Karunadu Studio

ಕರ್ನಾಟಕ

TIME 100 Philanthropy List: ಟೈಮ್ 100 ಲೋಕೋಪಕಾರಿ 2025 ಜಾಗತಿಕ ಪಟ್ಟಿಯಲ್ಲಿ ಮುಕೇಶ್ ಅಂಬಾನಿ, ನೀತಾ ಅಂಬಾನಿಗೆ ಸ್ಥಾನ – Kannada News | Mukesh Ambani and Nita Ambani in Time 100 Philanthropy 2025 Global List


ನವದೆಹಲಿ: ಟೈಮ್ ನಿಯತಕಾಲಿಕವು ಬಿಡುಗಡೆ ಮಾಡಿರುವ ತನ್ನ ಮೊದಲ ‘ಟೈಮ್ 100 ಲೋಕೋಪಕಾರಿ 2025’ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಸ್ಥಾನ ಪಡೆದುಕೊಂಡಿದ್ದಾರೆ. ದಾನ ಮತ್ತು ಲೋಕೋಪಕಾರಿ ಕ್ಷೇತ್ರದಲ್ಲಿ ಭವಿಷ್ಯವನ್ನು ರೂಪಿಸುತ್ತಿರುವ 100 ಜಾಗತಿಕ ನಾಯಕರನ್ನು ಈ ಪಟ್ಟಿ ಒಳಗೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಮತ್ತು ರಿಲಯನ್ಸ್ ಫೌಂಡೇಶನ್‌ನ ಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ 2024ರಲ್ಲಿ 407 ಕೋಟಿ ರೂ. ಗಳನ್ನು (ಸುಮಾರು 48 ಮಿಲಿಯನ್ ಡಾಲರ್) ದೇಣಿಗೆ ನೀಡುವ ಮೂಲಕ ದೇಶದ ಅತಿದೊಡ್ಡ ದಾನಿಗಳಲ್ಲಿ ಸ್ಥಾನ ಪಡೆದಿದ್ದಾರೆ.

ದಂಪತಿಯ ಲೋಕೋಪಕಾರಿ ಉಪಕ್ರಮಗಳು ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ, ಕ್ರೀಡೆ ಮತ್ತು ವಿಪತ್ತು ಪರಿಹಾರದಂತಹ ಕ್ಷೇತ್ರಗಳಲ್ಲಿ ದೇಶಾದ್ಯಂತ ಲಕ್ಷಾಂತರ ಜನರ ಜೀವನವನ್ನು ಸ್ಪರ್ಶಿಸಿವೆ. ಈ ಉಪಕ್ರಮಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಮಹಿಳೆಯರಿಗೆ ವೃತ್ತಿ ತರಬೇತಿ, ಗ್ರಾಮೀಣ ಸಮುದಾಯಗಳಿಗೆ ಸುಸ್ಥಿರ ಕೃಷಿಗೆ ಬೆಂಬಲ, ಜಲ ಸಂರಕ್ಷಣೆ, ಆಸ್ಪತ್ರೆಗಳ ನಿರ್ಮಾಣ, ದೃಷ್ಟಿ ಸಮಸ್ಯೆಗಳಿಗೆ ಸಹಾಯ ಮತ್ತು ಶಾಲಾ ಮೂಲಸೌಕರ್ಯಗಳನ್ನು ಬಲಪಡಿಸುವುದು ಸೇರಿವೆ.

ಈ ಸುದ್ದಿಯನ್ನೂ ಓದಿ | SBI Recruitment 2025: ಪದವಿ ವಿದ್ಯಾರ್ಹತೆ ಹೊಂದಿದವರಿಗೆ ಗುಡ್‌ನ್ಯೂಸ್‌; ಎಸ್‌ಬಿಐಯಲ್ಲಿದೆ ಬರೋಬ್ಬರಿ 2,964 ಹುದ್ದೆ

ಸ್ವತಃ ಯಶಸ್ವಿ ಉದ್ಯಮಿ ಮತ್ತು ಅವರ ಪುತ್ರ ಆಕಾಶ್ ಅಂಬಾನಿ ಅವರೊಂದಿಗೆ ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡದ ಸಹ ಮಾಲೀಕರಾಗಿರುವ ನೀತಾ ಅಂಬಾನಿ ಕೂಡ ಕ್ರೀಡಾ ಜಗತ್ತಿನಲ್ಲಿ ಪ್ರತಿಭೆಗಳನ್ನು ಪೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ, ರಿಲಯನ್ಸ್ ಫೌಂಡೇಶನ್ ಮಹಿಳಾ ಕ್ರೀಡಾಪಟುಗಳ ಮೇಲೆ ವಿಶೇಷ ಗಮನ ಹರಿಸಿ, ಕ್ರೀಡಾಪಟುಗಳಿಗೆ ವಿಶ್ವದರ್ಜೆಯ ಸೌಲಭ್ಯಗಳು ಮತ್ತು ಕ್ರೀಡಾ-ವಿಜ್ಞಾನ ಆಧಾರಿತ ತರಬೇತಿಯನ್ನು ಒದಗಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »