Karunadu Studio

ಕರ್ನಾಟಕ

Pakistan Man Arrested: ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕ್‌ ವ್ಯಕ್ತಿಯ ಬಂಧನ – Kannada News | BSF Arrests 65-Year-Old Pakistani Man Near India-Pakistan Border in Amritsar


ಚಂಡೀಗಢ: ಭಾರತ-ಪಾಕಿಸ್ತಾನ ಗಡಿಯ (India-Pakistan border) ಅಮೃತಸರದ (Amritsar) ಶಾಹಪುರ (Shahpur) ಗಡಿ ಚೌಕಿಯಲ್ಲಿ 65 ವರ್ಷದ ಪಾಕಿಸ್ತಾನಿ ನಾಗರಿಕನನ್ನು (Pakistani National) ಗಡಿ ಭದ್ರತಾ ಪಡೆ (BSF) ಬಂಧಿಸಿದೆ. ಲಾಹೋರ್‌ನ ನಿವಾಸಿಯಾಗಿರುವ ಈ ವ್ಯಕ್ತಿಯನ್ನು ಭಾರತದ ಗಡಿಯ ಸಮೀಪ ಬಂಧಿಸಲಾಗಿದೆ. ಪ್ರಾಥಮಿಕ ತಪಾಸಣೆಯಲ್ಲಿ ಆರೋಪಿಯ ಬಳಿ ಕೆಲವು ಹಣವನ್ನು ಹೊರತುಪಡಿಸಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಪ್ರಸ್ತುತ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಈ ತಿಂಗಳ ಆರಂಭದಲ್ಲಿ ಅಮೃತಸರ ಜಿಲ್ಲೆಯ ದರಿಯಾ ಮನ್ಸೂರ್ ಗಡಿ ಚೌಕಿಯಲ್ಲಿ ಬಿಎಸ್‌ಎಫ್‌ನ 117ನೇ ಬೆಟಾಲಿಯನ್‌ ಮತ್ತೊಬ್ಬ ಪಾಕಿಸ್ತಾನಿ ನಾಗರಿಕನನ್ನು ಬಂಧಿಸಿತ್ತು. ಈ ವ್ಯಕ್ತಿ ಅಕ್ರಮವಾಗಿ ಗಡಿ ದಾಟಿದ್ದು, ಪೊದೆಯೊಳಗೆ ಅಡಗಿಕೊಂಡಿದ್ದ ಎಂದು ವರದಿಯಾಗಿದೆ. ಆತನ ಬಳಿಯಿಂದ ಪಾಕಿಸ್ತಾನದ ಕರೆನ್ಸಿ ಮತ್ತು ಗುರುತಿನ ಚೀಟಿಯನ್ನು ವಶಪಡಿಸಿಕೊಳ್ಳಲಾಗಿತ್ತು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »