Karunadu Studio

ಕರ್ನಾಟಕ

ಲೀಲಾ ಪ್ಯಾಲೇಸ್‌ IPO ಷೇರಿನ ದರ ಎಷ್ಟು? ಸೆನ್ಸೆಕ್ಸ್‌ 1 ಲಕ್ಷಕ್ಕೆ ಏರಿಕೆ? – Kannada News | What is the Leela Palace IPO share price? Sensex rises to 1 lakh?


-ಕೇಶವ ಪ್ರಸಾದ್‌ ಬಿ.

ಬೆಂಗಳೂರಿನ ಐಷಾರಾಮಿ ಹೋಟೆಲ್‌ ಆಗಿರುವ ಲೀಲಾ ಪ್ಯಾಲೇಸ್‌ ಸೇರಿದಂತೆ, ಲೀಲಾ ಹೋಟೆಲ್ಸ್‌ ಬ್ರಾಂಡ್‌ನ ಐಪಿಒ ಮೇ 26ರಿಂದ ಮೇ 28ರ ತನಕ ನಡೆಯಲಿದೆ. ಲೀಲಾ ಲಕ್ಸುರಿ ಹೋಟೆಲ್‌ಗಳ ಸರಣಿ ಬ್ರ್ಯಾಂಡ್‌ನ ಪ್ರವರ್ತಕ ಸಂಸ್ಥೆ ಸ್ಕೂಲ್ಸ್‌ ಬೆಂಗಳೂರು ಆಗಿದೆ. ಈ ಸ್ಕೂಲ್ಸ್‌ ಬೆಂಗಳೂರು 2019ರಲ್ಲಿ ಸ್ಥಾಪನೆಯಾಗಿದ್ದು, ” ದ ಲೀಲಾʼ ಬ್ರ್ಯಾಂಡ್‌ ಲಕ್ಸುರಿ ಹೋಟೆಲ್‌ಗಳನ್ನು ನಡೆಸುತ್ತಿದೆ. ಕಂಪನಿಯು ಲೀಲಾ ಪ್ಯಾಲೇಸ್‌ ಹೋಟೆಲ್ಸ್‌ ಆಂಡ್‌ ರೆಸಾರ್ಟ್ಸ್‌ ಬ್ರ್ಯಾಂಡ್‌ ಅಡಿಯಲ್ಲಿ 12 ಹೋಟೆಲ್‌ಗಳ ಸರಣಿಯನ್ನು ಒಳಗೊಂಡಿದೆ. ಬೆಂಗಳೂರು, ಚೆನ್ನೈ, ದಿಲ್ಲಿ, ಜೈಪುರ ಮತ್ತು ಉದಯಪುರದಲ್ಲಿ ಲೀಲಾ ಪ್ಯಾಲೇಸ್‌ ಹೋಟೆಲ್‌ಗಳಿವೆ. ಐಪಿಒ ಮೂಲಕ 2,500 ಕೋಟಿ ರುಪಾಯಿಗಳನ್ನು ಸಂಗ್ರಹಿಸುವ ಉದ್ದೇಶವನ್ನು, ಮುಂಬಯಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಲೀಲಾ ಹೋಟೆಲ್ಸ್‌ ಆಡಳಿತ ಮಂಡಳಿಯು ಹೊಂದಿದೆ. ಐಪಿಒದಲ್ಲಿ ಸಂಸ್ಥೆಯ ಪ್ರತಿ ಷೇರಿನ ದರದ ಶ್ರೇಣಿಯು 413-435 ರುಪಾಯಿಗಳಾಗಿದೆ. ಸಾಲದ ಮರು ಪಾವತಿಯ ಉದ್ದೇಶಕ್ಕೆ ಬಹುಪಾಲು ಹಣವನ್ನು ಸಂಸ್ಥೆ ಬಳಸಲಿದೆ. ನಷ್ಟದ ಹೊರತಾಗಿಯೂ 2024-25ರಲ್ಲಿ ಲೀಲಾ ಹೋಟೆಲ್ಸ್‌ಗಳ ಆದಾಯವು 1,226 ಕೋಟಿ ರುಪಾಯಿಗೆ ಏರಿಕೆಯಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಲೀಲಾ ಹೋಟೆಲ್ಸ್‌ ಐಪಿಒಗೆ ಸೆಬಿ ಅನುಮೋದಿಸಿತ್ತು. ಬ್ರೂಕ್‌ಫೀಲ್ಡ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಸಬ್ಸಿಡರಿ ಆಗಿರುವ ಪ್ರಾಜೆಕ್ಟ್‌ ಬ್ಯಾಲೆಟ್‌ ಬೆಂಗಳೂರು ಹೋಲ್ಡಿಂಗ್ಸ್‌ ಸಂಸ್ಥೆಯು ಲೀಲಾ ಹೋಟೆಲ್ಸ್‌ನ ಪ್ರವರ್ತಕ ಸಂಸ್ಥೆಯಾಗಿದೆ.

ಲೀಲಾ ಹೋಟೆಲ್ಸ್‌ ಐಪಿಒದಲ್ಲಿ 75% ಷೇರುಗಳನ್ನು ಕ್ವಾಲಿಫೈಡ್‌ ಇನ್‌ಸ್ಟಿಟ್ಯೂಷನಲ್‌ ಖರೀದಿದಾರರಿಗೆ ವಿತರಿಸಲಾಗುವುದು. ಅದರ ಮೊತ್ತ 1,575 ಕೋಟಿ ರುಪಾಯಿ ಆಗಲಿದೆ. 15 ಪರ್ಸೆಂಟ್‌ ಆಂಕರ್‌ ಇನ್ವೆಸ್ಟರ್ಸ್‌ಗೆ ಮಂಜೂರು ಮಾಡಲಾಗುವುದು. ರಿಟೇಲ್‌ ಹೂಡಿಕೆದಾರರಿಗೆ 10 ಪರ್ಸೆಂಟ್‌ ವಿತರಣೆಯಾಗಲಿದೆ.

ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಇಂದು ಬಹಳ ಪಾಸಿಟಿವ್‌ ಮೂಡ್‌ನಲ್ಲಿತ್ತು. ಅಂತಿಮವಾಗಿ 410 ಅಂಕ ಏರಿಕೆಯಾಗಿ, 81,596ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು. ನಿಫ್ಟಿ 129 ಅಂಕ ಜಿಗಿದು 24,813 ಕ್ಕೆ ವಹಿವಾಟು ಏರಿಕೆಯಾಗಿತ್ತು.

ಹಾಗಾದ್ರೆ ಇವತ್ತು ಸ್ಟಾಕ್‌ ಮಾರ್ಕೆಟ್‌ನಲ್ಲಿ ಏನೆಲ್ಲ ಆಯ್ತು, ಟ್ರೆಂಡ್‌ ಹೇಗಿತ್ತು? ಯಾವ ಷೇರು ಲಾಭ ಗಳಿಸಿತು? ಯಾವ ಷೇರು ನಷ್ಟಕ್ಕೀಡಾಯಿತು ಇತ್ಯಾದಿ ವಿವರಗಳನ್ನು ನೋಡೋಣ. ಬುಧವಾರ 1,753 ಷೇರುಗಳು ಲಾಭ ಗಳಿಸಿತು. 1,095 ಷೇರುಗಳು ನಷ್ಟಕ್ಕೀಡಾಯಿತು. ‌

ನಿಫ್ಟಿ 50 ಪ್ಯಾಕ್‌ನಲ್ಲಿ ಲಾಭ ಗಳಿಸಿದ ಷೇರುಗಳು: BEL, ಟಾಟಾ ಸ್ಟೀಲ್‌, ಸಿಪ್ಲಾ.

ನಷ್ಟಕ್ಕೀಡಾದ ಷೇರುಗಳು: ಇಂಡಸ್‌ಇಂಡ್‌ ಬ್ಯಾಂಕ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್.

ಬೆಂಗಳೂರು ಮೂಲದ ರಕ್ಷಣಾ ವಲಯದ ಕಂಪನಿಯಾದ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಅಥವಾ ಬಿಇಎಲ್‌ ಷೇರಿನ ದರದಲ್ಲಿ ಇವತ್ತು 4 ಪರ್ಸೆಂಟ್‌ ಹೆಚ್ಚಳ ಉಂಟಾಯಿತು. 379 ರುಪಾಯಿಗೆ ಏರಿಕೆ ಆಯಿತು. 52 ವಾರಗಳ ಗರಿಷ್ಠ ಎತ್ತರಕ್ಕೇರಿತು. ಬ್ರೋಕರೇಜ್‌ ಸಂಸ್ಥೆ ನುವಾಮಾ, ಬಿಇಎಲ್‌ ಷೇರುಗಳನ್ನು ಖರೀದಿಸಲು ಶಿಫಾರಸು ಮಾಡಿದೆ. 430 ರುಪಾಯಿಗೆ ಬಿಇಎಲ್‌ ಷೇರಿನ ದರ ಏರಿಕೆ ಆಗಬಹುದು ಎಂದು ಹೇಳಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ 10,000 ಕೋಟಿ ರುಪಾಯಿಗಳ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದರೂ, ಮರುದಿನವೇ ಸ್ಟಾಕ್‌ ಮಾರ್ಕೆಟ್‌ ಚೇತರಿಸಿರುವುದು ಗಮನಾರ್ಹ. ಹೀಗಿದ್ದರೂ, ವಿದೇಶಿ ಹೂಡಿಕೆಯ ಹರಿವು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿದೆ.

ಬುಧವಾರ ಡಿಕ್ಸಾನ್‌ ಟೆಕ್ನಾಲಜೀಸ್‌ ಷೇರಿನ ದರದಲ್ಲಿ6% ಇಳಿಕೆ ದಾಖಲಾಯಿತು. 15,568 ರುಪಾಯಿಯ ಮಟ್ಟದಲ್ಲಿ ದರ ಇತ್ತು. ಡಿಕ್ಸಾನ್‌ ಟೆಕ್ನಾಲಜೀಸ್‌ ತನ್ನ ನಾಲ್ಕನೇ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಿದ್ದು, 401 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಆದಾಯ ಕೂಡ 4,658 ಕೋಟಿ ರುಪಾಯಿಗೆ ಏರಿಕೆಯಾಗಿದೆ. ಹೀಗಿದ್ದರೂ ಷೇರಿನ ದರ ಇಳಿಕೆಯಾಗಿದೆ. ಯುನೈಟೆಡ್‌ ಸ್ಪಿರಿಟ್ಸ್‌ ಷೇರಿನ ದರದಲ್ಲಿ 3% ಇಳಿಕೆಯಾಗಿದ್ದು, ನಾಲ್ಕನೇ ತ್ರೈಮಾಸಿಕ ಫಲಿತಾಂಶ ನಿರಾಸೆ ಮೂಡಿಸಿರುವುದು ಇದಕ್ಕೆ ಕಾರಣ.

ಈ ನಡುವೆ ಆಪರೇಷನ್‌ ಸಿಂದೂರ್‌ ಬಳಿಕ ಡ್ರೋನ್‌ ಕಂಪನಿಗಳ ಷೇರುಗಳ ದರದಲ್ಲಿ 50 ಪರ್ಸೆಂಟ್‌ ತನಕ ಏರಿಕೆಯಾಗಿದೆ. ಉದಾಹರಣೆಗೆ ಐಡಿಯಾಫೋರ್ಜ್‌, ಪಾರಾಸ್‌ ಡಿಫೆನ್ಸ್‌, ಝೆನ್‌ ಟೆಕ್ನಾಲಜೀಸ್‌, ಭಾರತ್‌ ಎಲೆಕ್ಟ್ರಾನಿಕ್ಸ್‌ ಷೇರುಗಳ ದರ ಏರಿಕೆಯಾಗಿದೆ.

ಬೆಲ್‌ ರೈಸ್‌ ಇಂಡಸ್ಟ್ರೀಸ್‌ ಕಂಪನಿಯ ಐಪಿಒ ಇವತ್ತು ಆರಂಭವಾಗಿದೆ. 2,150 ಕೋಟಿ ರುಪಾಯಿಗಳನ್ನು ಐಪಿಒ ಮೂಲಕ ಸಂಗ್ರಹಿಸುವ ಉದ್ದೇಶವನ್ನು ಕಂಪನಿ ಹೊಂದಿದೆ. ಮೊದಲ ದಿನ 38% ಸಬ್‌ಸ್ಕ್ರೈಬ್‌ ಆಗಿದೆ. ಪ್ರತಿ ಷೇರಿನ ಐಪಿಒ ದರ 85-90 ರುಪಾಯಿ ಆಗಿದೆ. ಐಪಿಒದಲ್ಲಿ ಹೂಡಿಕೆದಾರರು ಒಂದು ಲಾಟ್‌ನಲ್ಲಿ ಕನಿಷ್ಠ 166 ಷೇರುಗಳನ್ನು ಖರೀದಿಸಬೇಕಾಗುತ್ತದೆ. ಅಂದ್ರೆ 14,940/- ಆಗುತ್ತದೆ.

ಸೆಕ್ಟರ್‌ಗಳ ಪೈಕಿ ನಿಫ್ಟಿ ರಿಯಾಲ್ಟಿ, ನಿಫ್ಟಿ ಫಾರ್ಮಾ ಇಂಡೆಕ್ಸ್‌, ನಿಫ್ಟಿ ಫೈನಾನ್ಷಿಯಲ್‌ ಸರ್ವೀಸ್‌ ಏರಿಕೆ ದಾಖಲಿಸಿತು. ರಿಲಯನ್ಸ್‌ ಇಂಡಸ್ಟ್ರೀಸ್‌, ಎಸ್‌ಬಿಐ ಸೇರಿದಂತೆ 10 ಲಾರ್ಜ್‌ ಕ್ಯಾಪ್‌ ಷೇರುಗಳನ್ನು ಈಗ ಖರೀದಿಸಲು ಸಕಾಲ ಎಂದು ಹಲವಾರು ಬ್ರೋಕರೇಜ್‌ ಸಂಸ್ಥೆಗಳು ಸಲಹೆ ನೀಡಿವೆ. ವಿಶ್ಲೇಷಕರ ಪ್ರಕಾರ ಈ ಷೇರುಗಳ ದರದಲ್ಲಿ 20 ಪರ್ಸೆಂಟ್‌ ತನಕ ಏರಿಕೆಯನ್ನು ನಿರೀಕ್ಷಿಸಲಾಗಿದೆ. ಅಂಥ ಷೇರುಗಳ ವಿವರ ಇಲ್ಲಿದೆ.

ಐಸಿಐಸಿಐ ಬ್ಯಾಂಕ್‌

ICICI Bank

ಈಗಿನ ದರ : 1445/-

ಏರಿಕೆಯ ಸಾಧ್ಯತೆ: 11%

ಎಚ್‌ಡಿಎಫ್‌ಸಿ ಬ್ಯಾಂಕ್‌

HDFC Bank

ಈಗಿನ ದರ: 1,931/-

ಏರಿಕೆ ಸಾಧ್ಯತೆ: 12%

ಮಹೀಂದ್ರಾ & ಮಹೀಂದ್ರಾ

M&M

ಈಗಿನ ದರ: 3,097 /-

ಏರಿಕೆ ಸಾಧ್ಯತೆ: 15%

ಎಕ್ಸಿಸ್‌ ಬ್ಯಾಂಕ್‌

Axis Bank

ಈಗಿನ ದರ: 1,194 /-

ಏರಿಕೆ ಸಾಧ್ಯತೆ: 15%

ಅಲ್ಟ್ರಾ ಟೆಕ್‌ ಸಿಮೆಂಟ್‌

UltraTech Cement

ಈಗಿನ ದರ : 11,813/-

ಏರಿಕೆ ಸಾಧ್ಯತೆ: 10%

ಎಸ್‌ಬಿಐ

SBI

ಈಗಿನ ದರ: 784/-

ಟಾರ್ಗೆಟ್‌ ದರ: 931/-

ಏರಿಕೆ ಸಾಧ್ಯತೆ: 20%

ಐಟಿಸಿ

ITC

ಈಗಿನ ದರ: 435/-

ಟಾರ್ಗೆಟ್‌ ದರ: 509/-

ಟಿಸಿಎಸ್

TCS‌

ಈಗಿನ ದರ: 3,527/-

ಟಾರ್ಗೆಟ್‌ ದರ: 3,833/-

ಏರಿಕೆ ಸಾಧ್ಯತೆ: 9%

ರಿಲಯನ್ಸ್‌ ಇಂಡಸ್ಟ್ರೀಸ್‌

Reliance Industries

ಈಗಿನ ದರ : 1,425/-

ಟಾರ್ಗೆಟ್‌ ದರ: 1,564/-

ಏರಿಕೆ ಸಾಧ್ಯತೆ: 10%

ಮಾರುತಿ ಸುಜುಕಿ

Maruti Suzuki

ಈಗಿನ ದರ: 12,688/-

ಟಾರ್ಗೆಟ್‌ ದರ: 13,565/-

ಏರಿಕೆ ಸಾಧ್ಯತೆ : 7%

ಈ ಸುದ್ದಿಯನ್ನೂ ಓದಿ | Home Loan: ಮನೆ ಸಾಲ 8%ಕ್ಕಿಂತ ಕಡಿಮೆ ಬಡ್ಡಿ? ಯಾವ ಬ್ಯಾಂಕ್‌ನಲ್ಲಿ ಹೋಮ್‌ ಲೋನ್‌ ಪಡೆಯೋದು ಉತ್ತಮ?

ಆಪರೇಷನ್‌ ಸಿಂದೂರ್‌ ಬಳಿಕ ಡಿಫೆನ್ಸ್‌ ಸ್ಟಾಕ್ಸ್‌ಗಳ ದರದಲ್ಲಿ ಹೆಚ್ಚಳವಾಗಿದೆ. ಡ್ರೋನ್‌ ತಯಾರಿಸುವ ಕಂಪನಿಗಳ ಷೇರುಗಳೂ ಏರಿಕೆಯಾಗುತ್ತಿವೆ. ಈ ನಡುವೆ ರೈಲ್ವೆ ವಲಯದ ಷೇರುಗಳ ದರಗಳೂ ಏರಿಕೆಯಾಗುತ್ತಿರುವುದು ಗಮನಾರ್ಹ.

ರೈಲ್ವೆ ವಲಯಕ್ಕೆ ಸಂಬಂಧಿಸಿ ಇತ್ತೀಚೆಗೆ ಸರ್ಕಾರದ ಪಾಲಿಸಿಗಳಲ್ಲಿ ಹೊಸ ಬದಲಾವಣೆ ಆಗದಿದ್ದರೂ, ಹೊಸ ಬಜೆಟ್‌ ಬೂಸ್ಟ್‌ ಆಗಿರದಿದ್ದರೂ, ಡಿಫೆನ್ಸ್‌ಗೂ ರೈಲ್ವೆಗೂ ನೇರ ಸಂಬಂಧ ಇರದಿದ್ದರೂ, ಆಪರೇಷನ್‌ ಸಿಂದೂರ್‌ ಬಳಿಕ ರೈಲ್ವೆ ಸ್ಟಾಕ್ಸ್‌ ದರ ಹಚ್ಚಳವಾಗುತ್ತಿದೆ. ತಜ್ಞರ ಪ್ರಕಾರ ರೈಲ್ವೆ ಷೇರುಗಳ ಫಂಡಮೆಂಟಲ್‌ ಅಂಶಗಳು ಪೂರಕವಾಗಿರುವುದು ಇದಕ್ಕೆ ಕಾರಣ. ಉದಾಹರಣೆಗೆ RITES ಷೇರು ದರದಲ್ಲಿ ಕೇವಲ 6 ದಿನಗಳಲ್ಲಿ 36% ಏರಿಕೆಯಾಗಿದೆ. RVNL ಷೇರು ದರ ಮೇ 9 ಮತ್ತು 19 ರ ನಡುವೆ 30% ಹೆಚ್ಚಳವಾಗಿದೆ.

ಅಮೆರಿಕ ಮೂಲದ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮೋರ್ಗಾನ್‌ ಸ್ಟಾನ್ಲಿಯ ಪ್ರಕಾರ ಸೆನ್ಸೆಕ್ಸ್‌ 2026ರ ಜೂನ್‌ ವೇಳೆಗೆ 89,000 ಅಂಕಗಳ ಗಡಿಯನ್ನು ಸುಲಭವಾಗಿ ದಾಟಲಿದೆ. ಒಂದು ವೇಳೆ 1 ಲಕ್ಷ ಅಂಕಗಳ ಗಡಿಯನ್ನೂ ದಾಟುವ ನಿರೀಕ್ಷೆ ಇದೆ ಎಂದು ಮೋರ್ಗಾನ್‌ ಸ್ಟಾನ್ಲಿಯ ವರದಿ ತಿಳಿಸಿದೆ.

ಕಚ್ಚಾ ತೈಲ ದರಗಳು ಮುಂದಿನ ಒಂದು ವರ್ಷದಲ್ಲಿ ಬ್ಯಾರೆಲ್‌ಗೆ 65 ಡಾಲರ್‌ಗಿಂತ ಕೆಳಗಿದ್ದರೆ, ಜಿಎಸ್‌ಟಿ ದರಗಳು ಇಳಿಕೆಯಾದರೆ, ಗ್ಲೋಬಲ್‌ ಟ್ರೇಡ್‌ ವಾರ್‌ ಉಪಶಮನವಾದರೆ ಸೆನ್ಸೆಕ್ಸ್‌ ಮುಂದಿನ 12 ತಿಂಗಳುಗಳಲ್ಲಿ 1 ಲಕ್ಷದ ಗಡಿ ದಾಟಲಿದೆ ಎಂದು ಮೋರ್ಗಾನ್‌ ಸ್ಟಾನ್ಲಿ ವರದಿ ತಿಳಿಸಿದೆ. ವಿಶೇಷ ಏನೆಂದರೆ ಭಾರತವು 2025-26ರಲ್ಲಿ 6.2% ಜಿಡಿಪಿ ಗ್ರೋತ್‌ ಸಾಧಿಸಬಹುದು ಎಂದು ತಿಳಿಸಿದೆ.

ಇಂಡಿಗೊ ಏರ್‌ಲೈನ್ಸ್‌ ಅನ್ನು ನಡೆಸುತ್ತಿರುವ ಇಂಟರ್‌ ಗ್ಲೋಬ್‌ ಏವಿಯೇಶನ್‌ ಸಂಸ್ಥೆಯು ನಾಲ್ಕನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ್ದು, ಜನವರಿ-ಮಾರ್ಚ್‌ ಅವಧಿಯಲ್ಲಿ 3,067 ಕೋಟಿ ರುಪಾಯಿ ನಿವ್ವಳ ಲಾಭವನ್ನು ಗಳಿಸಿದೆ. ನಿವ್ವಳ ಲಾಭದಲ್ಲಿ 62% ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,895 ಕೋಟಿ ರುಪಾಯಿ ನಿವ್ವಳ ಲಾಭ ಆಗಿತ್ತು. ಕಂಪನಿಯು ಪ್ರತಿ ಷೇರಿಗೆ 10 ರುಪಾಯಿಗಳ ಡಿವಿಡೆಂಡ್‌ ಅನ್ನು ಘೋಷಿಸಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »