ತುಮಕೂರು: ಗೃಹ ಸಚಿವ ಡಾ. ಜಿ ಪರಮೇಶ್ವರ್ (Home minister G Parameshwar) ಒಡೆತನದ ತುಮಕೂರಿನ (Tumkur news) ಸಿದ್ದಾರ್ಥ ಕಾಲೇಜಿನ (Siddhartha College) ಮೇಲೆ ಇಡಿ ಅಧಿಕಾರಿಗಳು ದಾಳಿ (ED Raid) ನಡೆಸಿದ್ದಾರೆ. ಬೆಳ್ಳಂ ಬೆಳಗ್ಗೆಯೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. 5 ಕಾರುಗಳಲ್ಲಿ ಬಂದ ಇಡಿ ಅಧಿಕಾರಿಗಳು ಸಂಸ್ಥೆಯ ಕಚೇರಿಗೆ ತೆರಳಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಸಿದ್ದಾರ್ಥ ಶಿಕ್ಷಣ ಸಂಸ್ಥೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಒಡೆತನಕ್ಕೆ ಸೇರಿದೆ. ತುಮಕೂರಿನಲ್ಲಿರುವ ಎಸ್‌ಎಸ್‌ಐಟಿ ಕಾಲೇಜು ಹಾಗೂ ತುಮಕೂರಿನ ಹೆಗ್ಗೆರೆ ಬಳಿಯಿರುವ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬೆಳ್ಳಂಬೆಳಗ್ಗೆಯೇ 5 ಇನ್ನೋವಾ ಕಾರುಗಳಲ್ಲಿ ಸಿದ್ದಾರ್ಥ ಕಾಲೇಜಿಗೆ ಬಂದಿಳಿದ ಇಡಿ ಅಧಿಕಾರಿಗಳು, ಪ್ರಿನ್ಸಿಪಾಲ್ ಕಚೇರಿಗೆ ತೆರಳಿದ್ದು, ಕಚೇರಿಯಲ್ಲಿನ ಕಡತನಗಳನ್ನು ಪರಿಶೀಲಿಸುತ್ತಿದ್ದಾರೆ.
ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದೇನು?
ಬೆಂಗಳೂರಿನಲ್ಲಿರುವ ಗೃಹ ಸಚಿವ ಜಿ ಪರಮೇಶ್ವರ್ ಅವರು ತಮ್ಮದೇ ಆದ ಸಿದ್ದಾರ್ಥ ವಿದ್ಯಾಸಂಸ್ಥೆ ಮೇಲಿನ ಇಡಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಡಾ.ಜಿ.ಪರಮೇಶ್ವರ್ ಅವರು ಪತ್ನಿ ಕನ್ನಿಕಾ ಜೊತೆ ತೆರಳಿದ್ದಾರೆ.
ಇದನ್ನೂ ಓದಿ: Aishwarya Gowda: ವಂಚನೆ ಪ್ರಕರಣದಲ್ಲಿ ಐಶ್ವರ್ಯ ಗೌಡ 14 ದಿನ ಇಡಿ ಕಸ್ಟಡಿಗೆ