಬಾಡಿಗೆ ಮನೆಯಲ್ಲಿದ್ದ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರು ಇಂಫಾಲ್ ಕಣಿವೆಯಲ್ಲಿ ಹಣ ಬೇಡಿಕೆ ಚಟುವಟಿಕೆಯಲ್ಲಿ ತೊಡಗಿರುವುದು ತಿಳಿದು ಬಂದಿದೆ.

ಇದಲ್ಲದೆ, ಇಂಫಾಲ್ ಪಶ್ಚಿಮದಲ್ಲಿ ಅಪಹರಣ ಮತ್ತು ಹಣ ಬೇಡಿಕೆಯ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ದೆಹಲಿ ಮತ್ತು ಜೈಪುರದಿಂದ ಬಂದ ಇಬ್ಬರನ್ನು ನೆಟ್ವರ್ಕಿಂಗ್ ವ್ಯವಹಾರದ ತರಬೇತಿ ನೀಡುವ ವಿಚಾರವಾಗಿ ಮಣಿಪುರಕ್ಕೆ ಕರೆಸಿಕೊಂಡು, ಅಪಹರಿಸಿ ಹಣ ಬೇಡಿಕೆಯ ಕುರಿತು ತೀವ್ರ ಬೆದರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಮಣಿಪುರದಲ್ಲಿ ಪೊಲೀಸರ ಕಾರ್ಯಾಚರಣ ಜೋರಾಗಿದೆ. ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೈಪಾಕ್ (PREPAK)ಸಂಘಟನೆಯ ಇಬ್ಬರು ಉಗ್ರಗಾಮಿಗಳು ಮತ್ತು ಕಾಂಗ್ಲೈ ಯಾವೋಲ್ ಕನ್ನಾ ಲುಪ್ (KYKL) ನ ಸಕ್ರಿಯ ಸದಸ್ಯನನ್ನು ಇಂಫಾಲ್ ಪೂರ್ವ ಜಿಲ್ಲೆಯಿಂದ ಬಂಧಿಸಲಾಗಿದೆ. ಪೊಲೀಸರು ಟೆಂಗ್ನೌಪಾಲ್ ಜಿಲ್ಲೆಯಿಂದ ಕೊಯಿರೆಂಗ್ ನೇತೃತ್ವದ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (UNLF-K) ನ ಒಬ್ಬ ಉಗ್ರನೊಬ್ಬನ್ನು ಬಂಧಿಸಿದ್ದಾದ್ದರು.

ಈ ಸುದ್ದಿಯನ್ನೂ ಓದಿ: Militants killed: ಮಣಿಪುರದಲ್ಲಿ ಭರ್ಜರಿ ಬೇಟೆ; 10 ಬಂಡುಕೋರರು ಫಿನಿಶ್‌

ಬಂಧಿತರಿಂದ ಒಂದು ಬಂದೂಕು ಮತ್ತು ಗುಂಡುಗಳು ವಶಪಡಿಸಿಕೊಳ್ಳಲಾಗಿದೆ. ಎರಡು ವರ್ಷಗಳಿಂದ ಮಣಿಪುರದಲ್ಲಿ ನಡೆದಿರುವ ಜಾತಿಯ ಹಿಂಸಾಚಾರದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿವೆ. ಮೇ 2023ರಿಂದ ಮೈಟೆಯಿಸ್ ಮತ್ತು ಕುಕಿ-ಝೋ ಸಮುದಾಯಗಳ ನಡುವೆ ನಡೆದ ಹಿಂಸಾಚಾರದಲ್ಲಿ 260ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ ಎನ್ನಲಾಗಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »